3ನೇ ಟೆಸ್ಟ್ನಲ್ಲಿ ನಿರ್ಮಾಣವಾಗಿದ್ದು ಒಂದಲ್ಲ, ಎರಡಲ್ಲ ಬರೋಬ್ಬರಿ 10 ದಾಖಲೆ
19 February 2024
Author: Vinay Bhat
ಭಾರತೀಯ ಕ್ರಿಕೆಟ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ (ರನ್‌ಗಳ ಮೂಲಕ) 434 ರನ್‌ಗಳ ಬೃಹತ್ ಅಂತರದೊಂದಿಗೆ ತಮ್ಮ ಅತಿ ದೊಡ್ಡ ಗೆಲುವನ್ನು ದಾಖಲಿಸಿತು.
ಅತಿ ದೊಡ್ಡ ಗೆಲುವು
ಭಾರತ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ (48) ಒಂದು ತಂಡದ ವಿರುದ್ಧ ಸರಣಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆಯನ್ನು ಮುರಿದಿದೆ.
ಸರಣಿಯಲ್ಲಿ ಅತಿ ಹೆಚ್ಚು ಸಿಕ್ಸರ್
ಭಾರತ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ (28) ಒಂದು ತಂಡದ ವಿರುದ್ಧ ಪಂದ್ಯವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆಯನ್ನು ಮುರಿದಿದೆ.
ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್
2019 ರಲ್ಲಿ ಆಫ್ರಿಕಾ ವಿರುದ್ಧ ರೋಹಿತ್ ನಿರ್ಮಿಸಿದ ದಾಖಲೆಯನ್ನು ಜೈಸ್ವಾಲ್ (19) ಮುರಿದು ಒಂದೇ ಸರಣಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಆಟಗಾರನಾದರು.
ಯಶಸ್ವಿ ಜೈಸ್ವಾಲ್
ಜೈಸ್ವಾಲ್ ತಮ್ಮ ದ್ವಿಶತಕದಲ್ಲಿ 12 ಸಿಕ್ಸರ್‌ಗಳನ್ನು ಗಳಿಸುವ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಗಳಿಸಿದ ವಾಸಿಂ ಅಕ್ರಮ್ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.
ವಿಶ್ವ ದಾಖಲೆ ಸಮ
ಜೈಸ್ವಾಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ಮೂರು ಶತಕಗಳನ್ನು 150+ ಸ್ಕೋರ್‌ಗೆ ಪರಿವರ್ತಿಸಿದ ಮೊದಲ ಭಾರತೀಯ ಮತ್ತು ಜಗತ್ತಿನ 7 ನೇ ಆಟಗಾರರಾದರು.
ಮೊದಲ ಭಾರತೀಯ
ಕೊಹ್ಲಿಯಂತೆ ಒಂದೇ ಸರಣಿಯಲ್ಲಿ ಎರಡು ದ್ವಿಶತಕಗಳನ್ನು ಗಳಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಜೈಸ್ವಾಲ್ ಪಾತ್ರರಾದರು.
ಕೊಹ್ಲಿ-ಜೈಸ್ವಾಲ್
ಈ ಹಿಂದೆ ಟೆಸ್ಟ್ ಸರಣಿಯೊಂದರಲ್ಲಿ ಹೆಚ್ಚು ರನ್ ಗಳಿಸಿದ ಭಾರತದ ಎಡಗೈ ಬ್ಯಾಟ್ಸ್‌ಮನ್ ಗಂಗೂಲಿ ಆಗಿದ್ದರು. ಆದರೀಗ ಜೈಸ್ವಾಲ್ 545 ರನ್ ಗಳಿಸಿ ಈ ದಾಖಲೆ ಮುರಿದಿದ್ದಾರೆ.
ಗಂಗೂಲಿ-ಜೈಸ್ವಾಲ್
ಭಾರತದ ನೆಲದಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರ ಎಂಬ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು (9) ಜಡೇಜಾ ಸರಿಗಟ್ಟಿದ್ದಾರೆ.
ಜಡೇಜಾ-ಕುಂಬ್ಳೆ
ಸರ್ಫರಾಜ್ ಅವರು ದಿಲಾವರ್, ಗವಾಸ್ಕರ್ ಮತ್ತು ಅಯ್ಯರ್ ಅವರೊಂದಿಗೆ ಚೊಚ್ಚಲ ಟೆಸ್ಟ್ನ ಎರಡೂ ಇನ್ನಿಂಗ್ಸ್‌ಗಳಲ್ಲಿ 50+ ಸ್ಕೋರ್ ಗಳಿಸಿದ ನಾಲ್ಕನೇ ಭಾರತೀಯರಾಗಿದ್ದಾರೆ.