ನತಾಶಾಗೂ ಮುನ್ನ ನಾಲ್ವರು ನಟಿಯರೊಂದಿಗೆ ಹಾರ್ದಿಕ್ ಹೆಸರು ತಳುಕು

19 July 2024

Pic credit - Google

ಪೃಥ್ವಿಶಂಕರ

Pic credit -  Google

ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ತಮ್ಮ 4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಇನ್ಸ್​ಟಾಗ್ರಾಮ್ ಪೋಸ್ಟ್​ನಲ್ಲಿ ಈ ಬಗ್ಗೆ ದಂಪತಿಗಳಿಬ್ಬರು ಮಾಹಿತಿ ನೀಡಿದ್ದಾರೆ.

ಹಾರ್ದಿಕ್- ನತಾಶಾ

Pic credit -  Google

ಹಾರ್ದಿಕ್ ಪಾಂಡ್ಯ 2020 ರಲ್ಲಿ ತಮ್ಮ ಪ್ರೆಯಸಿ ನತಾಶಾ ಸ್ಟಾಂಕೋವಿಕ್ ಅವರನ್ನು ವಿವಾಹವಾದರು. ಆದರೆ ನತಾಶಾಗೂ ಮುನ್ನ ಹಾರ್ದಿಕ್ ಹೆಸರು ಹಲವು ನಟಿಯರ ಜೊತೆ ಕೇಳಿಬಂದಿತ್ತು.

ಹಾರ್ದಿಕ್- ನತಾಶಾ

Pic credit -  Google

ಹಾರ್ದಿಕ್ ಪಾಂಡ್ಯ ಅವರ ಹೆಸರು ಮೊದಲು ಕೋಲ್ಕತ್ತಾ ಮೂಲದ ಮಾಡೆಲ್ ಲೀಶಾ ಶರ್ಮಾ ಅವರೊಂದಿಗೆ ತಳುಕು ಹಾಕಿಕೊಂಡಿತ್ತು. ಆದರೆ ಕೇವಲ ಒಂದು ವರ್ಷದ ನಂತರ ಇಬ್ಬರೂ ಬೇರ್ಪಟ್ಟರು.

ಹಾರ್ದಿಕ್- ಲೀಶಾ ಶರ್ಮಾ

Pic credit -  Google

ಆ ನಂತರ ಪಾಂಡ್ಯ ಅವರ ಹೆಸರು ನಟಿ ಎಲ್ಲಿ ಅವ್ರಾಮ್ ಜೊತೆ ತಳುಕು ಹಾಕಿಕೊಂಡಿತ್ತು. ಇಬ್ಬರೂ ಜಾಹೀರಾತಿನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು ಮತ್ತು ನಂತರ ಇಬ್ಬರೂ ಅನೇಕ ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಈ ಸಂಬಂಧ ಯಾವುದೇ ಅಧಿಕೃತ ಮುದ್ರೆ ಬಿಳಲಿಲ್ಲ.

ಪಾಂಡ್ಯ- ಎಲ್ಲಿ ಅವ್ರಾಮ್

Pic credit -  Google

ಹಾರ್ದಿಕ್ ಪಾಂಡ್ಯ ಮತ್ತು ಊರ್ವಶಿ ರೌಟೇಲಾ ನಡುವಿನ ಸಂಬಂಧದ ಸುದ್ದಿ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಆದರೆ ಈ ಇಬ್ಬರೂ ನಾವಿಬ್ಬರು ಕೇವಲ ಸ್ನೇಹಿತರೆಂದು  ಹೇಳುವ ಮೂಲಕ ವದಂತಿಗೆ ತೆರೆ ಎಳೆದರು.

ಹಾರ್ದಿಕ್- ಊರ್ವಶಿ

Pic credit -  Google

ಹಾರ್ದಿಕ್ ಅಲ್ಲದೆ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಷಬ್ ಪಂತ್ ಅವರೊಂದಿಗೂ ಊರ್ವಶಿ ರೌಟೇಲಾ ಹೆಸರು ಕೇಳಿಬಂದಿತ್ತು.

ಪಂತ್- ಊರ್ವಶಿ

Pic credit -  Google

ಬಾಲಿವುಡ್ ನಟಿ ಇಶಾ ಗುಪ್ತಾ ಜೊತೆಗೂ ಹಾರ್ದಿಕ್ ಪಾಂಡ್ಯ ಹೆಸರು ತಳುಕು ಹಾಕಿಕೊಂಡಿದೆ. ಇವರಿಬ್ಬರ ಡೇಟಿಂಗ್ ಸುದ್ದಿ ಸಾಕಷ್ಟು ಗುಲ್ ಎಬ್ಬಿಸಿತ್ತು. ಆದರೆ, ಈ ಬಗ್ಗೆ ಇಬ್ಬರೂ ಬಹಿರಂಗವಾಗಿ ಎಲ್ಲೂ ಹೇಳಿಕೊಳ್ಳಲಿಲ್ಲ.

ಇಶಾ ಗುಪ್ತಾ- ಹಾರ್ದಿಕ್