05-10-2023

ಕೊಹ್ಲಿ ಬಳಿ ಎಷ್ಟು ಕಾರುಗಳಿವೆ ಗೊತ್ತೇ?: ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ

ಬೆಂಟ್ಲಿ ಫ್ಲೈಯಿಂಗ್ ಸ್ಪರ್

ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ 3.41 ಕೋಟಿ ರೂಪಾಯಿಯ ಲಗ್ಸುರಿ ಬೆಂಟ್ಲಿ ಫ್ಲೈಯಿಂಗ್ ಸ್ಪರ್ V8 2018 ಕಾರು ಹೊಂದಿದ್ದಾರೆ.

ಬೆಂಟ್ಲಿ ಕಾಂಟಿನೆಂಟಲ್ GT

ಬೆಂಟ್ಲಿ ಕಾರಿನ ಪ್ರೇಮಿಯಾಗಿರುವ ಕೊಹ್ಲಿ ರೂ. 3.56 ಕೋಟಿಯ ಬಿಳಿ ಬಣ್ಣದ ಬೆಂಟ್ಲಿ ಕಾಂಟಿನೆಂಟಲ್ GT V8S ಕಾರಿನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಾರೆ.

ರೇಂಜ್ ರೋವರ್ ವೋಗ್

ವಿರಾಟ್ ಕೊಹ್ಲಿ ಬಳಿಕ 2.26 ಕೋಟಿ ರೂ. ವಿನ ರೇಂಜ್ ರೋವರ್ ವೋಗ್ ಕಾರು ಇದೆ. ಇದು 4.4-ಲೀಟರ್ V8 ಡೀಸೆಲ್ ಎಂಜಿನ್​ನಿಂದ ಕೂಡಿದೆ.

ಆಡಿ A8L W12 ಕ್ವಾಟ್ರೋ

ವಿರಾಟ್ ಕೊಹ್ಲಿ ಅವರು ತಮ್ಮ 1.81 ಕೋಟಿ ರೂ. ವಿನ ಆಡಿ A8L W12 ಕ್ವಾಟ್ರೋ ಕಾರಿನಲ್ಲಿ ಹೆಚ್ಚಾಗಿ ಸುತ್ತಾಟ ನಡೆಸುತ್ತಾರೆ.

ಆಡಿ R8 LMX

ವಿರಾಟ್ ಕೊಹ್ಲಿ ಬಳಿಕ 3.35 ಕೋಟಿ ರೂಪಾಯಿಯ ಆಡಿ R8 LMX ಕಾರು ಇದೆ. ಇದು5.2-ಲೀಟರ್ V10 ಎಂಜಿನ್ ಹೊಂದಿದೆ.

ಆಡಿ RS5 ಸ್ಪೋರ್ಟ್ಸ್‌ಬ್ಯಾಕ್

ಭಾರತದ ಮಾಜಿ ನಾಯಕನಲ್ಲಿ 1.02 ಕೋಟಿ ರೂ. ವಿನ ಆಡಿ RS5 ಸ್ಪೋರ್ಟ್ಸ್‌ಬ್ಯಾಕ್ ಕಾರು ಕೂಡ ಇದೆ. ಕೊಹ್ಲಿ ಈ ಕಾರಿನ ಜೊತೆ ಫೋಟೋಕ್ಕೆ ಪೋಸ್ ಕೊಟ್ಟಿದ್ದರು.

ಆಡಿ R8 V10 ಪ್ಲಸ್

ವಿರಾಟ್ ಕೊಹ್ಲಿಯ 3.13 ಕೋಟಿ ರೂ. ವಿನ ಆಡಿ R8 V10 ಪ್ಲಸ್ ಕಾರು 2-ಲೀಟರ್ V10 ಎಂಜಿನ್ ಅನ್ನು ಹೊಂದಿದ್ದು 7-ಸ್ಪೀಡ್ ಟ್ವಿನ್-ಕ್ಲಚ್ DSG ಸ್ವಯಂಚಾಲಿತದೊಂದಿಗೆ ಬರುತ್ತದೆ.

ಆಡಿ ಆರ್​ಎಸ್ 5

ವಿರಾಟ್ ಕೊಹ್ಲಿ ಅವರು ದೇಶದಲ್ಲೇ ಮೊದಲ ಕೆಂಪು ಬಣ್ಣದ ಆಡಿ ಆರ್​ಎಸ್ 5 ಅನ್ನು ಹೊಂದಿದ್ದಾರೆ. ಇದರ ಮೌಲ್ಯ ಸುಮಾರು ರೂ. 1.1 ಕೋಟಿ.

ಲಂಬೋರ್ಗಿನಿ ಗಲ್ಲಾರ್ಡೊ

ವಿರಾಟ್ ಕೊಹ್ಲಿ ಮೊದಲು ಕಪ್ಪು ಬಣ್ಣದ ಲಂಬೋರ್ಗಿನಿ ಗಲ್ಲಾರ್ಡೊ ಸ್ಪೈಡರ್ ಅನ್ನು ಖರೀದಿಸಿದ್ದಾರೆ. ಇದರ ಬೆಲೆ INR 2.35 ಕೋಟಿ.

ಭಾರತಕ್ಕೆ ಬಂದು ಪಾಕಿಸ್ತಾನವನ್ನೇ ಮರೆತ ಬಾಬರ್: ಆಡಿದ ಮಾತು ಕೇಳಿ