ವಿರಾಟ್​ಗೆ ಬಿಗ್ ಶಾಕ್: ಗಿಲ್-ಜೈಸ್ವಾಲ್​ಗಿಂತ ಕೊಹ್ಲಿಗೆ ಕಡಿಮೆ ವೇತನ

ವಿರಾಟ್​ಗೆ ಬಿಗ್ ಶಾಕ್: ಗಿಲ್-ಜೈಸ್ವಾಲ್​ಗಿಂತ ಕೊಹ್ಲಿಗೆ ಕಡಿಮೆ ವೇತನ

10 March 2024

Author: Vinay Bhat

TV9 Kannada Logo For Webstory First Slide
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ 4-1 ಅಂತರದಲ್ಲಿ ಭರ್ಜರಿ ಜಯ ಸಾಧಿಸಿದೆ. ಧರ್ಮಶಾಲಾ ಟೆಸ್ಟ್‌ನಲ್ಲಿ ಭಾರತ ಇನ್ನಿಂಗ್ಸ್ ಮತ್ತು 64 ರನ್‌ಗಳಿಂದ ಗೆದ್ದಿತು.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ 4-1 ಅಂತರದಲ್ಲಿ ಭರ್ಜರಿ ಜಯ ಸಾಧಿಸಿದೆ. ಧರ್ಮಶಾಲಾ ಟೆಸ್ಟ್‌ನಲ್ಲಿ ಭಾರತ ಇನ್ನಿಂಗ್ಸ್ ಮತ್ತು 64 ರನ್‌ಗಳಿಂದ ಗೆದ್ದಿತು.

ಭಾರತಕ್ಕೆ ಜಯ

ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ತಂಡದ ಭಾಗವಾಗಿರಲಿಲ್ಲ. ಅವರು ಎರಡನೇ ಮಗುವಿನ ಜನನದ ಕಾರಣ ಎಲ್ಲಾ 5 ಪಂದ್ಯಗಳಿಂದ ಹೊರಗುಳಿದಿದ್ದರು.

ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ತಂಡದ ಭಾಗವಾಗಿರಲಿಲ್ಲ. ಅವರು ಎರಡನೇ ಮಗುವಿನ ಜನನದ ಕಾರಣ ಎಲ್ಲಾ 5 ಪಂದ್ಯಗಳಿಂದ ಹೊರಗುಳಿದಿದ್ದರು.

ಕೊಹ್ಲಿ ಅಲಭ್ಯ

ಇದಕ್ಕೆ ಕಾರಣ ಬಿಸಿಸಿಐ ಹೊಸ ನಿರ್ಧಾರ. ಇದರಲ್ಲಿ ಟೆಸ್ಟ್ ಆಡುವ ಆಟಗಾರರ ವೇತನವನ್ನು ಹೆಚ್ಚಿಸಲಾಗಿದೆ. ಇದರಿಂದಾಗಿ ಈ ವರ್ಷ ವಿರಾಟ್ ಗಳಿಕೆಯ ಮೇಲೆ ಪರಿಣಾಮ ಬೀರಲಿದೆ.

ಇದಕ್ಕೆ ಕಾರಣ ಬಿಸಿಸಿಐ ಹೊಸ ನಿರ್ಧಾರ. ಇದರಲ್ಲಿ ಟೆಸ್ಟ್ ಆಡುವ ಆಟಗಾರರ ವೇತನವನ್ನು ಹೆಚ್ಚಿಸಲಾಗಿದೆ. ಇದರಿಂದಾಗಿ ಈ ವರ್ಷ ವಿರಾಟ್ ಗಳಿಕೆಯ ಮೇಲೆ ಪರಿಣಾಮ ಬೀರಲಿದೆ.

ಕೊಹ್ಲಿಗೆ ಶಾಕ್

ಧರ್ಮಶಾಲಾದಲ್ಲಿ ನಡೆದ ಗೆಲುವಿನ ನಂತರ ಬಿಸಿಸಿಐ, ಒಂದು ಋತುವಿನಲ್ಲಿ 50 ಪ್ರತಿಶತಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡುವವರಿಗೆ 30 ಲಕ್ಷ ವೇತನ ನಿಗದಿ ಮಾಡಿದೆ.

ವೇತನ ಹೆಚ್ಚಳ

ಒಂದು ಋತುವಿನಲ್ಲಿ 75 ಪ್ರತಿಶತಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡುವವರಿಗೆ 45 ಲಕ್ಷ ರೂ. ಸಿಗಲಿದೆ. ಇದಕ್ಕಿಂತ ಕಡಿಮೆ ಪಂದ್ಯಗಳನ್ನು ಆಡುವವರು ಮೊದಲಿನಂತೆ 15 ಲಕ್ಷ ಪಡೆಯುತ್ತಾರೆ.

45 ಲಕ್ಷ ರೂ.

ಈ ಋತುವಿನಲ್ಲಿ, ಟೀಮ್ ಇಂಡಿಯಾಕ್ಕೆ ಕೇವಲ 2 ಟೆಸ್ಟ್ ಬಾಕಿಯಿದೆ. ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್ ಪಂದ್ಯಗಳನ್ನು ಆಡಲಿದೆಯಷ್ಟೆ.

2 ಪಂದ್ಯ ಬಾಕಿ

ಈ ಋತುವಿನಲ್ಲಿ ಭಾರತ 7 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ವಿರಾಟ್ ಕೇವಲ 2 ಪಂದ್ಯಗಳನ್ನು ಆಡಿದ್ದಾರೆ. ಬಾಂಗ್ಲಾ ವಿರುದ್ಧ 2 ಟೆಸ್ಟ್ ಆಡಿದರೆ 4 ಪಂದ್ಯಗಳಾಗಲಿದ್ದು, ಶುಲ್ಕ 60 ಲಕ್ಷ ಮಾತ್ರ.

ಕೊಹ್ಲಿಗೆ ಎಷ್ಟು?

ಜೈಸ್ವಾಲ್, ಗಿಲ್, ರೋಹಿತ್ ಅವರಂತಹ ಸ್ಟಾರ್‌ಗಳು 7 ಟೆಸ್ಟ್ ಆಡಿದ್ದಾರೆ. ಉಳಿದ 2 ಟೆಸ್ಟ್ ಆಡಿದ ನಂತರ ಅವರು ಪ್ರತಿ ಪಂದ್ಯಕ್ಕೆ 45 ಲಕ್ಷ ರೂ. ನಂತೆ 4.05 ಕೋಟಿ ರೂ. ವರೆಗೆ ಗಳಿಸಬಹುದು.

ಗಿಲ್-ಜೈಸ್ವಾಲ್