05-03-2024

ಇಂದು ಟೊಮೆಟೊ ಮಾರುತ್ತಿದ್ದಾರೆ ಅಂದು ಸಚಿನ್​ರನ್ನು ಔಟ್ ಮಾಡಿದ ಬೌಲರ್

Author: Vinay Bhat

ಎಡೋ ಜನ್ಮದಿನ

ಮಾರ್ಚ್ 5 ಜಿಂಬಾಬ್ವೆಯ ಮಾಜಿ ವೇಗದ ಬೌಲರ್ ಎಡೋ ಬ್ರಾಂಡೆಸ್ ಅವರ ಜನ್ಮದಿನ. ಅವರು ದಕ್ಷಿಣ ಆಫ್ರಿಕಾದ ಪೋರ್ಟ್ ಶೆಪ್ಸ್ಟೋನ್'ನಲ್ಲಿ ಜನಿಸಿದರು.

1999ರ ಕಾಲ

ಈ ವೇಗದ ಬೌಲರ್ 1999 ರಲ್ಲಿ ಹರಾರೆಯಲ್ಲಿ ಶ್ರೀಲಂಕಾ ವಿರುದ್ಧ ODI ರೂಪದಲ್ಲಿ ಜಿಂಬಾಬ್ವೆಗಾಗಿ ತನ್ನ ಕೊನೆಯ ಪಂದ್ಯವನ್ನು ಆಡಿದರು. ಆ ಕಾಲದ ಪ್ರಮುಖ ವೇಗಿದ್ದರು.

ಕೃಷಿಯತ್ತ ಗಮನ

ನಿವೃತ್ತಿಯ ನಂತರ, ಬ್ರ್ಯಾಂಡೆಸ್ ಸ್ವಲ್ಪ ಸಮಯದವರೆಗೆ ತರಬೇತಿ ನೀಡಿದರು. ಈಗ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದು, ಟೊಮೆಟೊ ಕೃಷಿ ಮಾಡುತ್ತಿದ್ದಾರೆ. ನೋರಾ ವ್ಯಾಲಿ ಡೆವಲಪ್‌ಮೆಂಟ್ ಫಾರ್ಮ್‌ನಲ್ಲಿ ಟೊಮೆಟೊಗಳನ್ನು ಬೆಳೆಯುತ್ತಿದ್ದಾರೆ.

ವ್ಯಾಪಾರಿ

ಕ್ರಿಕೆಟಿಗರಾಗುವ ಮುನ್ನವೇ ಬ್ರ್ಯಾಂಡ್ಸ್ ವ್ಯಾಪಾರ ಮಾಡುತ್ತಿದ್ದರು. ಟೊಮೆಟೊ ಬೆಳೆಯುವ ಮೊದಲು, ಅವರು ಕೋಳಿಯನ್ನು ಕೂಡ ಸಾಕುತ್ತಿದ್ದರು. ಇವರ ಅಡಿಯಲ್ಲಿ ಅನೇಕ ಕೆಲಸಗಾರರಿದ್ದರು.

1999 ವಿಶ್ವಕಪ್

1999 ರ ವಿಶ್ವಕಪ್‌ನಲ್ಲಿ ಭಾರತವನ್ನು ಸೋಲಿಸುವ ಮೂಲಕ ಜಿಂಬಾಬ್ವೆ ದೊಡ್ಡ ಸಾಧನೆ ಮಾಡಿತ್ತು. ಆಗ ಬ್ರಾಂಡೆಸ್ ತಂಡದ ಭಾಗವಾಗಿದ್ದರು. ಟೆಸ್ಟ್-ಏಕದಿನ ಸೇರಿದಂತೆ ಭಾರತದ ವಿರುದ್ಧ 14 ವಿಕೆಟ್ ಪಡೆದಿದ್ದಾರೆ.

ಸಚಿನ್ ಔಟ್

1997 ರಲ್ಲಿ, ಜನವರಿ 27 ರಂದು ಭಾರತ-ಜಿಂಬಾಬ್ವೆ ನಡುವಿನ ಪಂದ್ಯದಲ್ಲಿ ಬ್ರಾಂಡೆಸ್ ಆರು ರನ್‌ಗಳಿಸಿದ್ದ ಸಚಿನ್ ತೆಂಡೂಲ್ಕರ್ ಅವರನ್ನು ಔಟ್ ಮಾಡಿದ್ದರು.

ವೃತ್ತಿ ಜೀವನ

ಬ್ರಾಂಡೆಸ್ ಜಿಂಬಾಬ್ವೆ ಪರ 10 ಟೆಸ್ಟ್ ಮತ್ತು 59 ODIಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 26 ಹಾಗೂ ಏಕದಿನದಲ್ಲಿ 70 ವಿಕೆಟ್‌ಗಳನ್ನು ಕಬಳಿಸಿದ್ದಾರೆ.