17-10-2023

ವಿಶ್ವಕಪ್ ಪಾಯಿಂಟ್ಸ್ ಟೇಬಲ್​ನಲ್ಲಿ ದೊಡ್ಡ ಬದಲಾವಣೆ

ಪಾಯಿಂಟ್ಸ್ ಟೇಬಲ್

ಸೋಮವಾರ ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ ಗೆದ್ದ ಬಳಿಕ ಪಾಯಿಂಟ್ಸ್ ಟೇಬಲ್'ನಲ್ಲಿ ಬದಲಾವಣೆ ಆಗಿದ್ದು, ಕಾಂಗರೂ ಪಡೆ 8ನೇ ಸ್ಥಾನಕ್ಕೇರಿದೆ.

ಭಾರತ

ಟೀಮ್ ಇಂಡಿಯಾ ಆಡಿರುವ ಮೂರು ಪಂದ್ಯಗಳ ಪೈಕಿ ಮೂರರಲ್ಲೂ ಗೆದ್ದು ಆರು ಅಂಕ ಸಂಪಾದಿಸಿ ಅಗ್ರಸ್ಥಾನದಲ್ಲಿದೆ.

ನ್ಯೂಝಿಲೆಂಡ್

ನ್ಯೂಝಿಲೆಂಡ್ ಕೂಡ ಆಡಿರುವ ಮೂರು ಪಂದ್ಯಗಳ ಪೈಕಿ ಮೂರರಲ್ಲೂ ಗೆದ್ದು ಆರು ಅಂಕ ಸಂಪಾದಿಸಿ ರನ್​ರೇಟ್ ಆಧಾರದ ಮೇಲೆ ಎರಡನೇ ಸ್ಥಾನದಲ್ಲಿದೆ.

ದ. ಆಫ್ರಿಕಾ

ದಕ್ಷಿಣ ಆಫ್ರಿಕಾ ತಂಡ ಆಡಿರುವ ಎರಡು ಪಂದ್ಯಗಳ ಪೈಕಿ ಎರಡಲ್ಲೂ ಗೆದ್ದು ನಾಲ್ಕು ಅಂಕ ಸಂಪಾದಿಸಿ ಮೂರನೇ ಸ್ಥಾನದಲ್ಲಿದೆ.

ಪಾಕಿಸ್ತಾನ

ಪಾಕಿಸ್ತಾನ ತಂಡ ಆಡಿರುವ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಗೆದ್ದು ನಾಲ್ಕು ಅಂಕ ಸಂಪಾದಿಸಿ ನಾಲ್ಕನೇ ಸ್ಥಾನದಲ್ಲಿದೆ.

ಇಂಗ್ಲೆಂಡ್

ಇಂಗ್ಲೆಂಡ್ ತಂಡ ಆಡಿರುವ ಮೂರು ಪಂದ್ಯಗಳ ಪೈಕಿ ಒಂದರಲ್ಲಿ ಗೆಲುವು ಎರಡರಲ್ಲಿ ಸೋಲು ಕಂಡು 2 ಅಂಕ ಸಂಪಾದಿಸಿ ಐದನೇ ಸ್ಥಾನದಲ್ಲಿದೆ.

ಅಫ್ಘಾನಿಸ್ತಾನ

ಅಫ್ಘಾನಿಸ್ತಾನ ತಂಡ ಆಡಿರುವ ಮೂರು ಪಂದ್ಯಗಳ ಪೈಕಿ ಒಂದರಲ್ಲಿ ಗೆದ್ದು ಎರಡರಲ್ಲಿ ಸೋತು 2 ಅಂಕ ಸಂಪಾದಿಸಿ ಆರನೇ ಸ್ಥಾನದಲ್ಲಿದೆ.

ಬಾಂಗ್ಲಾದೇಶ

ಬಾಂಗ್ಲಾದೇಶ ತಂಡ ಆಡಿರುವ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಸೋಲು, ಒಂದರಲ್ಲಿ ಗೆದ್ದು ಎರಡು ಅಂಕ ಸಂಪಾದಿಸಿ ಏಳನೇ ಸ್ಥಾನದಲ್ಲಿದೆ.

ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ತಂಡ ಆಡಿರುವ ಮೂರು ಪಂದ್ಯಗಳ ಪೈಕಿ ಒಂದರಲ್ಲಿ ಗೆದ್ದು, ಎರಡರಲ್ಲಿ ಸೋಲುಂಡು 2 ಅಂಕ ಸಂಪಾದಿಸಿ ಎಂಟನೇ ಸ್ಥಾನದಲ್ಲಿದೆ.

ಶ್ರೀಲಂಕಾ

ಶ್ರೀಲಂಕಾ ತಂಡ ಆಡಿರುವ 3 ಪಂದ್ಯಗಳ ಪೈಕಿ ಮೂರರಲ್ಲೂ ಸೋತು ಖಾತೆ ತೆರೆಯದೆ ಒಂಬತ್ತನೇ ಸ್ಥಾನದಲ್ಲಿದೆ.

ನೆದರ್ಲೆಂಡ್ಸ್

ನೆದರ್ಲೆಂಡ್ಸ್ ತಂಡ ಕೂಡ ಆಡಿರುವ ಎರಡು ಪಂದ್ಯಗಳ ಪೈಕಿ ಎರಡಲ್ಲೂ ಸೋತು ಖಾತೆ ತೆರೆಯದೆ ಹತ್ತನೇ ಸ್ಥಾನದಲ್ಲಿದೆ.

ಬಿರುಗಾಳಿ ಎಬ್ಬಿಸಿದ ಧನಶ್ರೀಯ ಹೊಸ ಹಾಟ್ ಫೋಟೋ