ಎರಡನೇ ದಿನದ ಟೆಸ್ಟ್ ಪಂದ್ಯಗಳನ್ನು ಭಾರತ ಎಷ್ಟು ಬಾರಿ ಆಡಿದೆ?

01 January 2024

Author: Vinay Bhat

ಅಫ್ಘಾನಿಸ್ತಾನದ ಮೊದಲ ಟೆಸ್ಟ್ ಪಂದ್ಯವು 2018 ರಲ್ಲಿ ಭಾರತದ ವಿರುದ್ಧ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿತ್ತು. ಇದು ಎರಡು ದಿನಗಳಲ್ಲಿ ಕೊನೆಗೊಂಡಿತು.

ಭಾರತ vs ಅಫ್ಘಾನಿಸ್ತಾನ

ಬೆಂಗಳೂರಿನಲ್ಲಿ ನಡೆದ ಐತಿಹಾಸಿಕ ಟೆಸ್ಟ್ ಪಂದ್ಯವನ್ನು ಭಾರತ ಇನ್ನಿಂಗ್ಸ್ ಮತ್ತು 262 ರನ್‌ಗಳ ಬೃಹತ್ ಅಂತರದಿಂದ ಗೆದ್ದುಕೊಂಡಿದೆ.

ಭಾರತ vs ಅಫ್ಘಾನಿಸ್ತಾನ

2021 ರಲ್ಲಿ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಿಂಕ್-ಬಾಲ್ ಟೆಸ್ಟ್ ಪಂದ್ಯವು ಎರಡು ದಿನಗಳಲ್ಲಿ ಕೊನೆಗೊಂಡಿತು.

ಭಾರತ vs ಇಂಗ್ಲೆಂಡ್

ಮೋದಿ ಸ್ಟೇಡಿಯಂ ನವೀಕರಣದ ನಂತರ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ 10 ವಿಕೆಟ್‌ಗಳಿಂದ ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿತು.

ಭಾರತ vs ಇಂಗ್ಲೆಂಡ್

ಇಂಗ್ಲೆಂಡ್ ತನ್ನ ಬ್ಯಾಟಿಂಗ್ ಇನ್ನಿಂಗ್ಸ್‌ನಲ್ಲಿ 112 ಮತ್ತು 81 ರನ್ ಗಳಿಸಿತು. ಭಾರತ ಮೊದಲ ಇನಿಂಗ್ಸ್‌ನಲ್ಲಿ 145 ರನ್'ಗಳ ಜೊತೆಗೆ 49 ರನ್‌ಗಳ ಗುರಿಯನ್ನು ವಿಕೆಟ್ ನಷ್ಟವಿಲ್ಲದೆ ಜಯಿಸಿತು.

ಭಾರತ vs ಇಂಗ್ಲೆಂಡ್

2024 ರ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡು ದಿನಗಳ ಟೆಸ್ಟ್ ಪಂದ್ಯವನ್ನು ಆಡಿದವು. ಇದು ತವರಿನಾಚೆಗೆ ನಡೆದ ಭಾರತದ ಮೊದಲ ಎರಡು ದಿನಗಳ ಟೆಸ್ಟ್ ಆಗಿದೆ.

ಭಾರತ vs ದಕ್ಷಿಣ ಆಫ್ರಿಕಾ

ಭಾರತ-ದಕ್ಷಿಣ ಆಫ್ರಿಕಾ ಕೇಪ್ ಟೌನ್ ಟೆಸ್ಟ್ 2 ನೇ ದಿನದ ಎರಡನೇ ಸೆಷನ್‌ನಲ್ಲಿ ಕೊನೆಗೊಂಡಿತು. ಇದು ಕೇವಲ 107 ಓವರ್‌ಗಳವರೆಗೆ ನಡೆಯಿತು.

ಭಾರತ vs ದಕ್ಷಿಣ ಆಫ್ರಿಕಾ

ಭಾರತವು 7 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದು ಸರಣಿಯನ್ನು 1-1 ರಿಂದ ಸಮಬಲಗೊಳಿಸಿತು ಮತ್ತು ಕೇಪ್‌ಟೌನ್‌ನಲ್ಲಿ ಮೊದಲ ಬಾರಿ ಟೆಸ್ಟ್ ಪಂದ್ಯ ಗೆದ್ದಿತು.

ಭಾರತ vs ದಕ್ಷಿಣ ಆಫ್ರಿಕಾ