19-02-2024

ಟೆಸ್ಟ್‌ನಲ್ಲಿ ಬ್ಯಾಕ್-ಟು-ಬ್ಯಾಕ್ ದ್ವಿಶತಕ ಸಿಡಿಸಿದ 3 ಭಾರತೀಯರು

Author: Vinay Bhat

ವಿನೋದ್ ಕಾಂಬ್ಳಿ

ವಿನೋದ್ ಕಾಂಬ್ಳಿ ಟೆಸ್ಟ್‌ ಕ್ರಿಕೆಟಿನಲ್ಲಿ ಬ್ಯಾಕ್ ಟು ಬ್ಯಾಕ್ ದ್ವಿಶತಕ ಗಳಿಸಿದ ಮೊದಲ ಭಾರತೀಯ ಬ್ಯಾಟರ್ ಆಗಿದ್ದಾರೆ.

1993 ರಲ್ಲಿ

ಭಾರತದ ಪರ ಮೂರನೇ ಟೆಸ್ಟ್‌ನಲ್ಲಿ, ಫೆಬ್ರವರಿ 21, 1993 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ವಿನೋದ್ ಕಾಂಬ್ಳಿ 224 ರನ್ ಗಳಿಸಿದರು.

ಜಿಂಬಾಬ್ವೆ ವಿರುದ್ಧ

ಭಾರತಕ್ಕಾಗಿ ತನ್ನ 4 ನೇ ಟೆಸ್ಟ್‌ನಲ್ಲಿ, ಕಾಂಬ್ಲಿ ಮಾರ್ಚ್ 14, 1993 ರಂದು ದೆಹಲಿಯಲ್ಲಿ ಜಿಂಬಾಬ್ವೆ ವಿರುದ್ಧ 227 ರನ್ ಸಿಡಿಸಿದ್ದರು.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಒಂದು ಟೆಸ್ಟ್ ಸರಣಿಯಲ್ಲಿ ಬ್ಯಾಕ್-ಟು-ಬ್ಯಾಕ್ ದ್ವಿಶತಕಗಳನ್ನು ಗಳಿಸಿದ ಮೊದಲ ಭಾರತೀಯ ಬ್ಯಾಟರ್. 2017ರಲ್ಲಿ ಶ್ರೀಲಂಕಾ ವಿರುದ್ಧ ಈ ಸಾಧನೆ ಮಾಡಿದ್ದರು.

213 ರನ್ಸ್

ವಿರಾಟ್ ಕೊಹ್ಲಿ ನವೆಂಬರ್ 26, 2017 ರಂದು ನಾಗ್ಪುರದಲ್ಲಿ ಶ್ರೀಲಂಕಾ ವಿರುದ್ಧ 267 ಎಸೆತಗಳಲ್ಲಿ 213 ರನ್ ಗಳಿಸಿದರು.

243 ರನ್ಸ್

ಆಗಿನ ಭಾರತದ ನಾಯಕ ವಿರಾಟ್ ಕೊಹ್ಲಿ ಡಿಸೆಂಬರ್ 3, 2017 ರಂದು ದೆಹಲಿಯಲ್ಲಿ ಶ್ರೀಲಂಕಾ ವಿರುದ್ಧ 243 ರನ್ ಗಳಿಸಿದರು.

ಯಶಸ್ವಿ ಜೈಸ್ವಾಲ್

ಯಶಸ್ವಿ ಜೈಸ್ವಾಲ್ ಟೆಸ್ಟ್‌ನಲ್ಲಿ ಬ್ಯಾಕ್-ಟು-ಬ್ಯಾಕ್ ದ್ವಿಶತಕಗಳನ್ನು ಗಳಿಸಿದ ಮೂರನೇ ಮತ್ತು ಕಿರಿಯ ಭಾರತೀಯ ಬ್ಯಾಟರ್. ಇಂಗ್ಲೆಂಡ್ ವಿರುದ್ಧ 209 ರನ್ ಗಳಿಸಿದರು.

ಅಜೇಯ 214 ರನ್

ಫೆ. 18, 2024 ರಂದು ರಾಜ್‌ಕೋಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಜೈಸ್ವಾಲ್ 236 ಎಸೆತಗಳಲ್ಲಿ 214 ರನ್ ಗಳಿಸಿ ಅಜೇಯರಾಗಿ ಉಳಿದರು.