ಐಪಿಎಲ್ 2024 ಕ್ಕೆ ಮುಂಚಿತವಾಗಿ ವನಿಂದು ಹಸರಂಗವನ್ನು RCB ಬಿಡುಗಡೆ ಮಾಡಿದೆ. ಇವರು ವಿಶ್ವ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರು.
ವನಿಂದು ಹಸರಂಗ
ಹಸರಂಗವನ್ನು ಖರೀದಿಸಲು ಫ್ರಾಂಚೈಸಿಗಳು ಮುಗಿಬೀಳುವುದು ಖಚಿತ. 34 ಕೋಟಿ ಪರ್ಸ್'ನಲ್ಲಿ ಇಟ್ಟುಕೊಂಡಿರುವ SRH ಹಸರಂಗಗಾಗಿ 20 ಕೋಟಿಗೂ ಹೆಚ್ಚು ಖರ್ಚು ಮಾಡಬಹುದು.
ವನಿಂದು ಹಸರಂಗ
ಮಿಚೆಲ್ ಸ್ಟಾರ್ಕ್ ಐಪಿಎಲ್‌ಗೆ ಮರಳಲು ಸಿದ್ಧರಾಗಿದ್ದಾರೆ. ಹರಾಜಿನಲ್ಲಿ ಹಾಟ್ ಪಿಕ್‌ಗಳಲ್ಲಿ ಒಬ್ಬರಾಗಿರುವ ಸ್ಟಾರ್ಕ್'ಗೆ ಹಣದ ಮಳೆ ಸುರಿಯುವುದು ಖಚಿತ.
ಮಿಚೆಲ್ ಸ್ಟಾರ್ಕ್
ಅತ್ಯಂತ ಮಾರಕ ವೇಗಿಗಳಲ್ಲಿ ಒಬ್ಬರಾದ ಸ್ಟಾರ್ಕ್ ಖರೀದಿಗೆ 30+ ಕೋಟಿ ಉಳಿದಿರುವ KKR ಅಥವಾ CSK ನಂತಹ ತಂಡಗಳು ಖರ್ಚು ಮಾಡಬಹುದು.
ಮಿಚೆಲ್ ಸ್ಟಾರ್ಕ್
ರಚಿನ್ ರವೀಂದ್ರ ವಿಶ್ವಕಪ್‌ನಲ್ಲಿ ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡು ಮೂರು ಶತಕಗಳನ್ನು ಸಿಡಿಸಿದರು. ಈ ಆಲ್‌ರೌಂಡರ್ ಮೇಲೆ ಅನೇಕ ಫ್ರಾಂಚೈಸಿ ಕಣ್ಣಿಟ್ಟಿದೆ.
ರಚಿನ್ ರವೀಂದ್ರ
ಪಂಜಾಬ್ ಕಿಂಗ್ಸ್ ಬಳಿ ರವೀಂದ್ರ ಖರೀದಿಗೆ 20 ಕೋಟಿಗೂ ಅಧಿಕ ಮೊತ್ತದ ಪರ್ಸ್ ಉಳಿದಿದೆ. SRH, KKR, CSK ಸಹ ಆಲ್‌ರೌಂಡರ್ ಖರೀದಿಗೆ ಹೋಗಬಹುದು.
ರಚಿನ್ ರವೀಂದ್ರ
ಐಪಿಎಲ್ 2024 ಕ್ಕೆ ಮುಂಚಿತವಾಗಿ ಆರ್‌ಸಿಬಿ ಜೋಶ್ ಹ್ಯಾಜಲ್‌ವುಡ್ ಅವರನ್ನು ಬಿಡುಗಡೆ ಮಾಡಿತು. ಇದು ಭಾರಿ ಆಶ್ಚರ್ಯವನ್ನುಂಟು ಮಾಡಿದೆ.
ಜೋಶ್ ಹ್ಯಾಜಲ್ವುಡ್
ಹ್ಯಾಜಲ್ವುಡ್ KKR, SRH, GT ಮತ್ತು CSK ನಂತಹ ತಂಡಗಳ ನಡುವೆ ಬಿಡ್ಡಿಂಗ್ ವಾರ್ ನಡೆಯುವುದು ಖಚಿತ. ಸ್ಟಾರ್ ವೇಗಿಗಾಗಿ 20+ ಕೋಟಿ ಖರ್ಚು ಮಾಡಬಹುದು.
ಜೋಶ್ ಹ್ಯಾಜಲ್ವುಡ್
ಟ್ರಾವಿಸ್ ಹೆಡ್ ಐಪಿಎಲ್ ಹರಾಜಿನಲ್ಲಿ ಖರೀದಿಗೆ ಲಭ್ಯವಿದ್ದಾರೆ. ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನಂತಹ ತಂಡಗಳು ಹೆಡ್‌ಗಾಗಿ 20 ಕೋಟಿಗೂ ಹೆಚ್ಚು ಖರ್ಚು ಮಾಡಬಹುದು.