Hardik Pandya vs jasprit bumrah (1)

28-11-2023

MI ತಂಡದಲ್ಲಿ ಬಿರುಕು?: ಇನ್​ಸ್ಟಾದಲ್ಲಿ ಬಾಂಬ್ ಸಿಡಿಸಿದ ಬುಮ್ರಾ

Author: Vinay Bhat H

TV9 Kannada Logo For Webstory First Slide
Rohit sharma and Hardik Pandya

ಮುಂಬೈಗೆ ಪಾಂಡ್ಯ

ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಹಾರ್ದಿಕ್ ಪಾಂಡ್ಯ ಅವರನ್ನು ಗುಜರಾತ್ ಟೈಟಾನ್ಸ್'ನಿಂದ ಕರೆತಂದಿದೆ. ಹೀಗಾಗಿ ಐಪಿಎಲ್ 2024 ರಲ್ಲಿ ಇವರು MI ಪರ ಆಡಲಿದ್ದಾರೆ.

Rohit Sharma (1)

ಅಸಮಧಾನ

ಪಾಂಡ್ಯ ವಾಪಸಾತಿಯಾದ ಬೆನ್ನಲ್ಲೇ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಹಾರ್ದಿಕ್ ಮುಂಬೈ ಸೇರಿರುವುದರಿಂದ ಕೆಲವು ಹಿರಿಯ ಆಟಗಾರರು ಸಂತಸಗೊಂಡಿಲ್ಲ ಎಂಬ ವರದಿಗಳಿವೆ.

ಹಾರ್ದಿಕ್ ಪಾಂಡ್ಯ ಕರೆತಂದ ಮುಂಬೈ ಫ್ರಾಂಚೈಸಿ ಮೇಲೆ ಅವರದ್ದೇ ತಂಡದ ಆಟಗಾರರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೀಗ ಮತ್ತಷ್ಟು ಪುಷ್ಠಿ ಸಿಕ್ಕಿದೆ.

ಮುಂಬೈ ಮೇಲೆ ಅಸಮಾಧಾನ?

ಹಾರ್ದಿಕ್ ಪಾಂಡ್ಯ ಕರೆತಂದ ಮುಂಬೈ ಫ್ರಾಂಚೈಸಿ ಮೇಲೆ ಅವರದ್ದೇ ತಂಡದ ಆಟಗಾರರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೀಗ ಮತ್ತಷ್ಟು ಪುಷ್ಠಿ ಸಿಕ್ಕಿದೆ.

ಬುಮ್ರಾ ಸ್ಟೋರಿ

MI ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ತಮ್ಮ Instagram ನಲ್ಲಿ ಒಂದು ಸ್ಟೋರಿ ಪೋಸ್ಟ್ ಮಾಡಿದ್ದಾರೆ, 'ಕೆಲವೊಮ್ಮೆ ಮೌನವು ಅತ್ಯುತ್ತಮ ಉತ್ತರವಾಗಿದೆ' ಎಂದು ಬರೆದಿದ್ದಾರೆ.

ಬುಮ್ರಾ vs ಪಾಂಡ್ಯ

ಮುಂಬೈ ಇಂಡಿಯನ್ಸ್‌ಗೆ ಹಾರ್ದಿಕ್ ಪಾಂಡ್ಯ ಮರಳುವುದರೊಂದಿಗೆ ಬುಮ್ರಾ ಈರೀತಿ ಇನ್‌ಸ್ಟಾಗ್ರಾಮ್ ಸ್ಟೋರಿ ಹಂಚಿಕೊಂಡಿದ್ದಾರೆ ಎಂದು ಜನರು ಲಿಂಕ್ ಮಾಡುತ್ತಿದ್ದಾರೆ.

ರೋಹಿತ್‌ ಬಳಿ ಕೇಳಿಲ್ಲ?

ಮುಂಬೈ ಇಂಡಿಯನ್ಸ್‌ಗೆ ಹಾರ್ದಿಕ್ ಸೇರಿಸಿಕೊಳ್ಳುವ ಬಗ್ಗೆ ನಾಯಕ ರೋಹಿತ್ ಶರ್ಮಾ ಅವರನ್ನು ಕೇಳಲಿಲ್ಲ ಎಂದು ಕೂಡ ಹೇಳಲಾಗುತ್ತಿದೆ. ಈ ಬಗ್ಗೆ ಯಾವುದೇ ದೃಢೀಕರಣ ಸಿಕ್ಕಿಲ್ಲ.

ಹಾರ್ದಿಕ್ ಕ್ಯಾಪ್ಟನ್?

ಮುಂಬೈ ಇಂಡಿಯನ್ಸ್, ಭವಿಷ್ಯದ ನಾಯಕನಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಪರಿಗಣಿಸುತ್ತಿದೆ ಎಂಬ ಊಹಾಪೋಹವೂ ಇದೆ. ಐಪಿಎಲ್ 2024 ರಲ್ಲಿ ನಾಯಕರಾಗುತ್ತಾರೆಯೇ ಎಂಬ ಬಗ್ಗೆ ಅಧಿಕೃತ ಉತ್ತರವಿಲ್ಲ.

ನಾಯಕನಾಗಿ ಯಶಸ್ಸು

ಕಳೆದ ಎರಡು ಐಪಿಎಲ್ ಸೀಸನ್‌ಗಳಲ್ಲಿ ಹಾರ್ದಿಕ್ ಗುಜರಾತ್ ನಾಯಕರಾಗಿದ್ದರು. ಮೊದಲ ಋತುವಿನಲ್ಲಿ ಚಾಂಪಿಯನ್ ಆದರೆ, ಕೊನೆಯ ಸೀಸನ್'ನಲ್ಲಿ ಫೈನಲ್ ತಲುಪಿತ್ತು.