29-01-2024

ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್'ನಲ್ಲಿ ನಿರ್ಮಾಣವಾದ ದಾಖಲೆಗಳ ಪಟ್ಟಿ ಇಲ್ಲಿದೆ

Author: Vinay Bhat

ಮೊದಲ ತಂಡ

ಹೈದರಾಬಾದ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಭಾರತವನ್ನು ಸೋಲಿಸಿದ ಮೊದಲ ತಂಡವಾಗಿದೆ. ಈ ಮೈದಾನದಲ್ಲಿ ಭಾರತ ಅನುಭವಿಸಿದ ಮೊದಲು ಟೆಸ್ಟ್ ಸೋಲು ಇದಾಗಿದೆ.

ಹೆಚ್ಚಿನ ರನ್‌ಗಳು

ಜೋ ರೂಟ್, ತೆಂಡೂಲ್ಕರ್ ಅವರ 2535 ರನ್‌ಗಳ ದಾಖಲೆ ಮುರಿದು ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು.

ಭಾರತ ವಿರುದ್ಧ

ರೂಟ್ ರಿಕಿ ಪಾಂಟಿಂಗ್ ಅವರ 2555 ರನ್ ಗಳಿಸಿದ ದಾಖಲೆಯನ್ನು ಮುರಿದು ಭಾರತದ ವಿರುದ್ಧ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು.

WTC ನಲ್ಲಿ 4000 ರನ್

ಜೋ ರೂಟ್ WTC ನಲ್ಲಿ 4000 ರನ್ ಗಳಿಸಿದ ಇತಿಹಾಸದ ಮೊದಲ ಬ್ಯಾಟರ್ ಆದರು. 48 ಪಂದ್ಯಗಳಲ್ಲಿ ಅವರು 4018 ರನ್ ಗಳಿಸಿದ್ದಾರೆ.

ಗರಿಷ್ಠ ಸ್ಕೋರ್

ಆಲಿ ಪೋಪ್ ಅಲಸ್ಟೈರ್ ಕುಕ್ ಅವರ 12 ವರ್ಷಗಳ ಹಳೆಯ ದಾಖಲೆ ಮುರಿದರು, ಭಾರತ ನೆಲದಲ್ಲಿನ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ಗೆ ಗರಿಷ್ಠ ವೈಯಕ್ತಿಕ ಸ್ಕೋರರ್ ಎನಿಸಿಕೊಂಡರು.

6ನೇ ಇಂಗ್ಲಿಷ್ ಆಟಗಾರ

ಟಾಮ್ ಹಾರ್ಟ್ಲಿ ಚೊಚ್ಚಲ ಟೆಸ್ಟ್‌ನಲ್ಲಿ ಇನ್ನಿಂಗ್ಸ್‌ನಲ್ಲಿ ಏಳು ವಿಕೆಟ್‌ಗಳನ್ನು ಪಡೆದ ಆರನೇ ಇಂಗ್ಲಿಷ್ ಆಟಗಾರರಾದರು.

150 ವಿಕೆಟ್

R. ಅಶ್ವಿನ್ WTC ನಲ್ಲಿ 150 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಮತ್ತು ಮೂರನೇ ಬೌಲರ್ ಎನಿಸಿಕೊಂಡರು.

ಅತಿ ಹೆಚ್ಚು ರನ್

ರೋಹಿತ್ ಶರ್ಮಾ, ಗಂಗೂಲಿ ಅವರನ್ನು ಹಿಂದಿಕ್ಕಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ 4ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು.

ಅತಿ ಹೆಚ್ಚು ವಿಕೆಟ್

ಜಡೇಜಾ ಅವರು ಜಾವಗಲ್ ಶ್ರೀನಾಥ್ (551) ಹಿಂದಿಕ್ಕಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಆರನೇ ಪ್ರಮುಖ ವಿಕೆಟ್ ಟೇಕರ್ ಎನಿಸಿಕೊಂಡರು.