ಕೇವಲ 50 ರೂ. ನೀಡಿ ಟೀಂ ಇಂಡಿಯಾ ಆಟಗಾರರನ್ನು ನೇರವಾಗಿ ನೋಡಿ..!

16 August 2024

Pic credit: Google

ಪೃಥ್ವಿ ಶಂಕರ

Pic credit: Google

ದೇಶದಲ್ಲಿ ವಿವಿದ ರಾಜ್ಯಗಳಲ್ಲಿ ನಡೆಯುತ್ತಿರುವ ಟಿ20 ಲೀಗ್​ಗಳ ಯಶಸ್ಸನ್ನು ಗಮನಿಸಿದ ದೆಹಲಿ ಕೂಡ ಈ ಬಾರಿಯಿಂದ ದೆಹಲಿ ಪ್ರೀಮಿಯರ್ ಲೀಗ್ ಆಯೋಜನೆ ಮಾಡಲು ಮುಂದಾಗಿದೆ.

Pic credit: Google

ಅದರಂತೆ ಆಗಸ್ಟ್ 17 ರಿಂದ ಆರಂಭವಾಗಲಿರುವ ಈ ಟೂರ್ನಿಯ ಚೊಚ್ಚಲ ಆವೃತ್ತಿಯಲ್ಲಿ ಆರು ಪುರುಷರ ತಂಡಗಳು ಮತ್ತು ನಾಲ್ಕು ಮಹಿಳಾ ತಂಡಗಳು ಭಾಗವಹಿಸಲಿವೆ.

Pic credit: Google

ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಟೀಂ ಇಂಡಿಯಾದ ಸ್ಟಾರ್ ಆಟಗಾರರು ಕೂಡ ಆಡುವುದನ್ನು ನಾವು ಕಾಣಬಹುದಾಗಿದೆ.

Pic credit: Google

ಇದರಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್, ವೇಗಿಗಳಾದ ಹರ್ಷಿತ್ ರಾಣಾ, ನವದೀಪ್ ಸೈನಿ ಮತ್ತು ಇಶಾಂತ್ ಶರ್ಮಾ ಅವರ ಹೆಸರು ಸೇರಿದೆ.

Pic credit: Google

ಲೀಗ್‌ನ ಮೊದಲ ಪಂದ್ಯವು ಓಲ್ಡ್ ಡೆಲ್ಲಿ 6 ಮತ್ತು ಡೆಲ್ಲಿ ಸೂಪರ್‌ಸ್ಟಾರ್ಸ್ ನಡುವೆ ಆಗಸ್ಟ್ 17 ರಂದು ನಡೆಯಲಿದೆ. ಪಂತ್ ಮತ್ತು ಇಶಾಂತ್ ಶರ್ಮಾ ಓಲ್ಡ್ ಡೆಲ್ಲಿ 6 ತಂಡದ ಭಾಗವಾಗಿದ್ದಾರೆ.

Pic credit: Google

ಇನ್ನು ಈ ಲೀಗ್‌ನಲ್ಲಿ ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಅಭಿಮಾನಿಗಳಿಗೆ ದೊಡ್ಡ ಅವಕಾಶವಿದೆ. ಇದಕ್ಕೆ ಪ್ರಮುಖ ಕಾರಣ ಲೀಗ್ ಪಂದ್ಯಗಳ ಟಿಕೆಟ್ ದರ.

Pic credit: Google

ದೆಹಲಿ ಪ್ರೀಮಿಯರ್ ಲೀಗ್ ಪಂದ್ಯಗಳಿಗೆ ಅಗ್ಗದ ಟಿಕೆಟ್ ದರವನ್ನು ಕೇವಲ 50 ರೂ.ಗೆ ನಿಗದಿಪಡಿಸಲಾಗಿದೆ. ಹೀಗಾಗಿ ಅಭಿಮಾನಿಗಳು ತನ್ನ ನೆಚ್ಚಿನ ಕ್ರಿಕೆಟಿಗನನ್ನು ಕಡಿಮೆ ಮೊತ್ತ ನೀಡಿ ನೋಡಬಹುದಾಗಿದೆ.

Pic credit: Google

ಓಲ್ಡ್ ಡೆಲ್ಲಿ 6 ಮತ್ತು ಸೌತ್ ಡೆಲ್ಲಿ ಸೂಪರ್ ಸ್ಟಾರ್ಸ್ ನಡುವಿನ ಲೀಗ್​ನ ಮೊದಲ ಪಂದ್ಯ ರಾತ್ರಿ 8:30ಕ್ಕೆ ಆರಂಭವಾಗಲಿದೆ. ಇದಾದ ಬಳಿಕ ಲೀಗ್‌ನ ಎಲ್ಲಾ ಪಂದ್ಯಗಳು ಮಧ್ಯಾಹ್ನ 2ರಿಂದ ಸಂಜೆ 7ರವರೆಗೆ ನಡೆಯಲಿದೆ.