ಐಪಿಎಲ್ 2024 ರಲ್ಲಿ ಕೊಹ್ಲಿ ಮುರಿಯಲಿರುವ ದಾಖಲೆಗಳ ಪಟ್ಟಿ ನೋಡಿ

18-March-2024

Author: Vinay Bhat

ಮಾರ್ಚ್ 22 ರಂದು ಪ್ರಾರಂಭವಾಗಲಿರುವ ಐಪಿಎಲ್ 2024 ರ ಋತುವಿನಲ್ಲಿ ವಿರಾಟ್ ಕೊಹ್ಲಿ ಆರ್'ಸಿಬಿಯನ್ನು ಪ್ರತಿನಿಧಿಸಲು ಸಿದ್ಧರಾಗಿದ್ದಾರೆ.

ವಿರಾಟ್ ಕೊಹ್ಲಿ

2024ರ ಐಪಿಎಲ್ ಸೀಸನ್‌ನಲ್ಲಿ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಮುರಿಯುವ ಅವಕಾಶವನ್ನು ಹೊಂದಿದ್ದಾರೆ. ಇದರಲ್ಲಿ 5 ಪ್ರಮುಖ ದಾಖಲೆಗಳ ಪಟ್ಟಿ ಇಲ್ಲಿದೆ.

ಕೊಹ್ಲಿ ದಾಖಲೆ

ಟಿ20 ಪಂದ್ಯಗಳಲ್ಲಿ 12,000 ರನ್ ಪೂರೈಸಲು ಕೊಹ್ಲಿಗೆ ಆರು ರನ್‌ಗಳ ಅಗತ್ಯವಿದೆ. ಅವರು ಈ ಸಾಧನೆ ಮಾಡಿದ ಮೊದಲ ಭಾರತೀಯ ಮತ್ತು ಒಟ್ಟಾರೆ 6ನೇ ಬ್ಯಾಟರ್ ಆಗಲಿದ್ದಾರೆ.

ಟಿ20ಯಲ್ಲಿ 12,000 ರನ್

ಕೊಹ್ಲಿ ಐಪಿಎಲ್‌ನಲ್ಲಿ 8,000 ರನ್ ಗಳಿಸಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಮೈಲಿಗಲ್ಲು ಸಾಧಿಸಲು ಅವರಿಗೆ ಇನ್ನೂ 737 ರನ್‌ಗಳ ಅಗತ್ಯವಿದೆ.

ಐಪಿಎಲ್‌ನಲ್ಲಿ 8000 ರನ್

ಕೊಹ್ಲಿ ಐಪಿಎಲ್ 2024 ರಲ್ಲಿ ಕನಿಷ್ಠ 13 ಪಂದ್ಯಗಳನ್ನು ಆಡುವಲ್ಲಿ ಯಶಸ್ವಿಯಾದರೆ, ಐಪಿಎಲ್ ಇತಿಹಾಸದಲ್ಲಿ ಒಂದು ತಂಡಕ್ಕಾಗಿ 250 ಪಂದ್ಯಗಳನ್ನು ಆಡಿದ ಮೊದಲ ಕ್ರಿಕೆಟಿಗ ಆಗಲಿದ್ದಾರೆ.

250 ಐಪಿಎಲ್

ಟಿ20ಯಲ್ಲಿ ನೂರು 50 ಪ್ಲಸ್ ಸ್ಕೋರ್‌ಗಳನ್ನು ಗಳಿಸಿದ ಮೊದಲ ಭಾರತೀಯ ಮತ್ತು ಮೂರನೇ ಕ್ರಿಕೆಟಿಗನಾಗಲು ವಿರಾಟ್ ಕೊಹ್ಲಿಗೆ ಒಂದು ಅರ್ಧಶತಕದ ಅಗತ್ಯವಿದೆ.

100 50+ ಸ್ಕೋರ್‌

ಕೊಹ್ಲಿ 9 ಅರ್ಧಶತಕಗಳನ್ನು ಗಳಿಸುವಲ್ಲಿ ಯಶಸ್ವಿಯಾದರೆ, ಅವರು ಟಿ20 ಪಂದ್ಯಗಳಲ್ಲಿ 100 ಅರ್ಧಶತಕ ಸಿಡಿಸಿದ ಮೊದಲ ಭಾರತೀಯ ಮತ್ತು ಎರಡನೇ ಕ್ರಿಕೆಟಿಗರಾಗುತ್ತಾರೆ.

100 ಅರ್ಧ ಶತಕ