ಕಿಂಗ್ ಕೊಹ್ಲಿಯಿಂದ ದಾಖಲೆಗಳ ಸುರಿಮಳೆ: ಇಲ್ಲಿದೆ ಪಟ್ಟಿ
20 October 2023
Pic Credit - Google
ಬಾಂಗ್ಲಾದೇಶ ವಿರುದ್ದದ ವಿಶ್ವಕಪ್ ಪಂದ್ಯದಲ್ಲಿ ಕೊಹ್ಲಿ 97 ಎಸೆತಗಳನ್ನು ಎದುರಿಸಿ 4 ಸಿಕ್ಸ್ ಹಾಗೂ 6 ಫೋರ್'ಗಳೊಂದಿಗೆ ಅಜೇಯ 103 ರನ್ ಬಾರಿಸಿದರು.
ವಿರಾಟ್ ಕೊಹ್ಲಿ
==============
ಮನಮೋಹಕ ಅಜೇಯ ಶತಕದೊಂದಿಗೆ ವಿರಾಟ್ ಕೊಹ್ಲಿ ಅನೇಕ ದಾಖಲೆ ಸೃಷ್ಟಿಸಿದ್ದಾರೆ. ಜೊತೆಗೆ ಸಚಿನ್ ರೆಕಾರ್ಡ್ ಪುಡಿಗಟ್ಟಿದ್ದಾರೆ.
ದಾಖಲೆ
==============
ಈ ಶತಕದೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ (577 ಇನ್ನಿಂಗ್ಸ್) ಅತೀ ವೇಗವಾಗಿ 26000 ರನ್ ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ.
26000 ರನ್
==============
ಇದಕ್ಕೂ ಮುನ್ನ ಈ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಸಚಿನ್ 601 ಇನಿಂಗ್ಸ್ಗಳಲ್ಲಿ 26 ಸಾವಿರ ರನ್ ಕಲೆಹಾಕಿದ್ದರು.
ಸಚಿನ್ ದಾಖಲೆ
==============
ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು 1,000 ರನ್ ಕಲೆಹಾಕಿದ ಮೊದಲ ಭಾರತೀಯ ಕೊಹ್ಲಿ ಆಗಿದ್ದಾರೆ.
3ನೇ ಕ್ರಮಾಂಕ
==============
ಐಸಿಸಿ ಈವೆಂಟ್‌ಗಳಲ್ಲಿ ಚೇಸಿಂಗ್ ಮಾಡುವಾಗ ಅತಿ ಹೆಚ್ಚು 50+ ರನ್ ಗಳಿಸಿದ ಆಟಗಾರ ಎಂಬ ಸಾಧನೆ ಕೂಡ ಕೊಹ್ಲಿ ಮಾಡಿದ್ದಾರೆ.
ಚೇಸ್ ಮಾಸ್ಟರ್
==============
ಇನ್ನು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು 50+ ಸ್ಕೋರ್ ಗಳಿಸಿದ ನಾಲ್ಕನೇ ಬ್ಯಾಟರ್ ವಿರಾಟ್ ಕೊಹ್ಲಿ ಆಗಿದ್ದಾರೆ.
50+ ಸ್ಕೋರ್
==============
ಬಾಂಗ್ಲಾದೇಶ ವಿರುದ್ಧದ ಈ ಪಂದ್ಯದಲ್ಲಿ ಭಾರತ 7 ವಿಕೆಟುಗಳ ಅಮೋಘ ಜಯ ಸಾಧಿಸಿ ಐಸಿಸಿ ವಿಶ್ವಕಪ್ನಲ್ಲಿ 8 ಅಂಕ ಸಂಪಾದಿಸಿದೆ.
ಭಾರತಕ್ಕೆ ಜಯ
==============
ಟೀಂ ಇಂಡಿಯಾಕ್ಕೆ ನಷ್ಟ ತಂದ ಕೊಹ್ಲಿ ಶತಕ..!
ಇನ್ನಷ್ಟು ಓದಿ