14-11-2023

ಪಟಾಕಿ ಸಿಡಿಸಲು ಧೋನಿ ಮನೆಗೆ ತೆರಳಿದ ರಿಷಭ್ ಪಂತ್

ಟೀಮ್ ಇಂಡಿಯಾ ದೀಪಾವಳಿ

ದೀಪಾವಳಿಯನ್ನು ಭಾರತ ತಂಡ ಭರ್ಜರಿ ಆಗಿ ಆಚರಿಸುತ್ತಿದೆ. ಬೆಂಗಳೂರಿನಲ್ಲಿ ರೋಹಿತ್ ಶರ್ಮಾ ಪಡೆ ಸಾಂಪ್ರದಾಯಿಕ ಉಡುಗೆಯಲ್ಲಿರುವ ಫೋಟೋ ವೈರಲ್ ಆಗಿತ್ತು.

ಧೋನಿ-ಪಂತ್

ಟೀಮ್ ಇಂಡಿಯಾ ದೀಪಾವಳಿ ಆಚರಿಸುತ್ತಿರುವ ಮಧ್ಯೆ ಅತ್ತ ರಿಷಬ್ ಪಂತ್ ಅವರು ಎಂಎಸ್ ಧೋನಿ ಮನೆಗೆ ತೆರಳಿದ್ದಾರೆ.

ಪಂತ್-ಧೋನಿ ದೀಪಾವಳಿ

ಪಂತ್ ಅವರು ಧೋನಿ ಮನೆಗೆ ತೆರಳಿ ಧೋನಿ ಕುಟುಂಬ ಸದಸ್ಯರ ಜೊತೆಗೆ ಪಟಾಕಿ ಸಿಡಿಸಿ ಅದ್ಧೂರಿ ಆಗಿ ದೀಪಾವಳಿ ಆಚರಣೆ ಮಾಡಿದ್ದಾರೆ.

ಸಾಕ್ಷಿ ಧೋನಿ

ಸಾಕ್ಷಿ ಧೋನಿ ಅವರು ಧೋನಿ ಮತ್ತು ಪಂತ್ ಜೊತೆ ದೀಪಾವಳಿ ಆಚರಿಸುತ್ತಿರುವ ಫೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಮಿಂಚಿದ ಧೋನಿ-ಪಂತ್

ದೀಪಾವಳಿ ಆಚರಣೆಯ ಸಂದರ್ಭದಲ್ಲಿ, ಧೋನಿ ಮತ್ತು ಪಂತ್ ಇಬ್ಬರೂ ಪೈಜಾಮಾದಲ್ಲಿ ಮಿಂಚಿದ್ದು, ಇವರ ಫೋಟೋ ವೈರಲ್ ಆಗುತ್ತಿದೆ.

ಸಾಕ್ಷಿ ಧೋನಿ

ಧೋನಿ ಪತ್ನಿ ಸಾಕ್ಷಿ ಕೂಡ ಬಿಳಿ ಉಡುಪಿನಲ್ಲಿ ಫೋಟೋಕ್ಕೆ ಪೋಸ್ ನೀಡಿದ್ದಾರೆ. ಪಂತ್ ಅವರು ಧೋನಿ ಕುಟುಂಬದೊಂದಿಗೆ ಪಟಾಕಿ ಹಚ್ಚಿ ಸಂಭ್ರಮಿಸಿದ್ದಾರೆ.

ಪಾಂಟಿಂಗ್-ಪಂತ್

ಪಂತ್ ಅವರು ಧೋನಿ ಮನೆಗೆ ತೆರಳುವ ಮುನ್ನ ರಿಕಿ ಪಾಂಟಿಂಗ್ ಅವರೊಂದಿಗೆ ದೀಪಾವಳಿಯನ್ನು ಆಚರಿಸಿದರು. ಪಂತ್, ಪಾಂಟಿಂಗ್'ಗೆ ದೀಪಾವಳಿ ಗಿಫ್ಟ್ ನೀಡಿದ್ದಾರೆ.

ಸೆಮಿಫೈನಲ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯರು ಯಾರು?