ಸುರೇಶ್ ರೈನಾಗೆ ಹುಟ್ಟುಹಬ್ಬದ ಸಂಭ್ರಮ: ಇವರ ರೆಸ್ಟೋರೆಂಟ್ ಹೇಗಿದೆ ನೋಡಿ

27 November 2023

ಇಂದು ಭಾರತ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್‌ಮನ್ ಸುರೇಶ್ ರೈನಾ ಅವರ ಜನ್ಮದಿನ. ಇವರು ಉತ್ತರ ಪ್ರದೇಶದ ಮುರಾದ್ ನಗರದಲ್ಲಿ 27 ನವೆಂಬರ್ 1986 ರಂದು ಜನಿಸಿದರು.

ಸುರೇಶ್ ರೈನಾ ಹುಟ್ಟುಹಬ್ಬ

ಮಧ್ಯಮ ಕ್ರಮಾಂಕದ ಪ್ರಮುಖ ಬ್ಯಾಟ್ಸ್‌ಮನ್ ಆಗಿದ್ದ ರೈನಾ ಅವರು ಧೋನಿ ನಾಯಕತ್ವದಲ್ಲಿ 2011 ರ ಏಕದಿನ ವಿಶ್ವಕಪ್ ಗೆದ್ದಾಗ ಭಾರತ ಕ್ರಿಕೆಟ್ ತಂಡದ ಭಾಗವಾಗಿದ್ದರು.

ವಿಶ್ವ ಚಾಂಪಿಯನ್ ರೈನಾ

2020 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ರೈನಾ ಐಪಿಎಲ್'ನಿಂದಲೂ ದೂರ ಸರಿದರು. ಬಳಿಕ ಕಾಮೆಂಟರಿ ಮಾಡುವುದನ್ನು ಕಾಣಬಹುದು.

ಕಾಮೆಂಟರಿ

ಕಾಮೆಂಟರಿ ಜೊತೆಗೆ ರೈನಾ ಇತ್ತೀಚೆಗೆ ನೆದರ್ಲ್ಯಾಂಡ್'ನ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ರೆಸ್ಟೋರೆಂಟ್ ಅನ್ನು ತೆರೆದಿದ್ದಾರೆ. ರೆಸ್ಟೊರೆಂಟ್‌ನ ಹೆಸರು ರೈನಾ... ಪಾಕಶಾಲೆ.

ರೆಸ್ಟೋರೆಂಟ್

ರೈನಾ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಸಾಕಷ್ಟು ಸಮಯವನ್ನು ಕಳೆಯುತ್ತಾರೆ. ಅದಕ್ಕಾಗಿಯೇ ಅವರು ವಿದೇಶದಲ್ಲಿ ಭಾರತೀಯ ಆಹಾರವನ್ನು ಪ್ರಚಾರ ಮಾಡುತ್ತಿದ್ದಾರೆ.

ಭಾರತೀಯ ರೆಸ್ಟೋರೆಂಟ್

ರೈನಾ ಅವರನ್ನು ಮಿಸ್ಟರ್ ಐಪಿಎಲ್ ಎಂದೂ ಕರೆಯುತ್ತಾರೆ. ಅವರು ಐಪಿಎಲ್‌ನಲ್ಲಿ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಭಾಗವಾಗಿದ್ದರು.

ಮಿ. ಐಪಿಎಲ್ ರೈನಾ

ರೈನಾ ಭಾರತ ಪರ 18 ಟೆಸ್ಟ್ ಪಂದ್ಯಗಳಲ್ಲಿ 768 ರನ್ ಗಳಿಸಿದ್ದಾರೆ. 226 ODI ಪಂದ್ಯಗಳಲ್ಲಿ 35.31 ಸರಾಸರಿಯಲ್ಲಿ 5615 ರನ್ ಗಳಿಸಿದ್ದಾರೆ. 78 ಟಿ20ಯಲ್ಲಿ 1605 ರನ್ ಗಳಿಸಿದ್ದಾರೆ.

ವೃತ್ತಿ ಜೀವನ