21-10-2023

ನೆದರ್ಲೆಂಡ್ಸ್ ಆಟಗಾರರಿಗೆ ಸಿಗುವ ಸಂಬಳ ಕೇಳಿದ್ರೆ ಶಾಕ್ ಆಗ್ತೀರಿ

ನೆದರ್ಲೆಂಡ್ಸ್

ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್-2023 ರಲ್ಲಿ, ನೆದರ್ಲೆಂಡ್ಸ್ ತಂಡ ಅಚ್ಚರಿಯ ಪ್ರದರ್ಶನ ತೋರುತ್ತಿದೆ.

ಇಂದು ಪಂದ್ಯ

ಕಳೆದ ಪಂದ್ಯದಲ್ಲಿ ಅಚ್ಚರಿ ಎಂಬಂತೆ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದ ನೆದರ್ಲೆಂಡ್ಸ್ ಇಂದು ಶ್ರೀಲಂಕಾವನ್ನು ಎದುರಿಸಲಿದೆ.

ಸಂಬಳ ಕಡಿಮೆ

ನೆದರ್ಲೆಂಡ್ಸ್​ನಲ್ಲಿ ಕ್ರಿಕೆಟ್ ಹೆಚ್ಚು ಜನಪ್ರಿಯವಾಗಿಲ್ಲ. ಈ ದೇಶದಲ್ಲಿ ಕೇವಲ ಏಳು ಪಿಚ್‌ಗಳಿವೆಯಷ್ಟೆ. ಈ ತಂಡದ ಆಟಗಾರರ ಸಂಭಾವನೆಯೂ ತೀರಾ ಕಡಿಮೆ.

ಸಂಬಳ ಎಷ್ಟು

NBT ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ನೆದರ್ಲೆಂಡ್ಸ್ ಆಟಗಾರರು 100 ಯುರೋಗಳನ್ನು ಪಡೆಯುತ್ತಾರೆ, ಅಂದರೆ ಸುಮಾರು 8800 ರೂ.

ರಣಜಿಗಿಂತ ಕಡಿಮೆ

ಭಾರತದ ದೇಶೀಯ ಟೂರ್ನಿ ರಣಜಿ ಟ್ರೋಫಿಯ ಆಟಗಾರರಿಗೆ ಹೋಲಿಸಿದರೆ, ಇದು ತುಂಬಾ ಕಡಿಮೆ. 20 ರಣಜಿ ಪಂದ್ಯಗಳನ್ನು ಆಡುವ ಆಟಗಾರನಿಗೆ ಬಿಸಿಸಿಐ ದಿನಕ್ಕೆ 50,000 ರೂ. ನೀಡುತ್ತದೆ.

ಐದು ಪಟ್ಟು ಹೆಚ್ಚು

ಭಾರತದ ದೇಶೀಯ ಕ್ರಿಕೆಟಿಗರು 50,000 ರೂ. ಪಡೆಯುತ್ತಾರೆ. ಆದರೆ ನೆದರ್ಲೆಂಡ್ಸ್ ಕ್ರಿಕೆಟಿಗರು ಸಂಬಳ ತೀರಾ ಕಡಿಮೆ. ಭಾರತದವರುಸುಮಾರು ಐದು ಪಟ್ಟು ಹೆಚ್ಚು ಹಣ ಪಡೆಯುತ್ತಾರೆ.

ಭಾರತೀಯರು

ವಿಶೇಷ ಎಂದರೆ ನೆದರ್ಲೆಂಡ್ಸ್ ತಂಡದಲ್ಲಿ ಭಾರತೀಯ ಆಟಗಾರರು ಕೂಡ ಇದ್ದಾರೆ. ಆರ್ಯನ್ ದತ್, ತೇಜ ನಿಡಮನೂರು, ವಿಕ್ರಮಜಿತ್ ಸಿಂಗ್ ಭಾರತೀಯ ಮೂಲದವರು.

ಕೊಹ್ಲಿ ಹತ್ತಿರ ಬಂದ ವಾರ್ನರ್: ದಾಖಲೆ ಸಮ-ಸಮ