10-11-2023

ಸೆಮೀಸ್​ಗೆ ಹತ್ತಿರವಾದ ಕಿವೀಸ್: ಇಲ್ಲಿದೆ ವಿಶ್ವಕಪ್ ಪಾಯಿಂಟ್ಸ್ ಟೇಬಲ್

ಭಾರತ

ಸೆಮೀಸ್'ಗೆ ಲಗ್ಗೆಯಿಟ್ಟಿರುವ ಟೀಮ್ ಇಂಡಿಯಾ ಆಡಿರುವ ಎಂಟು ಪಂದ್ಯಗಳ ಪೈಕಿ ಎಂಟರಲ್ಲೂ ಗೆದ್ದು 16 ಅಂಕ ಸಂಪಾದಿಸಿ ಮೊದಲ ಸ್ಥಾನದಲ್ಲಿ ಭದ್ರವಾಗಿದೆ.

ದಕ್ಷಿಣ ಆಫ್ರಿಕಾ

ದಕ್ಷಿಣ ಆಫ್ರಿಕಾ ತಂಡ ಕೂಡ ಸೆಮಿ ಫೈನಲ್ ಪ್ರವೇಶಿಸಿದ್ದು ದ್ವಿತೀಯ ಸ್ಥಾನದಲ್ಲಿದೆ. ಆಡಿರುವ ಎಂಟು ಪಂದ್ಯಗಳ ಪೈಕಿ ಆರರಲ್ಲಿ ಗೆದ್ದು 12 ಅಂಕ ಸಂಪಾದಿಸಿದೆ.

ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ತಂಡ ಆಡಿರುವ ಎಂಟು ಪಂದ್ಯಗಳ ಪೈಕಿ ಆರರಲ್ಲಿ ಗೆದ್ದು, ಎರಡರಲ್ಲಿ ಸೋತು 12 ಅಂಕ ಸಂಪಾದಿಸಿ ಮೂರನೇ ಸ್ಥಾನದಲ್ಲಿದ್ದು, ಸೆಮೀಸ್'ಗೆ ತಪುಪಿದೆ.

ನ್ಯೂಝಿಲೆಂಡ್

ಕಿವೀಸ್ ಆಡಿರುವ 9 ಪಂದ್ಯಗಳ ಪೈಕಿ ಐದರಲ್ಲಿ ಗೆದ್ದು, ನಾಲ್ಕರಲ್ಲಿ ಸೋತು 10 ಅಂಕ ಸಂಪಾದಿಸಿ ಸೆಮಿ ಫೈನಲ್​ಗೆ ಹತ್ತಿರವಾಗಿದೆ.

ಪಾಕಿಸ್ತಾನ

ಪಾಕಿಸ್ತಾನ ತಂಡ ಆಡಿರುವ ಎಂಟು ಪಂದ್ಯಗಳ ಪೈಕಿ ತಲಾ ನಾಲ್ಕರಲ್ಲಿ ಸೋಲು-ಗೆಲುವು ಕಂಡು 8 ಅಂಕ ಸಂಪಾದಿಸಿ 5ನೇ ಸ್ಥಾನದಲ್ಲಿದ್ದು, ಬಹುತೇಕ ಹೊರಬಿದ್ದಿದೆ.

ಅಫ್ಘಾನಿಸ್ತಾನ

ಅಫ್ಘಾನಿಸ್ತಾನ ತಂಡ ಕೂಡ 8 ಪಂದ್ಯಗಳ ಪೈಕಿ ನಾಲ್ಕು ಗೆಲುವು, ನಾಲ್ಕು ಸೋಲು ಕಂಡು 8 ಅಂಕ ಸಂಪಾದಿಸಿ ಆರನೇ ಸ್ಥಾನದಲ್ಲಿದ್ದು, ಟೂರ್ನಿಯಿಂದ ಔಟ್ ಆಗುವುದು ಖಚಿತ.

ಇಂಗ್ಲೆಂಡ್

ಇಂಗ್ಲೆಂಡ್ ತಂಡ ನೆದರ್ಲೆಂಡ್ಸ್ ವಿರುದ್ಧ ಗೆದ್ದು ಕೊನೆಯ ಸ್ಥಾನದಿಂದ ಏಳನೇ ಸ್ಥಾನಕ್ಕೆ ಜಿಗಿದಿದೆ. ಆಡಿರುವ 8 ಪಂದ್ಯಗಳ ಪೈಕಿ ಎರಡರಲ್ಲಿ ಗೆದ್ದು, ಆರರಲ್ಲಿ ಸೋತಿದೆ.

ಬಾಂಗ್ಲಾದೇಶ

ಬಾಂಗ್ಲಾದೇಶ ತಂಡ ಆಡಿರುವ 8 ಪಂದ್ಯಗಳ ಪೈಕಿ ಆರರಲ್ಲಿ ಸೋಲು, ಎರಡರಲ್ಲಿ ಗೆದ್ದು 4 ಅಂಕ ಸಂಪಾದಿಸಿ 8ನೇ ಸ್ಥಾನದಲ್ಲಿದ್ದು, ಟೂರ್ನಿಯಿಂದ ಔಟ್ ಆಗಿದೆ.

ಶ್ರೀಲಂಕಾ

ಶ್ರೀಲಂಕಾ ತಂಡ ಆಡಿರುವ ಒಂಬತ್ತು ಪಂದ್ಯಗಳ ಪೈಕಿ ಏಳರಲ್ಲಿ ಸೋತು, ಎರಡರಲ್ಲಿ ಗೆದ್ದು ನಾಲ್ಕು ಅಂಕದೊಂದಿಗೆ 9ನೇ ಸ್ಥಾನದಲ್ಲಿದೆ.

ನೆದರ್ಲೆಂಡ್ಸ್

ನೆದರ್ಲೆಂಡ್ಸ್ ತಂಡ ಕೂಡ ಆಡಿರುವ ಎಂಟು ಪಂದ್ಯಗಳ ಪೈಕಿ ಎರಡರಲ್ಲಷ್ಟೆ ಗೆದ್ದು ನಾಲ್ಕು ಅಂಕ ಸಂಪಾದಿಸಿ ಹತ್ತನೇ ಸ್ಥಾನದಲ್ಲಿದೆ.

ಗಿಲ್-ಸಾರಾ ತೆಂಡೂಲ್ಕರ್ ತಬ್ಬಿಕೊಂಡ ಫೋಟೋ ವೈರಲ್