16-10-2023

INDvsPAK: ಅಭಿಮಾನಿಯ ಕಪಾಳಕ್ಕೆ ಹೊಡೆದ ಮಹಿಳಾ ಪೊಲೀಸ್

ಭಾರತ-ಪಾಕ್

ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ಮುಕ್ತಾಯಗೊಂಡಿದೆ. ಇದರಲ್ಲಿ ಭಾರತ ಗೆದ್ದುಕೂಡ ಆಗಿದೆ.

ಫ್ಯಾನ್ಸ್ ಗಲಾಟೆ

ಇಂಡೋ-ಪಾಕ್ ಕದನ ಮೈದಾನದಲ್ಲಿ ಹೆಚ್ಚು ರೋಚಕತೆಯಿಂದ ಕೂಡಿರಲಿಲ್ಲ. ಇಡೀ ಪಂದ್ಯ ಭಾರತದ ಪರವೇ ಸಾಗಿತು. ಆದರೆ, ಫ್ಯಾನ್ಸ್ ಗಲಾಟೆ ಮಾತ್ರ ಜೋರಾಗಿತ್ತು.

ವಿಡಿಯೋ ವೈರಲ್

ಪಂದ್ಯ ಮುಗಿದ ನಂತರ, ಅನೇಕ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಪಂದ್ಯದ ನಡುವಿನ ವಿಡಿಯೋ-ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರ ನಡುವೆ ಒಂದು ವಿಡಿಯೋ ವೈರಲ್ ಆಗಿದೆ.

ಪೊಲೀಸ್ vs ಅಭಿಮಾನಿ

ಈ ವಿಡಿಯೋ ಸಾಕಷ್ಟು ಆಘಾತಕಾರಿಯಾಗಿದೆ. ಇಲ್ಲಿ ಮಹಿಳಾ ಪೊಲೀಸ್ ಮತ್ತು ಅಭಿಮಾನಿಯ ನಡುವೆ ದೊಡ್ಡ ಜಗಳವೇ ನಡೆದಿದೆ. ಆದರೆ, ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ.

ಕಪಾಳ ಮೋಕ್ಷ

ಮಹಿಳಾ ಪೋಲೀಸ್ ಹಾಗೂ ಅಭಿಮಾನಿ ನಡುವೆ ಜಗಳ ನಡೆಯುತ್ತಿದ್ದು, ಜೋರು ಧ್ವನಿಯಲ್ಲಿ ಮಾತುಕತೆ ನಡೆದಿದೆ. ಆಗ ಏಕಾಏಕಿ ಪೊಲೀಸ್ ಕಪಾಳಮೋಕ್ಷ ಮಾಡಿದ್ದಾರೆ. ಅಭಿಮಾನಿಯೂ ಕೈ ಎತ್ತಿದ್ದಾರೆ.

7 ವಿಕೆಟುಗಳ ಜಯ

ಪಂದ್ಯದ ವಿಚಾರಕ್ಕೆ ಬಂದರೆ ಪಾಕಿಸ್ತಾನ ನೀಡಿದ 192 ರನ್ ಗಳ ಗುರಿಯನ್ನು ಟೀಮ್ ಇಂಡಿಯಾ ಕೇವಲ 31 ಓವರ್ ಗಳಲ್ಲಿ ಮುಟ್ಟಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಬಾಂಗ್ಲಾ ಟಾರ್ಗೆಟ್

ಟೀಮ್ ಇಂಡಿಯಾದ ಮುಂದಿನ ಟಾರ್ಗೆಟ್ ಬಾಂಗ್ಲಾದೇಶ. ಅಕ್ಟೋಬರ್ 19 ರಂದು ಎಮ್​ಸಿಎ ಸ್ಟೇಡಿಯಂ ಈ ಪಂದ್ಯವನ್ನು ಆಯೋಜಿಸಲಾಗಿದೆ.

ಪುಣೆಗೆ ಬಂದ ಭಾರತ

ಅಹಮದಾಬಾದ್​ನಿಂದ ಹೊರಟು ಭಾರತ ಕ್ರಿಕೆಟ್ ತಂಡದ ಆಟಗಾರರು ಭಾನುವಾರ ಸಂಜೆ ಪುಣೆ ತಲುಪಿದ್ದಾರೆ. ಇಂದು ಅಭ್ಯಾಸ ಶುರುಮಾಡಲಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ