ಮಡದಿಗಾಗಿ ಕೋಟಿ ಬೆಲೆಯ ಐಷಾರಾಮಿ ಫ್ಲ್ಯಾಟ್ ಖರೀದಿಸಿದ ಕೆಎಲ್ ರಾಹುಲ್

17 July 2024

Pic credit: Google

ಪೃಥ್ವಿ ಶಂಕರ

Pic credit: Google

ಟೀಂ ಇಂಡಿಯಾದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಮುಂಬೈ ಸಮೀಪದ ಪಾಲಿ ಹಿಲ್‌ನಲ್ಲಿ ಐಷಾರಾಮಿ ಫ್ಲ್ಯಾಟ್ ಖರೀದಿಸಿದ್ದಾರೆ.

Pic credit: Google

ಕೆಎಲ್ ರಾಹುಲ್ ಅವರ ಹೊಸ ಫ್ಲಾಟ್ ಬೆಲೆ 20 ಕೋಟಿ ರೂ. ಎಂದು ಹೇಳಲಾಗುತ್ತಿದ್ದು, ರಾಹುಲ್ ಅವರು ತಮ್ಮ ಪತ್ನಿ ಅಥಿಯಾ ಶೆಟ್ಟಿಯೊಂದಿಗೆ ಇಲ್ಲಿ ವಾಸಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Pic credit: Google

ಕೆಎಲ್ ರಾಹುಲ್ ಅವರ ಫ್ಲಾಟ್ 3350 ಚದರ ಅಡಿ ಪ್ರದೇಶದಲ್ಲಿ ನಿರ್ಮಾಣವಾಗಿದ್ದು, ಸಂಧು ಬಿಲ್ಡರ್ಸ್ ನಿರ್ಮಿಸಿದ್ದಾರೆ.

Pic credit: Google

ಕೆಎಲ್ ರಾಹುಲ್ ಮನೆ ಖರೀದಿಸಿರುವ ಪ್ರದೇಶದಲ್ಲಿ ಬಾಲಿವುಡ್​ನ ಹಲವು ದೊಡ್ಡ ಸ್ಟಾರ್​ಗಳು ವಾಸವಾಗಿದ್ದಾರೆ.

Pic credit: Google

ಬಾಲಿವುಡ್ ಸ್ಟಾರ್ ಅಮೀರ್ ಖಾನ್ ಪಾಲಿ ಹಿಲ್​ನಲ್ಲಿ ಸಾಕಷ್ಟು ಆಸ್ತಿ ಹೊಂದಿದ್ದಾರೆ. ಕಳೆದ ತಿಂಗಳಷ್ಟೇ ಅಮೀರ್ ಅಲ್ಲಿ 9.75 ಕೋಟಿ ರೂಪಾಯಿ ಮೌಲ್ಯದ ಅಪಾರ್ಟ್‌ಮೆಂಟ್ ಖರೀದಿಸಿದ್ದರು.

Pic credit: Google

ಕೆಎಲ್ ರಾಹುಲ್ ಶೀಘ್ರದಲ್ಲೇ ಟೀಂ ಇಂಡಿಯಾದ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ರೀಲಂಕಾ ಪ್ರವಾಸದಲ್ಲಿ ಅವರು ಏಕದಿನ ಸರಣಿಯಲ್ಲಿ ಆಡಲಿದ್ದಾರೆ.

Pic credit: Google

ವಿಶ್ವ ಕ್ರಿಕೆಟ್​ನ ರನ್ ಮಷಿನ್ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು.