04-02-2024

ಇಂಗ್ಲೆಂಡ್ ವಿರುದ್ಧ ದ್ವಿಶತಕ ಸಿಡಿಸಿದ ಭಾರತೀಯ ಬ್ಯಾಟರ್‌ಗಳು

Author: Vinay Bhat

ಕರುಣ್ ನಾಯರ್

ಇಂಗ್ಲೆಂಡ್ ವಿರುದ್ಧ ತ್ರಿಶತಕ ಸಿಡಿಸಿದ ಏಕೈಕ ಭಾರತೀಯ ಆಟಗಾರ ಕರುಣ್ ನಾಯರ್. ಇವರೀಗ ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದಾರೆ.

ವಿರಾಟ್ ಕೊಹ್ಲಿ

2016ರಲ್ಲಿ ಇಂಗ್ಲೆಂಡ್ ವಿರುದ್ಧ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ 235 ರನ್ ಗಳಿಸಿದ್ದರು.

ವಿನೋದ್ ಕಾಂಬ್ಳಿ

ವಿನೋದ್ ಕಾಂಬ್ಳಿ 1993 ರಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಮೊದಲ ಟೆಸ್ಟ್ ದ್ವಿಶತಕದಲ್ಲಿ 224 ರನ್ ಸಿಡಿಸಿದ್ದರು.

ಗುಂಡಪ್ಪ ವಿಶ್ವನಾಥ್

1982ರಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ಗುಂಡಪ್ಪ ವಿಶ್ವನಾಥ್ 222 ರನ್ ಸಿಡಿಸಿದ್ದರು. ಇದು ಇವರ ಶ್ರೇಷ್ಠ ಸಾಧನೆ ಆಗಿದೆ.

ಸುನಿಲ್ ಗವಾಸ್ಕರ್

1979 ರಲ್ಲಿ ಇಂಗ್ಲೆಂಡ್ ವಿರುದ್ಧ ಓವಲ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಲಿಟ್ಲ್ ಮಾಸ್ಟರ್ ಸುನಿಲ್ ಗವಾಸ್ಕರ್ 221 ರನ್ ಗಳಿಸಿದ್ದರು.

ರಾಹುಲ್ ದ್ರಾವಿಡ್

ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ 2002 ರಲ್ಲಿ ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 217 ರನ್ ಗಳಿಸಿದ್ದರು.

ಯಶಸ್ವಿ ಜೈಸ್ವಾಲ್

ಜೈಸ್ವಾಲ್ ಅವರು ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ದ್ವಿಶತಕ ಸಿಡಿಸಿದ ಇತ್ತೀಚಿನ ಭಾರತೀಯ ಬ್ಯಾಟರ್ ಆಗಿದ್ದಾರೆ. ಇವರು 209 ರನ್ ಸಿಡಿಸಿದ್ದಾರೆ.

ಚೇತೇಶ್ವರ ಪೂಜಾರ

2012ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಅಜೇಯ 206 ರನ್ ಗಳಿಸಿದ್ದರು.

ಮನ್ಸೂರ್ ಅಲಿ ಖಾನ್

ಮನ್ಸೂರ್ ಅಲಿ ಖಾನ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ದ್ವಿಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಆಗಿದ್ದಾರೆ.