ವಿಶ್ವಕಪ್ ಫೈನಲ್​ನಲ್ಲಿ ಅಂಪೈರ್​ಗೆ ಸಿಗುತ್ತಿರುವ ಸಂಬಳ ಎಷ್ಟು ಗೊತ್ತೇ

18-November-2023

ವಿಶ್ವಕಪ್-2023ರ ಅತಿ ದೊಡ್ಡ ಪಂದ್ಯ ಭಾನುವಾರ ನಡೆಯಲಿದೆ. ಅಹಮದಾಬಾದ್'ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಆಸ್ಟ್ರೇಲಿಯಾ ಫೈನಲ್ ನಡೆಯಲಿದೆ.

ವಿಶ್ವಕಪ್ ಫೈನಲ್

ಟೀಮ್ ಇಂಡಿಯಾ ನಾಲ್ಕನೇ ಬಾರಿಗೆ ಫೈನಲ್ ಆಡಲಿದ್ದು, ಮೂರನೇ ಬಾರಿ ವಿಶ್ವಕಪ್ ಗೆಲ್ಲುವ ಆಸೆಯಲ್ಲಿದೆ. ಇತ್ತ ಆಸ್ಟ್ರೇಲಿಯಾಕ್ಕೆ ಇದು ಎಂಟನೇ ಫೈನಲ್.

ನಾಲ್ಕನೇ ಫೈನಲ್

ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದ ಅಂಪೈರ್‌ಗಳ ಹೆಸರನ್ನು ಪ್ರಕಟಿಸಿದೆ. ಈ ಪಂದ್ಯದಲ್ಲಿ ರಿಚರ್ಡ್ ಇಲಿಂಗ್‌ವರ್ತ್ ಮತ್ತು ರಿಚರ್ಡ್ ಕ್ಯಾಟಲ್‌ಬ್ರೋ ಫೀಲ್ಡ್ ಅಂಪೈರ್‌ಗಳಾಗಿದ್ದಾರೆ.

ಅಂಪೈರ್ಸ್ ಯಾರು?

ಮೂರನೇ ಅಂಪೈರ್ ಆಗಿ ಜೋಯಲ್ ವಿಲ್ಸನ್, ನಾಲ್ಕನೇ ಅಂಪೈರ್ ಆಗಿ ಕ್ರಿಸ್ ಗಫಾನಿ ಹಾಗೂ ಮ್ಯಾಚ್ ರೆಫರಿಯಾಗಿ ಆಂಡಿ ಪೊಯ್ಕ್ರಾಫ್ಟ್ ಕಾರ್ಯನಿರ್ವಹಿಸಲಿದ್ದಾರೆ.

ಮೂರನೇ ಅಂಪೈರ್

ವಿಶ್ವಕಪ್ ಫೈನಲ್‌ನಲ್ಲಿ ಕಾರ್ಯನಿರ್ವಹಿಸುವ ಈ ಅಂಪೈರ್‌ಗಳಿಗೆ ಬರೋಬ್ಬರಿ 5 ಸಾವಿರ ಡಾಲರ್ (ಸುಮಾರು 4 ಲಕ್ಷ 20 ಸಾವಿರ ರೂ.) ಐಸಿಸಿ ನೀಡುತ್ತದೆ.

ಎಷ್ಟು ಸಂಬಳ?

ಫೈನಲ್'ಗೆ ಆಯ್ಕೆಯಾದ ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ರಿಚರ್ಡ್ ಕ್ಯಾಟಲ್‌ಬ್ರೋ ಇಬ್ಬರೂ ಇಂಗ್ಲೆಂಡ್‌ನವರಾಗಿದ್ದಾರೆ.

ಇಂಗ್ಲೆಂಡ್‌ನವರು

ರಿಚರ್ಡ್ ಕ್ಯಾಟಲ್‌ಬ್ರೋ ಅವರು 2015ರ ವಿಶ್ವಕಪ್ ಫೈನಲ್‌ನಲ್ಲಿಯೂ ಅಂಪೈರ್ ಆಗಿದ್ದರು. ಆಗ ನ್ಯೂಝಿಲೆಂಡ್ ತಂಡವನ್ನು ಸೋಲಿಸಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿತ್ತು.

2015ರ ಫೈನಲ್‌

ಭಾರತ-ಆಸೀಸ್ ಪ್ಲೇಯರ್ಸ್ ಮೋದಿ ಸ್ಟೇಡಿಯಂನಲ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ. ಪಂದ್ಯ ಆರಂಭಕ್ಕೂ ಮುನ್ನ ಸಮಾರೋಪ ಸಮಾರಂಭ ಕೂಡ ನಡೆಯಲಿದೆ.

ಭರ್ಜರಿ ಅಭ್ಯಾಸ

ಪಟಾಕಿ ಸಿಡಿಸಲು ಧೋನಿ ಮನೆಗೆ ತೆರಳಿದ ರಿಷಭ್ ಪಂತ್