ಟೆಸ್ಟ್‌ಗಳಲ್ಲಿ ವೇಗವಾಗಿ 1000 ರನ್‌ಗಳನ್ನು ಗಳಿಸಿದ ಭಾರತೀಯ ಬ್ಯಾಟರ್‌ಗಳು

01-March-2024

Author: Vinay Bhat

ಭಾರತ ಪರ ಟೆಸ್ಟ್‌ನಲ್ಲಿ ವೇಗವಾಗಿ 1000 ರನ್ ಗಳಿಸಿದ ದಾಖಲೆಯನ್ನು ವಿನೋದ್ ಕಾಂಬ್ಳಿ ಹೊಂದಿದ್ದಾರೆ. ಇವರು 12ನೇ ಟೆಸ್ಟ್‌ನ 14ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದರು.

ವಿನೋದ್ ಕಾಂಬ್ಳಿ

ಟೆಸ್ಟ್‌ನಲ್ಲಿ 1000 ರನ್ ಪೂರೈಸಲು ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಅವರಿಗೆ 11 ಟೆಸ್ಟ್‌ಗಳಲ್ಲಿ 18 ಇನ್ನಿಂಗ್ಸ್‌ಗಳು ಬೇಕಾಗಿದ್ದವು.

ಚೇತೇಶ್ವರ ಪೂಜಾರ

ಸದ್ಯ ಟೀಮ್ ಇಂಡಿಯಾದಿಂದ ಕಣ್ಮರೆಯಾಗಿರುವ ಮಯಾಂಕ್ ಅಗರ್ವಾಲ್ 12ನೇ ಪಂದ್ಯದ 19ನೇ ಇನ್ನಿಂಗ್ಸ್‌ನಲ್ಲಿ 1000 ಟೆಸ್ಟ್ ರನ್ ಪೂರೈಸಿದರು.

ಮಯಾಂಕ್ ಅಗರ್ವಾಲ್

ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ 11ನೇ ಟೆಸ್ಟ್‌ನ 21ನೇ ಇನ್ನಿಂಗ್ಸ್‌ನಲ್ಲಿ 1000 ಟೆಸ್ಟ್‌ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ.

ಸುನಿಲ್ ಗವಾಸ್ಕರ್

ಸಂಜಯ್ ಮಂಜ್ರೇಕರ್ ತಮ್ಮ 14ನೇ ಟೆಸ್ಟ್‌ನ 23ನೇ ಇನ್ನಿಂಗ್ಸ್‌ನಲ್ಲಿ 1000 ರನ್‌ಗಳ ಗಡಿಯನ್ನು ದಾಟಿದರು.

ಸಂಜಯ್ ಮಂಜ್ರೇಕರ್

ಸದ್ಯ ಟೀಮ್ ಇಂಡಿಯಾದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಕೂಡ 14ನೇ ಟೆಸ್ಟ್ ನ 23ನೇ ಇನ್ನಿಂಗ್ಸ್ ನಲ್ಲಿ 1000 ರನ್ ಪೂರೈಸಿದ್ದರು.

ರಾಹುಲ್ ದ್ರಾವಿಡ್

ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಭಾರತಕ್ಕಾಗಿ ತಮ್ಮ 15 ನೇ ಟೆಸ್ಟ್ ಪಂದ್ಯದ 23 ನೇ ಇನ್ನಿಂಗ್ಸ್‌ನಲ್ಲಿ 1000 ಟೆಸ್ಟ್ ರನ್‌ಗಳನ್ನು ಪೂರೈಸಿದರು.

ಸೌರವ್ ಗಂಗೂಲಿ

ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರು 16 ಟೆಸ್ಟ್‌ಗಳ 24 ಇನ್ನಿಂಗ್ಸ್‌ಗಳಲ್ಲಿ 1000 ಟೆಸ್ಟ್ ರನ್​ಗಳ ಗಡಿ ತಲುಪಿದರು.

ವೀರೇಂದ್ರ ಸೆಹ್ವಾಗ್

ಲೆಜೆಂಡರಿ ವಿಜಯ್ ಹಜಾರೆ 13 ಟೆಸ್ಟ್‌ಗಳ 25 ಇನ್ನಿಂಗ್ಸ್‌ಗಳಲ್ಲಿ 1000 ಟೆಸ್ಟ್ ರನ್ ಪೂರೈಸಿದ್ದಾರೆ.

ವಿಜಯ್ ಹಜಾರೆ

ಸದ್ಯ ಭಾರತ ತಂಡದಿಂದ ಹೊರಗುಳಿದಿರುವ ಅಜಿಂಕ್ಯ ರಹಾನೆ ಕೂಡ ಭಾರತದ ಪರ 13 ಟೆಸ್ಟ್‌ಗಳ 25 ಇನ್ನಿಂಗ್ಸ್‌ಗಳಲ್ಲಿ 1000 ಟೆಸ್ಟ್ ರನ್ ಪೂರೈಸಿದ್ದಾರೆ.

ಅಜಿಂಕ್ಯ ರಹಾನೆ