23-05-2024

ಟೂರ್ನಿಯಿಂದ ಹೊರಬಿದ್ದ ಆರ್​ಸಿಬಿಗೆ ಸಿಕ್ತು ಕೋಟಿ ಕೋಟಿ ಹಣ: ಎಷ್ಟು?

Author: Vinay Bhat

ಆರ್'ಸಿಬಿ-ಆರ್'ಆರ್

ಐಪಿಎಲ್ 2024ರ ಎಲಿಮಿನೇಟರ್'ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋತು ಟೂರ್ನಿಯಿಂದ ಹೊರಬಿದ್ದಿದೆ.

Pic credit - Googlr

ರಾಜಸ್ಥಾನಕ್ಕೆ ಜಯ

ಅಹ್ಮದಾಬಾದ್‌ನಲ್ಲಿ ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ 4 ವಿಕೆಟುಗಳ ಜಯ ಸಾಧಿಸಿ ಎರಡನೇ ಎರಡನೇ​ಗೆ ಹೋಯಿತು. ಆರ್​ಸಿಬಿ 4ನೇ ಸ್ಥಾನದ ಮೂಲಕ ನಿರ್ಗಮಿಸಿತು.

Pic credit - Googlr

ಸೋತ ತಂಡ

ಈಗ ಸೋತ ತಂಡ ಆರ್​ಸಿಬಿಯ ಪ್ರಶಸ್ತಿ ಗೆಲ್ಲುವ ಕನಸು ಭಗ್ನವಾಗಿದೆ. ಆದರೆ ಫಾಫ್ ಪಡೆ ಬರಿಗೈಯಲ್ಲಿ ಹಿಂತಿರುಗುವುದಿಲ್ಲ. ಇವರಿಗೆ ಕೋಟಿ ಕೋಟಿ ಹಣ ಸಿಗಲಿದೆ.

Pic credit - Googlr

ದೊಡ್ಡ ಮೊತ್ತ

ಐಪಿಎಲ್ ಪ್ರಶಸ್ತಿ ಗೆದ್ದ ತಂಡ ಅಥವಾ ರನ್ನರ್ ಅಪ್ ಆಗುವ ತಂಡ ಮಾತ್ರವಲ್ಲ, ಮೂರನೇ ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡವೂ ಬೃಹತ್ ಮೊತ್ತವನ್ನು ಪಡೆಯುತ್ತದೆ.

Pic credit - Googlr

ಎಷ್ಟು ಹಣ?

ವರದಿಗಳ ಪ್ರಕಾರ, ಬೆಂಗಳೂರು ತಂಡ ನಾಲ್ಕನೇ ಸ್ಥಾನದಲ್ಲಿ ಉಳಿದುಕೊಂಡ ಕಾರಣ ಬಿಸಿಸಿಐನಿಂದ ಬರೋಬ್ಬರಿ 6.5 ಕೋಟಿ ರೂ. ನೀಡಲಿದೆ.

Pic credit - Googlr

ಚಾಂಪಿಯನ್​ಗೆ ಎಷ್ಟು?

ಐಪಿಎಲ್ ಪ್ರಶಸ್ತಿ ಗೆದ್ದ ತಂಡ ಗರಿಷ್ಠ 20 ಕೋಟಿ ರೂ., ಎರಡನೇ ಸ್ಥಾನ ಪಡೆದ ತಂಡ 13 ಕೋಟಿ ಹಾಗೂ ಮೂರನೇ ಸ್ಥಾನ ಪಡೆಯುವ ತಂಡ 7 ಕೋಟಿ ರೂ. ಪಡೆಯಲಿದೆ.

Pic credit - Googlr

ಕೆಕೆಆರ್ ಫೈನಲ್​ಗೆ

ಐಪಿಎಲ್ 2024 ರ ಪ್ಲೇಆಫ್​ನ ಮೊದಲ ಪಂದ್ಯದಲ್ಲಿ, ಕೋಲ್ಕತ್ತಾ ತಂಡ ಸನ್ ರೈಸರ್ಸ್ ಹೈದರಾಬಾದ್ ಅನ್ನು ಸೋಲಿಸುವ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿದೆ.

Pic credit - Googlr

ಆರ್​ಆರ್-ಹೈದರಬಾದ್

ಸದ್ಯ ಮೊದಲ ಎಲಿಮಿನೇಟರ್​ನಲ್ಲಿ ಗೆದ್ದ ರಾಜಸ್ಥಾನ್ ತಂಡ ಎರಡನೇ ಕ್ವಾಲಿಫೈಯರ್‌ಗೆ ತಲುಪಿದ್ದು, ಇಲ್ಲಿ ಸನ್​ರೈಸರ್ಸ್ ಹೈದರಾಬಾದ್ ಅನ್ನು ಎದುರಿಸಲಿದೆ.

Pic credit - Googlr