100ನೇ ಟೆಸ್ಟ್ ಪಂದ್ಯದಲ್ಲಿ ಸೊನ್ನೆ ಸುತ್ತಿದ 8 ಬ್ಯಾಟರ್‌ಗಳು

09-March-2024

Author: Vinay Bhat

ಭಾರತದ ಮಾಜಿ ಆಟಗಾರ ದಿಲೀಪ್ ವೆಂಗ್‌ಸರ್ಕರ್ ತಮ್ಮ 100ನೇ ಟೆಸ್ಟ್‌ನಲ್ಲಿ ಡಕ್‌'ಗೆ ಔಟಾದ ಮೊದಲ ಬ್ಯಾಟರ್‌ ಆಗಿದ್ದಾರೆ.

ದಿಲೀಪ್ ವೆಂಗ್‌ಸರ್ಕರ್

ಆಸ್ಟ್ರೇಲಿಯಾದ ಮೊದಲ ವಿಶ್ವಕಪ್ ವಿಜೇತ ನಾಯಕ ಅಲನ್ ಬಾರ್ಡರ್ ಅವರು ತಮ್ಮ 100 ನೇ ಟೆಸ್ಟ್‌ನಲ್ಲಿ ಸೊನ್ನೆ ಸುತ್ತಿದ್ದರು.

ಅಲನ್ ಬಾರ್ಡರ್

ವೆಸ್ಟ್ ಇಂಡೀಸ್‌ ತಂಡದ ಆಟಗಾರ ಕರ್ಟ್ನಿ ವಾಲ್ಷ್ ಅವರು ತಮ್ಮ 100 ನೇ ಟೆಸ್ಟ್‌ನಲ್ಲಿ ಡಕ್​ಗೆ ಔಟಾಗಿದ್ದರು.

bಕರ್ಟ್ನಿ ವಾಲ್ಷ್

ಆಸ್ಟ್ರೇಲಿಯಾದ ಲೆಜೆಂಡರಿ ನಾಯಕ ಮಾರ್ಕ್ ಟೇಲರ್ ಕೂಡ ತಮ್ಮ 100ನೇ ಟೆಸ್ಟ್‌ನಲ್ಲಿ ಡಕ್‌ ಗಳಿಸಿದ್ದರು.

ಮಾರ್ಕ್ ಟೇಲರ್

ನ್ಯೂಝಿಲೆಂಡ್‌ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ತಮ್ಮ 100 ನೇ ಟೆಸ್ಟ್‌ನಲ್ಲಿ ಸೊನ್ನೆ ಸುತ್ತಿದ್ದರು.

ಸ್ಟೀಫನ್ ಫ್ಲೆಮಿಂಗ್

ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ದಿಗ್ಗಜ ಬ್ಯಾಟರ್, ಮಾಜಿ ನಾಯಕ ಅಲಸ್ಟೈರ್ ಕುಕ್ ತಮ್ಮ 100ನೇ ಟೆಸ್ಟ್‌ನಲ್ಲಿ ಸೊನ್ನೆಗೆ ಔಟಾಗಿದ್ದರು.

ಅಲೆಸ್ಟರ್ ಕುಕ್

ನ್ಯೂಝಿಲೆಂಡ್ ತಂಡದ ದಿಗ್ಗಜ ಬ್ಯಾಟರ್ ಬ್ರೆಂಡನ್ ಮೆಕಲಮ್ ಕೂಡ ತಮ್ಮ 100ನೇ ಟೆಸ್ಟ್‌ನಲ್ಲಿ ನೊನ್ನೆ ಸುತ್ತಿದ್ದರು.

ಬ್ರೆಂಡನ್ ಮೆಕಲಮ್

ರವಿಚಂದ್ರನ್ ಅಶ್ವಿನ್ ಇಂಗ್ಲೆಂಡ್ ವಿರುದ್ಧದ ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಡಕ್ ಆಗಿದ್ದಾರೆ. ಅಶ್ವಿನ್ ಅವರು ದಿಲೀಪ್ ವೆಂಗ್‌ಸರ್ಕರ್ ನಂತರ ಈ ಪಟ್ಟಿಗೆ ಪ್ರವೇಶಿಸಿದ ಎರಡನೇ ಭಾರತೀಯ.

ರವಿಚಂದ್ರನ್ ಅಶ್ವಿನ್