12-01-2024

T20I ನಲ್ಲಿ ಅಧಿಕ ರನ್ ಬಾರಿಸಿದವರ ಪೈಕಿ ಭಾರತೀಯರಿಗೆ ಮೊದಲೆರಡು ಸ್ಥಾನ

Author: ಪೃಥ್ವಿ ಶಂಕರ

ಅಂತಾರಾಷ್ಟ್ರೀಯ ಟಿ20ಯಲ್ಲಿ ಕಿಂಗ್ ಕೊಹ್ಲಿ ಆಡಿರುವ 107 ಇನ್ನಿಂಗ್ಸ್‌ಗಳಲ್ಲಿ 4008 ರನ್ ಬಾರಿಸಿದ್ದಾರೆ.

ಎರಡನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ ಇದುವರೆಗೆ ಆಡಿರುವ 141 ಟಿ20 ಇನ್ನಿಂಗ್ಸ್‌ಗಳಲ್ಲಿ 3853 ರನ್ ಗಳಿಸಿದ್ದಾರೆ.

ಪಾಕ್ ತಂಡದ ಮಾಜಿ ನಾಯಕ ಬಾಬರ್ ಆಝಂ ಇದುವರೆಗೆ 99 ಟಿ20 ಇನ್ನಿಂಗ್ಸ್‌ಗಳಲ್ಲಿ 3542 ರನ್ ಬಾರಿಸಿದ್ದಾರೆ.

ಮಾರ್ಟಿನ್ ಗಪ್ಟಿಲ್ ಇದುವರೆಗೆ ಆಡಿರುವ 118 ಟಿ20 ಇನ್ನಿಂಗ್ಸ್‌ಗಳಲ್ಲಿ 3531 ರನ್ ಸಿಡಿಸಿದ್ದಾರೆ.

ಪೌಲ್ ಸ್ಟಿರ್ಲಿಂಗ್ ಇದುವರೆಗೆ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 133 ಇನ್ನಿಂಗ್ಸ್‌ಗಳಲ್ಲಿ 3438 ರನ್ ಗಳಿಸಿದ್ದಾರೆ.

ಆ್ಯರನ್ ಫಿಂಚ್ ಅಂತಾರಾಷ್ಟ್ರೀಯ ಟಿ20ಯಲ್ಲಿ 103 ಇನ್ನಿಂಗ್ಸ್‌ಗಳಲ್ಲಿ 3120 ರನ್ ಸಿಡಿಸಿದ್ದಾರೆ.

ಜೋಸ್ ಬಟ್ಲರ್ ಇದುವರೆಗೆ ಆಡಿರುವ 105 ಟಿ20 ಇನ್ನಿಂಗ್ಸ್‌ಗಳಲ್ಲಿ 2927 ರನ್ ಕಲೆಹಾಕಿದ್ದಾರೆ.

ಡೇವಿಡ್ ವಾರ್ನರ್ ಇದುವರೆಗೆ ಆಡಿರುವ 99 ಟಿ20 ಇನ್ನಿಂಗ್ಸ್‌ಗಳಲ್ಲಿ 2894 ರನ್ ಗಳಿಸಿದ್ದಾರೆ.

ಮೊಹಮ್ಮದ್ ರಿಜ್ವಾನ್ 74 ಟಿ20 ಇನ್ನಿಂಗ್ಸ್‌ಗಳಲ್ಲಿ 2822 ರನ್ ಸಿಡಿಸಿದ್ದಾರೆ.

ಕೇನ್ ವಿಲಿಯಮ್ಸನ್ ಇದುವರೆಗೆ 86 ಟಿ20 ಇನ್ನಿಂಗ್ಸ್‌ಗಳಲ್ಲಿ 2521 ರನ್ ಗಳಿಸಿದ್ದಾರೆ.