ಸಿಎಸ್‌ಕೆಯ ಮೂರನೇ ಆಟಗಾರ ಇಂಜುರಿ: ಧೋನಿಯ ಟೆನ್ಶನ್
19 March2024
Author: Vinay Bhat
ಐಪಿಎಲ್ ಆರಂಭಕ್ಕೂ ಮುನ್ನ ಸಿಎಸ್‌ಕೆ ತಂಡಕ್ಕೆ ಒಂದರ ಹಿಂದೆ ಒಂದರಂತೆ ಆಘಾತ ಉಂಟಾಗುತ್ತಿದೆ. ಇದೀಗ ತಂಡದ ಮೂರನೇ ಆಟಗಾರ ಮುಸ್ತಾಫಿಜುರ್ ರೆಹಮಾನ್ ಇಂಜುರಿಗೆ ಒಳಗಾಗಿದ್ದಾರೆ.
ಸಿಎಸ್‌ಕೆ ಇಂಜುರಿ
ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ 3ನೇ ಏಕದಿನ ಪಂದ್ಯದ ವೇಳೆ ರೆಹಮಾನ್ ನಿಲ್ಲಲು ಕೂಡ ಸಾಧ್ಯವಾಗದೆ ಮೈದಾನದಿಂದ ಸ್ಟ್ರೆಚರ್ ಮೂಲಕ ಕರೆದುಕೊಂಡು ಹೋಗಲಾಯಿತು.
ಮುಸ್ತಫಿಜುರ್ ರೆಹಮಾನ್
ಐಪಿಎಲ್ 2024 ರ ಹರಾಜಿನಲ್ಲಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಸಿಎಸ್‌ಕೆ 2 ಕೋಟಿ ರೂ. ಗೆ ಖರೀದಿ ಮಾಡಿತ್ತು. ಇದೀಗ ಇವರು ಐಪಿಎಲ್ಗೆ ಅನುಮಾನವಾಗಿದೆ.
2 ಕೋಟಿ ರೂ.
ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್ ವಿರುದ್ಧದ ಟಿ20ಐ ಸರಣಿಯ ವೇಳೆ ಸಿಎಸ್‌ಕೆಯ ಅಗ್ರ ಕ್ರಮಾಂಕದ ಪಿಲ್ಲರ್ ಡೆವೊನ್ ಕಾನ್ವೇ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು.
ಡೆವೊನ್ ಕಾನ್ವೇ
ಡೆವೊನ್ ಕಾನ್ವೇ ಅವರು ಚೆನ್ನೈ ಸೂಪರ್ ಕಿಂಗ್ಸ್ಗಾಗಿ ಐಪಿಎಲ್ 2024 ರ ಸಂಪೂರ್ಣ ಮೊದಲಾರ್ಧವನ್ನು ಕಳೆದುಕೊಳ್ಳುತ್ತಾರೆ ಎಂದು ವರದಿಯಾಗಿದೆ.
ಡೆವೊನ್ ಕಾನ್ವೇ
ಡೆವೊನ್ ಕಾನ್ವೇಯ ಜಾಗಕ್ಕೆ ನ್ಯೂಝಿಲೆಂಡ್ ಬ್ಯಾಟರ್ ರಚಿನ್ ರವೀಂದ್ರ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಇವರಿಗೆ ಚೊಚ್ಚಲ ಐಪಿಎಲ್.
ರಚಿನ್ ರವೀಂದ್ರ
ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟಿ20 ಪಂದ್ಯದ ವೇಳೆ ಶ್ರೀಲಂಕಾದ ಸ್ಟಾರ್ ವೇಗದ ಬೌಲರ್ ಮಥೀಶ ಪತಿರಾನ ಅವರ ಮಂಡಿರಜ್ಜು ಗಾಯಗೊಂಡಿದ್ದಾರೆ.
ಮಥೀಶ ಪತಿರಾನ
ಐಪಿಎಲ್ 2024 ರ ಮೊದಲ ನಾಲ್ಕರಿಂದ ಐದು ವಾರಗಳವರೆಗೆ ಮಥೀಶ ಪತಿರಾನ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಐಪಿಎಲ್ 2023 ರಲ್ಲಿ ಇವರು 19 ವಿಕೆಟ್ ಕಿತ್ತಿದ್ದರು.
ಮಥೀಶ ಪತಿರಾನ
ಐಪಿಎಲ್ 2024 ರಲ್ಲಿ ಕೊಹ್ಲಿ ಮುರಿಯಲಿರುವ ದಾಖಲೆಗಳ ಪಟ್ಟಿ ನೋಡಿ