ಕೊನೇ ಸ್ಥಾನ ತಪ್ಪಿಸಿಕೊಂಡ ಇಂಗ್ಲೆಂಡ್: ಇಲ್ಲಿದೆ ವಿಶ್ವಕಪ್ ಪಾಯಿಂಟ್ಸ್ ಟೇಬಲ್

09 November 2023

ಸೆಮೀಸ್'ಗೆ ಲಗ್ಗೆಯಿಟ್ಟಿರುವ ಟೀಮ್ ಇಂಡಿಯಾ ಆಡಿರುವ ಎಂಟು ಪಂದ್ಯಗಳ ಪೈಕಿ ಎಂಟರಲ್ಲೂ ಗೆದ್ದು 16 ಅಂಕ ಸಂಪಾದಿಸಿ ಮೊದಲ ಸ್ಥಾನದಲ್ಲಿ ಭದ್ರವಾಗಿದೆ.

ಭಾರತ

ದಕ್ಷಿಣ ಆಫ್ರಿಕಾ ತಂಡ ಕೂಡ ಸೆಮಿ ಫೈನಲ್ ಪ್ರವೇಶಿಸಿದ್ದು ದ್ವಿತೀಯ ಸ್ಥಾನದಲ್ಲಿದೆ. ಆಡಿರುವ ಎಂಟು ಪಂದ್ಯಗಳ ಪೈಕಿ ಆರರಲ್ಲಿ ಗೆದ್ದು 12 ಅಂಕ ಸಂಪಾದಿಸಿದೆ.

ದಕ್ಷಿಣ ಆಫ್ರಿಕಾ

ಆಸ್ಟ್ರೇಲಿಯಾ ತಂಡ ಆಡಿರುವ ಎಂಟು ಪಂದ್ಯಗಳ ಪೈಕಿ ಆರರಲ್ಲಿ ಗೆದ್ದು, ಎರಡರಲ್ಲಿ ಸೋತು 12 ಅಂಕ ಸಂಪಾದಿಸಿ ಮೂರನೇ ಸ್ಥಾನದಲ್ಲಿದ್ದು, ಸೆಮೀಸ್​ಗೆ ತಪುಪಿದೆ.

ಆಸ್ಟ್ರೇಲಿಯಾ

ಕಿವೀಸ್ ಆಡಿರುವ 8 ಪಂದ್ಯಗಳ ಪೈಕಿ ನಾಲ್ಕರಲ್ಲಿ ಗೆದ್ದು, ನಾಲ್ಕರಲ್ಲಿ ಸೋತು ಎಂಟು ಅಂಕ ಸಂಪಾದಿಸಿ ನಾಲ್ಕನೇ ಸ್ಥಾನದಲ್ಲಿದೆ.

ನ್ಯೂಝಿಲೆಂಡ್

ಪಾಕಿಸ್ತಾನ ತಂಡ ಕೂಡ ಆಡಿರುವ ಎಂಟು ಪಂದ್ಯಗಳ ಪೈಕಿ ತಲಾ ನಾಲ್ಕರಲ್ಲಿ ಸೋಲು-ಗೆಲುವು ಕಂಡು 8 ಅಂಕ ಸಂಪಾದಿಸಿ 5ನೇ ಸ್ಥಾನದಲ್ಲಿದೆ.

ಪಾಕಿಸ್ತಾನ

ಅಫ್ಘಾನಿಸ್ತಾನ ತಂಡ 8 ಪಂದ್ಯಗಳ ಪೈಕಿ ನಾಲ್ಕು ಗೆಲುವು, ನಾಲ್ಕು ಸೋಲು ಕಂಡು 8 ಅಂಕ ಸಂಪಾದಿಸಿ ಆರನೇ ಸ್ಥಾನದಲ್ಲಿದೆ.

ಅಫ್ಘಾನಿಸ್ತಾನ

ಇಂಗ್ಲೆಂಡ್ ತಂಡ ನೆದರ್ಲೆಂಡ್ಸ್ ವಿರುದ್ಧ ಗೆದ್ದು ಕೊನೆಯ ಸ್ಥಾನದಿಂದ ಏಳನೇ ಸ್ಥಾನಕ್ಕೆ ಜಗಿದಿದೆ. ಆಡಿರುವ 8 ಪಂದ್ಯಗಳ ಪೈಕಿ ಎರಡರಲ್ಲಿ ಗೆದ್ದು, ಆರರಲ್ಲಿ ಸೋತಿದೆ.

ಇಂಗ್ಲೆಂಡ್

ಬಾಂಗ್ಲಾದೇಶ ತಂಡ ಆಡಿರುವ 8 ಪಂದ್ಯಗಳ ಪೈಕಿ ಆರರಲ್ಲಿ ಸೋಲು, ಎರಡರಲ್ಲಿ ಗೆದ್ದು 4 ಅಂಕ ಸಂಪಾದಿಸಿ 8ನೇ ಸ್ಥಾನದಲ್ಲಿದ್ದು, ಟೂರ್ನಿಯಿಂದ ಔಟ್ ಆಗಿದೆ.

ಬಾಂಗ್ಲಾದೇಶ

ಶ್ರೀಲಂಕಾ ತಂಡ ಆಡಿರುವ ಎಂಟು ಪಂದ್ಯಗಳ ಪೈಕಿ ಆರರಲ್ಲಿ ಸೋತು, ಎರಡರಲ್ಲಿ ಗೆದ್ದು ನಾಲ್ಕು ಅಂಕದೊಂದಿಗೆ 9ನೇ ಸ್ಥಾನದಲ್ಲಿದೆ.

ಶ್ರೀಲಂಕಾ

ನೆದರ್ಲೆಂಡ್ಸ್ ತಂಡ ಕೂಡ ಆಡಿರುವ ಎಂಟು ಪಂದ್ಯಗಳ ಪೈಕಿ ಎರಡರಲ್ಲಷ್ಟೆ ಗೆದ್ದು ನಾಲ್ಕು ಅಂಕ ಸಂಪಾದಿಸಿ ಹತ್ತನೇ ಸ್ಥಾನದಲ್ಲಿದೆ.

ನೆದರ್ಲೆಂಡ್ಸ್

ಗಿಲ್-ಸಾರಾ ತೆಂಡೂಲ್ಕರ್ ತಬ್ಬಿಕೊಂಡ ಫೋಟೋ ವೈರಲ್