ಎಲ್ಲರೂ ಇಂಜುರಿ: ಅಫ್ಘಾನ್ ವಿರುದ್ಧದ ಟಿ20 ಸರಣಿಗೆ ಯಾರು ನಾಯಕ?

23-December-2023

Author: Vinay Bhat

ಜನವರಿ 11 ರಂದು ಮೊಹಾಲಿಯಲ್ಲಿ ಪ್ರಾರಂಭವಾಗುವ ಮೂರು ಪಂದ್ಯಗಳ T20I ಸರಣಿಯಲ್ಲಿ ಭಾರತ ತಂಡವು ಅಫ್ಘಾನಿಸ್ತಾನವನ್ನು ಎದುರಿಸಲಿದೆ.

3 ಟಿ20I ಪಂದ್ಯ

ಭಾರತದ ಹಲವು ಆಟಗಾರರು ಇಂಜುರಿಯಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ರುತುರಾಜ್ ಗಾಯಕ್ವಾಡ್ ಗಾಯಕ್ಕೆ ತುತ್ತಾಗಿದ್ದಾರೆ.

ಹಲವರಿಗೆ ಗಾಯ

ರೋಹಿತ್ ನ. 10, 2022 ರಿಂದ ಭಾರತಕ್ಕಾಗಿ T20I ಪಂದ್ಯವನ್ನು ಆಡಿಲ್ಲ. ಅವರು ಅಫ್ಘಾನಿಸ್ತಾನ ಸರಣಿಗೆ ಪುನರಾಗಮನ ಮಾಡುತ್ತಾರೆ ಎಂಬುದು ನೋಡಬೇಕು.

ರೋಹಿತ್ ಶರ್ಮಾ

ಆಗಸ್ಟ್‌ನಲ್ಲಿ ಐರ್ಲೆಂಡ್ ವಿರುದ್ಧ ಬುಮ್ರಾ ಚೊಚ್ಚಲ T20I ನಾಯಕತ್ವವನ್ನು ವಹಿಸಿದರು. ಆದರೆ, ಆಫ್ರಿಕಾ ಸರಣಿ ಮುಗಿದ ಬೆನ್ನಲ್ಲೇ ಅಫ್ಘಾನಿಸ್ತಾನ ಸರಣಿ ಪ್ರಾರಂಭವಾಗುವುದರಿಂದ ಬುಮ್ರಾ ಕಾಣಿಸಿಕೊಳ್ಳುವುದು ಅನುಮಾನ.

ಬುಮ್ರಾ ಆಡುತ್ತಾರಾ?

ಆಫ್ರಿಕಾ ವಿರುದ್ಧದ T20I ಸರಣಿಗೆ ರವೀಂದ್ರ ಜಡೇಜಾ ಭಾರತದ ಉಪನಾಯಕರಾಗಿದ್ದರು. ಸೂರ್ಯ ಅನುಪಸ್ಥಿತಿಯಲ್ಲಿ ಅವರು ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.

ರವೀಂದ್ರ ಜಡೇಜಾ

ಅಯ್ಯರ್ ಡಿ. 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು T20I ಗಳಿಗೆ ಭಾರತದ ಉಪನಾಯಕರಾಗಿದ್ದರು. ಅವರು T20I ತಂಡವನ್ನು ಮುನ್ನಡೆಸುವ ಸಾಲಿನಲ್ಲಿರುತ್ತಾರೆ.

ಶ್ರೇಯಸ್ ಅಯ್ಯರ್

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಜಡೇಜಾ ಮತ್ತು ಅಯ್ಯರ್ ಅವರಿಗೆ ವಿಶ್ರಾಂತಿ ನೀಡಿದರೆ ಜಿಟಿ ನಾಯಕ ಗಿಲ್ ಕ್ಯಾಪ್ಟನ್ ಆಗಬಹುದು.

ಶುಭ್'ಮನ್ ಗಿಲ್

ಅಫ್ಘಾನಿಸ್ತಾನ ವಿರುದ್ಧದ T20I ಸರಣಿಯಲ್ಲಿ ಭಾರತವನ್ನು ಮುನ್ನಡೆಸುವ ನೆಚ್ಚಿನ ಆಟಗಾರರಲ್ಲಿ ಸಂಜು ಸ್ಯಾಮ್ಸನ್ ಸೇರಿದ್ದಾರೆ. ಅವರಿಗೆ ನಾಯಕನ ಜವಾಬ್ದಾರಿ ನಿರ್ವಹಿಸಿದ ಅನುಭವವಿದೆ.

ಸಂಜು ಸ್ಯಾಮ್ಸನ್