21-10-2023

ಕೊಹ್ಲಿ ಹತ್ತಿರ ಬಂದ ವಾರ್ನರ್: ದಾಖಲೆ ಸಮ-ಸಮ

ಆಸ್ಟ್ರೇಲಿಯಾ-ಪಾಕ್

ಐಸಿಸಿ ಏಕದಿನ ವಿಶ್ವಕಪ್'ನಲ್ಲಿ ಶುಕ್ರವಾರ ನಡೆದ 18ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ 62 ರನ್'ಗಳ ಭರ್ಜರಿ ಜಯ ಸಾಧಿಸಿತು.

ಆಸ್ಟ್ರೇಲಿಯಾ-ಪಾಕ್

ಐಸಿಸಿ ಏಕದಿನ ವಿಶ್ವಕಪ್'ನಲ್ಲಿ ಶುಕ್ರವಾರ ನಡೆದ 18ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ 62 ರನ್'ಗಳ ಭರ್ಜರಿ ಜಯ ಸಾಧಿಸಿತು.

ವಾರ್ನರ್ ಶತಕ

ಆಸೀಸ್ ಪರ ಸ್ಫೋಟಕ ಬ್ಯಾಟಿಂಗ್ ನಡೆಸಿದ ವಾರ್ನರ್ 124 ಎಸೆತಗಳಲ್ಲಿ 14 ಫೋರ್, 9 ಸಿಕ್ಸರ್​ನೊಂದಿಗೆ 163 ರನ್ ಚಚ್ಚಿದರು.

ದಾಖಲೆ

ಈ ಮನಮೋಹಕ ಶತಕದೊಂದಿಗೆ ವಾರ್ನರ್ ಕೆಲವು ದಾಖಲೆಗಳನ್ನು ಕೂಡ ಸೃಷ್ಟಿಸಿದ್ದಾರೆ. ವಿರಾಟ್ ಕೊಹ್ಲಿ ಜೊತೆ ಜಂಟಿ ಸ್ಥಾನ ಹಂಚಿಕೊಂಡಿದ್ದಾರೆ.

150+ ಸ್ಕೋರ್

48 ವರ್ಷಗಳ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ವಾರ್ನರ್ ಅವರು ಮೂರು ಬಾರಿ 150+ ಕ್ಕಿಂತ ಹೆಚ್ಚು ಸ್ಕೋರ್ ಮಾಡಿದ ಏಕೈಕ ಆಟಗಾರ.

ಕೊಹ್ಲಿ ಜೊತೆ ಸ್ಥಾನ

ಒಂದೇ ತಂಡದ ವಿರುದ್ಧ ಸತತ 4 ಶತಕಗಳನ್ನು ಗಳಿಸಿದ 2ನೇ ಆಟಗಾರ ವಾರ್ನರ್ ಆಗಿದ್ದಾರೆ. ಇದಕ್ಕೂ ಮೊದಲು ಈ ಸಾಧನೆ ಮಾಡಿದ ಏಕೈಕ ಆಟಗಾರ ವಿರಾಟ್ ಕೊಹ್ಲಿ.

ಆಸೀಸ್ 367

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ವಾರ್ನರ್ ಹಾಗೂ ಮಾರ್ಶ್ ಅವರ ಶತಕದ ನೆರವಿನಿಂದ 9 ವಿಕೆಟ್ ಕಳೆದುಕೊಂಡು 367 ರನ್ ಗಳಿಸಿತು.

ಪಾಕ್ 305

ಟಾರ್ಗೆಟ್ ಬೆನ್ನಟ್ಟಿದ ಪಾಕಿಸ್ತಾನ ಉತ್ತಮ ಆರಂಭ ಪಡೆದುಕೊಂಡಿದ್ದು ಬಿಟ್ಟರೆ ನಂತರ ಕುಸಿತ ಕಂಡಿತು. 45.3 ಓವರ್​ಗಳಲ್ಲಿ 305 ರನ್​ಗಳಿಗೆ ಆಲೌಟ್ ಆಯಿತು.

4ನೇ ಸ್ಥಾನ

ಆಸೀಸ್ ಇದೀಗ ಆಡಿರುವ ನಾಲ್ಕು ಪಂದ್ಯಗಳಲ್ಲಿ ತಲಾ ಎರಡು ಸೋಲು-ಗೆಲುವು ಕಂಡು 4 ಪಾಯಿಂಟ್​ನೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ.

ಕಿಂಗ್ ಕೊಹ್ಲಿಯಿಂದ ದಾಖಲೆಗಳ ಸುರಿಮಳೆ: ಇಲ್ಲಿದೆ ಪಟ್ಟಿ