21-05-2024

ಅತಿ ಹೆಚ್ಚು ಬಾರಿ ಪ್ಲೇ ಆಫ್‌ ತಲುಪಿದ 5 ತಂಡಗಳು ಯಾವುವು ಗೊತ್ತೇ?

Author: Vinay Bhat

ಚೆನ್ನೈ ಸೂಪರ್ ಕಿಂಗ್ಸ್

ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ 12 ಬಾರಿ ಪ್ಲೇ ಆಫ್‌ಗಳಿಗೆ ಅರ್ಹತೆ ಪಡೆದಿದೆ. ಇತರೆ ಯಾವುದೇ ತಂಡ ಇಷ್ಟು ಬಾರಿ ಪ್ಲೇ ಆಫ್ ತಲುಪಿದ ಸಾಧನೆ ಮಾಡಿಲ್ಲ.

Pic credit - Googlr

ಚೆನ್ನೈ ಸೂಪರ್ ಕಿಂಗ್ಸ್

ಚೆನ್ನೈ ಸೂಪರ್ ಕಿಂಗ್ಸ್ 17 ಸೀಸನ್​ಗಳ ಐಪಿಎಲ್ ಇತಿಹಾಸದಲ್ಲಿ 5 ಬಾರಿ ಪ್ರಶಸ್ತಿಗಳನ್ನು ಗೆದ್ದ ಅತ್ಯಂತ ಯಶಸ್ವಿ ತಂಡವಾಗಿದೆ.

Pic credit - Googlr

ಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್ ಐಪಿಎಲ್ ಇತಿಹಾಸದಲ್ಲಿ 10 ಬಾರಿ ಪ್ಲೇ ಆಫ್ ತಲುಪಿದೆ. ಈ ಬಾರಿ ಕಳಪೆ ಪ್ರದರ್ಶನದಿಂದ ಮೊದಲ ತಂಡವಾಗಿ ನಿರ್ಗಮಿಸಿತು.

Pic credit - Googlr

ಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್ 5 ಐಪಿಎಲ್ ಪ್ರಶಸ್ತಿಗಳನ್ನು ಗೆದ್ದು ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಜಂಟಿ-ಅತ್ಯಂತ ಯಶಸ್ವಿ ತಂಡವಾಗಿದೆ.

Pic credit - Googlr

ರಾಯಲ್ ಚಾಲೆಂಜರ್ಸ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂಬತ್ತು ಬಾರಿ ಐಪಿಎಲ್ ಪ್ಲೇಆಫ್‌ಗಳಿಗೆ ಅರ್ಹತೆ ಪಡೆದಿದೆ. ಐಪಿಎಲ್ 2024 ರಲ್ಲಿ ಸಿಎಸ್​ಕೆ ವಿರುದ್ಧ ಗೆದ್ದು ಪ್ಲೇ ಆಫ್ ಪ್ರವೇಶಿಸಿತು.

Pic credit - Googlr

ಆರ್​ಸಿಬಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು, ಒಂಬತ್ತು ಪ್ಲೇ ಆಫ್ ಪಂದ್ಯಗಳ ಹೊರತಾಗಿಯೂ ಇದುವರೆಗೆ ಒಂದೇ ಒಂದು ಪ್ರಶಸ್ತಿಯನ್ನು ಗೆದ್ದಿಲ್ಲ.

Pic credit - Googlr

ಸನ್ ರೈಸರ್ಸ್

ಸನ್‌ರೈಸರ್ಸ್ ಹೈದರಾಬಾದ್ ತಂಡ ಒಂಬತ್ತು ಬಾರಿ ಐಪಿಎಲ್ ಪ್ಲೇ ಆಫ್‌ಗೆ ಅರ್ಹತೆ ಪಡೆದಿದೆ. ಈ ಬಾರಿ ಕೂಡ ಲಗ್ಗೆಯಿಟ್ಟಿದೆ.

Pic credit - Googlr

ಕೋಲ್ಕತ್ತಾ ನೈಟ್ ರೈಡರ್ಸ್

ಕೋಲ್ಕತ್ತಾ ನೈಟ್ ರೈಡರ್ಸ್ 8 ಬಾರಿ ಐಪಿಎಲ್ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ. ಇದರಲ್ಲಿ ಕೆಕೆಆರ್ ಎರಡು ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿದೆ.

Pic credit - Googlr