T20 ವಿಶ್ವಕಪ್‌ನಲ್ಲಿ 1000 ಕ್ಕಿಂತ ಹೆಚ್ಚು ರನ್ ಗಳಿಸಿದ 2 ಆಟಗಾರರು

02-03-2024

T20 ವಿಶ್ವಕಪ್‌ನಲ್ಲಿ 1000 ಕ್ಕಿಂತ ಹೆಚ್ಚು ರನ್ ಗಳಿಸಿದ 2 ಆಟಗಾರರು

Author: Vinay Bhat

TV9 Kannada Logo For Webstory First Slide

ವಿರಾಟ್ ಕೊಹ್ಲಿ

ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ.

1141 ರನ್

27 ಪಂದ್ಯಗಳ 25 ಇನ್ನಿಂಗ್ಸ್‌ಗಳಲ್ಲಿ ವಿರಾಟ್ ಕೊಹ್ಲಿ ಭಾರತಕ್ಕಾಗಿ ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ 1141 ರನ್ ಗಳಿಸಿದ್ದಾರೆ. ಇದು ದಾಖಲೆ ಆಗಿದೆ.

2 ಬಾರಿ ಸಾಧನೆ

ಟಿ20 ವಿಶ್ವಕಪ್‌ನ 2014 (319 ರನ್) ಮತ್ತು 2022 (296 ರನ್) ಆವೃತ್ತಿಗಳಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದರು.

ಮಹೇಲಾ ಜಯವರ್ಧನೆ

1000 ರನ್ ಗಳಿಸಿದ ಮೊದಲ ಬ್ಯಾಟರ್ ಶ್ರೀಲಂಕಾದ ಮಾಜಿ ನಾಯಕ, ದಿಗ್ಗಜ ಬ್ಯಾಟರ್ ಮಹೇಲಾ ಜಯವರ್ಧನೆ ಆಗಿದ್ದಾರೆ.

1016 ರನ್

ಶ್ರೀಲಂಕಾ ಪರ 31 ಐಸಿಸಿ ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಮಹೇಲಾ ಜಯವರ್ಧನೆ ಅವರು ಒಟ್ಟು 1016 ರನ್ ಗಳಿಸಿದ್ದಾರೆ.

2010ರಲ್ಲಿ ಸಾಧನೆ

2010ರ ಟಿ20 ವಿಶ್ವಕಪ್‌ನಲ್ಲಿ ಜಯವರ್ಧನೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಆರು ಪಂದ್ಯಗಳಲ್ಲಿ ಅವರು 302 ರನ್ ಗಳಿಸಿದ್ದರು.

ವಿಶ್ವಕಪ್ ವಿಜೇತ

ಸ್ಟಾರ್ ಮಾಜಿ ಬ್ಯಾಟರ್ ಮಹೇಲಾ ಜಯವರ್ಧನೆ 2014ರಲ್ಲಿ ಟಿ20 ವಿಶ್ವಕಪ್ ಗೆದ್ದ ಶ್ರೀಲಂಕಾ ತಂಡದ ಭಾಗವಾಗಿದ್ದರು.