ಡೇವಿಡ್ ವಾರ್ನರ್ 10 ಮಿಲಿಯನ್ ಡಾಲರ್ ಮೌಲ್ಯದ ಮನೆ ಹೇಗಿದೆ ನೋಡಿ

02-January-2024

Author: Vinay Bhat

ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗ ಡೇವಿಡ್ ವಾರ್ನರ್ ಅಂತರಾಷ್ಟ್ರೀಯ ವೃತ್ತಿ ಜೀವನ ಕೊನೆಯ ಹಂತದಲ್ಲಿದ್ದಾರೆ. ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ವಾರ್ನರ್ ನಿವೃತ್ತಿ

ಡೇವಿಡ್ ವಾರ್ನರ್ ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗನಾದರೂ ಅವರಿಗೆ ಭಾರತ ಎಂದರೆ ಅಚ್ಚುಮೆಚ್ಚು. ಇವರಿಗೆ ಭಾರತದಲ್ಲಿ ಅನೇಕ ಅಭಿಮಾನಿಗಳಿದ್ದಾರೆ.

ಭಾರತದಲ್ಲಿ ಫೇಮಸ್

ಡೇವಿಡ್ ವಾರ್ನರ್ ಅವರ ಜೀವನಶೈಲಿಯ ಬಗ್ಗೆ ಮಾತನಾಡುವುದಾದರೆ, ಅವರು ತಮ್ಮ ಕುಟುಬಂದ ಜೊತೆ ಅದ್ದೂರಿ ಜೀವನವನ್ನು ನಡೆಸುತ್ತಿದ್ದಾರೆ.

ಅದ್ದೂರಿ ಜೀವನ

ವಾರ್ನರ್ ಅವರು ಸಿಡ್ನಿಯಲ್ಲಿ ಒಂದು ದೊಡ್ಡ ಬಂಗಲೆಯನ್ನು ಹೊಂದಿದ್ದಾರೆ. ಇದು ಸುಮಾರು 10 ಮಿಲಿಯನ್ ಡಾಲರ್ ಮೌಲ್ಯದ್ದಾಗಿದೆ.

ಮನೆ ಹೇಗಿದೆ

ವಾರ್ನರ್ ತನ್ನ ಪತ್ನಿ ಕ್ಯಾಂಡಿಸ್ ಮತ್ತು ಮೂವರು ಪುತ್ರಿಯರೊಂದಿಗೆ ಈ ಅದ್ಧೂರಿ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈ ಮನೆ ಕಟ್ಟಲು 6 ವರ್ಷ ತೆಗೆದುಕೊಳ್ಳಲಾಗಿದೆ.

6 ವರ್ಷಗಳಿಂದ ತಯಾರಿ

ಈ ಮನೆಯು ಏಳು ಅಂತಸ್ತಿನದ್ದಾಗಿದೆ. ಇದು ಖಾಸಗಿ ಬೀಚ್ ಅನ್ನು ಸಹ ಹೊಂದಿದ್ದು, ಸಮುದ್ರವು ಹತ್ತಿರದಲ್ಲಿದೆ. ಈ ಮನೆ ಸಿಡ್ನಿಯ ಟಾಪ್ 10 ಮನೆಗಳಲ್ಲಿ ಒಂದಾಗಿದೆ.

ಖಾಸಗಿ ಬೀಚ್

ವಾರ್ನರ್ ಪತ್ನಿ ಕ್ಯಾಂಡಿಸ್ ಸಹ ಕ್ರೀಡಾಪಟು, ಟಿವಿ ನಿರೂಪಕಿ ಮತ್ತು ನಟಿ ಆಗಿದ್ದಾರೆ. ಇವರ ಮೂವರು ಪುತ್ರಿಯರ ಹೆಸರು ಇಂಡಿ, ಇಸ್ಲಾ ಮತ್ತು ಐವಿ.

ವಾರ್ನರ್ ಪತ್ನಿ