20-06-2024

T20 World Cup 2024: ತನ್ನದೇ ತಂಡದ ಇಬ್ಬರು ನಾಯಕರ ದಾಖಲೆ ಮುರಿದ ಸಾಲ್ಟ್..!

Author: ಪೃಥ್ವಿ ಶಂಕರ

ಟಿ20 ವಿಶ್ವಕಪ್ 2024 ರ ಸೂಪರ್-8ಸುತ್ತಿನ ಎರಡನೇ ಪಂದ್ಯ ಗುರುವಾರ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯಿತು.

ಈ ಪಂದ್ಯದಲ್ಲಿ ಇಂಗ್ಲೆಂಡ್‌ನ ಸ್ಟಾರ್ ಬ್ಯಾಟ್ಸ್‌ಮನ್ ಫಿಲ್ ಸಾಲ್ಟ್ ಅದ್ಭುತ ಪ್ರದರ್ಶನ ನೀಡಿದರು. ಈ ಮೂಲಕ ತಂಡದ ಗೆಲುವಿಗೆ ಪ್ರಮುಖ ರೂವಾರಿಯಾದರು.

ತಮ್ಮ ಇನ್ನಿಂಗ್ಸ್​ನಲ್ಲಿ 47 ಎಸೆತಗಳನ್ನು ಎದುರಿಸಿದ ಸಾಲ್ಟ್ 87 ರನ್ ಸಿಡಿಸಿದರು. ಈ ಮೂಲಕ ಅವರು ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಈ ಅಜೇಯ ಇನ್ನಿಂಗ್ಸ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಏಳು ಬೌಂಡರಿ ಮತ್ತು ಐದು ಸಿಕ್ಸರ್‌ಗಳನ್ನು ಹೊಡೆದರು.

ಇದರೊಂದಿಗೆ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇಂಗ್ಲೆಂಡ್ ಪರ ಒಂದೇ ತಂಡದ ವಿರುದ್ಧ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಂಡರು.

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಲ್ಟ್ ಇದುವರೆಗೆ 32 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

ಈ ವಿಷಯದಲ್ಲಿ ಸಾಲ್ಟ್ ಇಯಾನ್ ಮಾರ್ಗನ್ ಅವರನ್ನು ಹಿಂದಿಕ್ಕಿದ್ದಾರೆ. ಮಾರ್ಗನ್ ತಮ್ಮ ವೃತ್ತಿಜೀವನದಲ್ಲಿ ನ್ಯೂಜಿಲೆಂಡ್ ವಿರುದ್ಧ 26 ಸಿಕ್ಸರ್ಗಳನ್ನು ಹೊಡೆದಿದ್ದರು.

ಇವರೊಂದಿಗೆ ಸಾಲ್ಟ್, ಜೋಸ್ ಬಟ್ಲರನ್ನು ಹಿಂದಿಕ್ಕಿದ್ದಾರೆ. ಬಟ್ಲರ್ ಆಸ್ಟ್ರೇಲಿಯಾ ವಿರುದ್ಧ 25 ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 24 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.