09-10-2023

World Cup: ಇಂದು ನ್ಯೂಜಿಲೆಂಡ್-ನೆದರ್ಲೆಂಡ್ಸ್ ಮುಖಾಮುಖಿ

ನ್ಯೂಜಿಲೆಂಡ್-ನೆದರ್ಲೆಂಡ್ಸ್

ಐಸಿಸಿ ಏಕದಿನ ವಿಶ್ವಕಪ್'ನಲ್ಲಿ ಇಂದು ನಡೆಯಲಿರುವ ಆರನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ನೆದರ್ಲೆಂಡ್ಸ್ ತಂಡಗಳು ಮುಖಾಮುಖಿ ಆಗುತ್ತಿವೆ.

ಪಂದ್ಯ ಎಲ್ಲಿ?

ನ್ಯೂಜಿಲೆಂಡ್ ಹಾಗೂ ನೆದರ್ಲೆಂಡ್ಸ್ ನಡುವಣ ಪಂದ್ಯ ಹೈದರಾಬಾದ್​ನ ರಾಜಿವ್ ಗಾಂಧಿ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿದೆ.

ಎಷ್ಟು ಗಂಟೆಗೆ?

ನ್ಯೂಜಿಲೆಂಡ್ ಹಾಗೂ ನೆದರ್ಲೆಂಡ್ಸ್ ಪಂದ್ಯ ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದ್ದು, 1:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.

ಕೇನ್ ಕಮ್​ಬ್ಯಾಕ್

ಇಂಜುರಿಯಿಂದ ಗುಣಮುಖರಾಗದ ನಾಯಕ ಕೇನ್ ವಿಲಿಯಮ್ಸನ್ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದರು. ಇದೀಗ ಫಿಟ್ ಆಗಿದ್ದು, ಇಂದು ಆಡಲಿದ್ದಾರೆ.

ಕಿವೀಸ್ ಬಲಿಷ್ಠ

ನೆದರ್ಲೆಂಡ್ಸ್​ಗೆ ಹೋಲಿಸಿದರೆ ನ್ಯೂಜಿಲೆಂಡ್ ತಂಡ ಬಲಿಷ್ಠವಾಗಿದೆ. ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 9 ವಿಕೆಟ್​ಗಳ ಜಯ ಸಾಧಿಸಿತ್ತು.

ಇಬ್ಬರು ಶತಕ

ಕಳೆದ ಪಂದ್ಯದಲ್ಲಿ ಡೆವೋನ್ ಕಾನ್ವೆ (ಅಜೇಯ 152) ಮತ್ತು ರಚಿನ್ ರವೀಂದ್ರ (ಅಜೇಯ 123) 283 ರನ್​ಗಳ ಜೊತೆಯಾಟ ಆಡಿ ತಂಡಕ್ಕೆ ಜಯ ತಂದುಕೊಟ್ಟಿದ್ದರು.

ನೆದರ್ಲೆಂಡ್ಸ್

ನೆದರ್ಲೆಂಡ್ಸ್ ತಂಡ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋತಿತ್ತು. ಆದರೂ ಪಾಕ್​ಗೆ ಕಠಿಣ ಪೈಪೋಟಿ ನೀಡಿದ್ದು ಸುಳ್ಳಲ್ಲ. ಹೀಗಾಗಿ ಡಚ್ ಪಡೆಯನ್ನು ಕಡೆಗಣಿಸುವಂತಿಲ್ಲ.

ವಿಶ್ವಕಪ್: ಭಾರತ-ಆಸ್ಟ್ರೇಲಿಯಾ ಪಂದ್ಯದ ರೋಚಕ ಕ್ಷಣಗಳು