24-12-2023

2008 ರಲ್ಲಿ ಐಪಿಎಲ್ ಟ್ರೋಫಿ ಗೆದ್ದ 3 ಪಾಕಿಸ್ತಾನ ಪ್ಲೇಯರ್ಸ್ ಯಾರು ಗೊತ್ತೇ?

Author: Vinay Bhat

ಐಪಿಎಲ್ 2008

ಐಪಿಎಲ್ ಚೊಚ್ಚಲ ಆವೃತ್ತಿ 2008 ರಲ್ಲಿ ರಾಜಸ್ಥಾನ್ ರಾಯಲ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು. ಈ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿತ್ತು.

ಶೇನ್ ವಾರ್ನ್ ನಾಯಕತ್ವ

ಶೇನ್ ವಾರ್ನ್ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದರು. ಐಪಿಎಲ್ 2008 ರ ಹರಾಜಿನಲ್ಲಿ ರಾಜಸ್ಥಾನ ಮಾತ್ರ ಅವರಿಗೆ ಬಿಡ್ ಮಾಡಿದ ಏಕೈಕ ತಂಡವಾಗಿದೆ.

ಚೊಚ್ಚಲ ಪ್ರಶಸ್ತಿ

ವಾರ್ನ್ ತಮ್ಮ ಆಟಗಾರರನ್ನು ಚೆನ್ನಾಗಿ ಬಳಸಿಕೊಂಡರು ಮತ್ತು ರಾಜಸ್ಥಾನ್ ರಾಯಲ್ಸ್‌ಗೆ ನಾಯಕತ್ವ ವಹಿಸಿ ಪ್ರಶಸ್ತಿ ಜಯಿಸಿದರು.

ಪಾಕಿಸ್ತಾನ ಪ್ಲೇಯರ್ಸ್

ಐಪಿಎಲ್ 2008 ರಲ್ಲಿ ಪಾಕಿಸ್ತಾನ ಆಟಗಾರರಿಗೆ ಭಾಗವಹಿಸಲು ಅವಕಾಶ ನೀಡಲಾಯಿತು. ರಾಜಸ್ಥಾನ್ ರಾಯಲ್ಸ್'ನ ಆರಂಭಿಕ ಋತುವಿಗಾಗಿ ಮೂರು ಪಾಕಿಸ್ತಾನಿ ಆಟಗಾರರನ್ನು ಖರೀದಿಸಿತ್ತು. ಅವರು ಯಾರು ಗೊತ್ತೇ?.

ಯೂನಿಸ್ ಖಾನ್

ಪಾಸ್ತಾನದ ದಂತಕಥೆ ಯೂನಿಸ್ ಖಾನ್ ಐಪಿಎಲ್ 2008 ರಲ್ಲಿ ರಾಜಸ್ಥಾನ ರಾಯಲ್ಸ್‌ನ ಹಿರಿಯ ಸದಸ್ಯರಲ್ಲಿ ಒಬ್ಬರಾಗಿದ್ದರು. ಆಡಿದ ಒಂದು ಪಂದ್ಯದಲ್ಲಿ 3 ರನ್ ಗಳಿಸಿದರು.

ಸೊಹೈಲ್ ತನ್ವೀರ್

ತನ್ವೀರ್ ಐಪಿಎಲ್ 2008 ರಲ್ಲಿ ರಾಜಸ್ಥಾನ್ ರಾಯಲ್ಸ್‌ನ ಅತ್ಯುತ್ತಮ ಖರೀದಿಗಳಲ್ಲಿ ಒಬ್ಬರಾಗಿದ್ದರು. ಎಡಗೈ ವೇಗಿ 22 ವಿಕೆಟ್‌ಗಳನ್ನು ಕಬಳಿಸಿದರು.

ಪರ್ಪಲ್ ಕ್ಯಾಪ್

ಸೊಹೈಲ್ ತನ್ವೀರ್ ಈ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದರು. ಪರ್ಪಲ್ ಕ್ಯಾಪ್ ಗೆದ್ದ ಮೊದಲ ಬೌಲರ್ ಎನಿಸಿಕೊಂಡರು.

ಕಮ್ರಾನ್ ಅಕ್ಮಲ್

ಅಕ್ಮಲ್ ಐಪಿಎಲ್ 2008 ಟ್ರೋಫಿ ಗೆದ್ದ ರಾಜಸ್ಥಾನ ರಾಯಲ್ಸ್ ತಂಡದ ಭಾಗವಾಗಿದ್ದ ಮೂರನೇ ಆಟಗಾರ. ಅಕ್ಮಲ್ ಋತುವಿನಲ್ಲಿ ಆರು ಪಂದ್ಯಗಳನ್ನು ಆಡಿ 128 ರನ್ ಗಳಿಸಿದರು.