11-12-2023

ಚಹಲ್ ಪತ್ನಿ ಧನಶ್ರೀ ಅವರ ಮನಮೋಹಕ ನೃತ್ಯ

ಧನಶ್ರೀ ಜೊತೆ ಭರ್ಜರಿ ಪಾರ್ಟಿ

ಫ್ರೆಂಡ್ಸ್​ ಜೊತೆಗಿನ ಪಾರ್ಟಿಯಲ್ಲಿ ಮಸ್ತ್​ ಡ್ಯಾನ್ಸ್ ಮಾಡಿದ ಧನಶ್ರೀ ವರ್ಮಾ. ಆದರೆ ಈ ಪಾರ್ಟಿಯಲ್ಲಿ ಪತಿ ಯುಜ್ವೇಂದ್ರ ಚಹಲ್ ಕಾಣಿಸಿಕೊಂಡಿರಲಿಲ್ಲ.

ಯುಜ್ವೇಂದ್ರ ಚಹಲ್ ಎಲ್ಲಿ?

ಸ್ಪಿನ್ನರ್ ಯುಜ್ವೇಂದ್ರ ಚಹಲ್ ವಿಜಯ್ ಹಜಾರೆ ಟೂರ್ನಿಯಲ್ಲಿ ಹರ್ಯಾಣ ಪರ ಆಡುತ್ತಿದ್ದಾರೆ. ಇದೇ ಕಾರಣದಿಂದ ಚಹಲ್ ಪಾರ್ಟಿಯಲ್ಲಿ ಕಾಣಿಸಿಕೊಂಡಿಲ್ಲ.

ಕಜರಾರೆ ಕಜರಾರೆ...ಕುಣಿದಾಟ

ಅಮಿತಾಭ್ ಬಚ್ಚನ್-ಐಶ್ವರ್ಯ ರೈ ನಟಿಸಿದ ಬಂಟಿ ಔರ್ ಬಬ್ಲಿ ಚಿತ್ರದ ಕಜರಾರೆ ಕಜರಾರೆ ಹಾಡಿಗೆ ಭರ್ಜರಿಯಾಗಿ ನರ್ತಿಸಿ ಎಲ್ಲರ ಮನಗೆದ್ದರು.

ಸೋಷಿಯಲ್ ಮೀಡಿಯಾದಲ್ಲಿ ವೈರಲ್

ಫ್ರೆಂಡ್ಸ್ ಜೊತೆಗಿನ ಈ ಪಾರ್ಟಿ ವಿಡಿಯೋವನ್ನು ಧನಶ್ರೀ ವರ್ಮಾ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸ್ನೇಹಿತರೊಂದಿಗೆ ಪಾರ್ಟಿ

ಈ ಪಾರ್ಟಿಯಲ್ಲಿ ಕಾಣಿಸಿಕೊಂಡ ಗೆಳೆಯರ ಜೊತೆಗಿನ ಅನೇಕ ಫೋಟೋಗಳನ್ನು ಧನಶ್ರೀ ವರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಧನಶ್ರೀ ಫೋಟೋಗಳು ವೈರಲ್

ಪಾರ್ಟಿ ಮೂಡ್​ನಲ್ಲಿ ಫ್ರೆಂಡ್ಸ್ ಜೊತೆಗೆ ತೆಗೆಸಿಕೊಂಡ ಧನಶ್ರೀ ವರ್ಮಾ ಅವರ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಮಸ್ತ್ ಮಜಾ ಮೂಡ್​ನಲ್ಲಿ ಫ್ರೆಂಡ್ಸ್

ಧನಶ್ರೀ ಜೊತೆಗಿನ ಈ ಪಾರ್ಟಿಯಲ್ಲಿನ ಫೋಟೋಗಳನ್ನು ಅವರ ಫ್ರೆಂಡ್ಸ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಈ ಚಿತ್ರಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.