ಕೊಹ್ಲಿ ದಾಖಲೆ ಪುಡಿ ಪುಡಿ: RCB ಸೇರಿದ ತಕ್ಷಣ ಇತಿಹಾಸ ರಚಿಸಿದ ಗ್ರೀನ್

28-November-2023

ಇಂಡಿಯನ್ ಪ್ರೀಮಿಯರ್ ಲೀಗ್ 2024 ಹರಾಜಿಗೂ ಮುನ್ನ ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ಆಟಗಾರರ ಟ್ರೇಡ್ ಜೋರು ಸದ್ದು ಮಾಡುತ್ತಿದೆ.

ಐಪಿಎಲ್ 2024

ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಫ್ರಾಂಚೈಸಿ ಗುಜರಾತ್ ತಂಡದಿಂದ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಇದಕ್ಕೆ ಬದಲಾಗಿ ಕ್ಯಾಮರೂನ್ ಗ್ರೀನ್ ಅವರನ್ನು ಕೈಬಿಟ್ಟಿದೆ.

ಹಾರ್ದಿಕ್ ಪಾಂಡ್ಯ

RCB ಫ್ರಾಂಚೈಸಿ ಮುಂಬೈ ತಂಡದಲ್ಲಿದ್ದ ಆಸ್ಟ್ರೇಲಿಯಾ ಸ್ಫೋಟಕ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಖರೀದಿ ಮಾಡಿದೆ. ಇದರ ಬೆನ್ನಲ್ಲೇ ದಾಖಲೆ ನಿರ್ಮಾಣವಾಗಿದೆ.

ಆರ್​ಸಿಬಿಗೆ ಗ್ರೀನ್

ಕ್ಯಾಮರೂನ್ ಗ್ರೀನ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 17.5 ಕೋಟಿ ರೂ. ಗೆ ವ್ಯಾಪಾರ ಮಾಡಿತು.

17.5 ಕೋಟಿ ರೂ.

ಕ್ಯಾಮರೂನ್ ಗ್ರೀನ್ ಇದೀಗ RCB ತಂಡದ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದು, ಕೊಹ್ಲಿ ದಾಖಲೆ ಮುರಿದಿದ್ದಾರೆ.

ಕೊಹ್ಲಿ ದಾಖಲೆ ಉಡೀಸ್

ಐಪಿಎಲ್ 2018 ರ ಹರಾಜಿನ ಮೊದಲು ಕೊಹ್ಲಿಯನ್ನು 17 ಕೋಟಿ ರೂ. ಗೆ ಆರ್‌ಸಿಬಿ ಉಳಿಸಿಕೊಂಡಿತ್ತು. ಇದೀಗ 17.5 ಕೋಟಿಗೆ ಗ್ರೀನ್ ಪಡೆದಿರುವುದು ದಾಖಲೆ ಆಗಿದೆ.

ಕೊಹ್ಲಿ 17 ಕೋಟಿ

RCB ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರರ ಸಾಲಿನಲ್ಲಿ ಕ್ಯಾಮರೂನ್ ಗ್ರೀನ್ (17.5 ಕೋಟಿ ರೂ.) ಮೊದಲ ಸ್ಥಾನದಲ್ಲಿದ್ದಾರೆ. 2ನೇ ಸ್ಥಾನದಲ್ಲಿ ಕೊಹ್ಲಿ ಇದ್ದಾರೆ.

RCB ದುಬಾರಿ ಪ್ಲೇಯರ್ಸ್

RCBಯ ದುಬಾರಿ ಆಟಗಾರರ ಪೈಕಿ ಖೈಲ್ ಜೇಮಿಸನ್ (15 ಕೋಟಿ ರೂ.) 3ನೇ ಸ್ಥಾನದಲ್ಲಿದ್ದರೆ, ನಂತರದಲ್ಲಿ ಮ್ಯಾಕ್ಸ್‌ವೆಲ್ (14.25 ಕೋಟಿ), ಯುವರಾಜ್ (14 ಕೋಟಿ) ಇದ್ದಾರೆ.

ಖೈಲ್ ಜೆಮಿಸನ್