ಕಿಶನ್-ಅಯ್ಯರ್ ಅದ್ಧೂರಿ ಲೈಫ್ಗೆ ಬ್ರೇಕ್: ಬಿಸಿಸಿಐಯ 3 ಸೌಲಭ್ಯ ಕಟ್
02 March 2024
Author: Vinay Bhat
ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಕ್ರಿಕೆಟ್ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಬಿಸಿಸಿಐ ಅವರನ್ನು ಕೇಂದ್ರ ಗುತ್ತಿಗೆಯಿಂದ ಕೈಬಿಟ್ಟಿದ್ದು, ದೊಡ್ಡ ಹಿನ್ನಡೆಯಾಗಿದೆ.
ಕಿಶನ್-ಅಯ್ಯರ್
ಶ್ರೇಯಸ್ ಅಯ್ಯರ್ ಈ ಹಿಂದೆ ವಾರ್ಷಿಕವಾಗಿ 3 ಕೋಟಿ ರೂ. ಪಡೆಯುತ್ತಿದ್ದರು. ಅಂತೆಯೆ ಇಶಾನ್ ಕಿಶನ್ 1 ಕೋಟಿ ಪಡೆಯುತ್ತಿದ್ದರು, ಈಗ ಇಬ್ಬರಿಗೂ ಈ ಹಣ ಸಿಗುವುದಿಲ್ಲ.
ಕೋಟಿ ನಷ್ಟ
ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರಿಗೆ ಬಿಸಿಸಿಐ ನೀಡಿದ್ದ 3 ದೊಡ್ಡ ಸೌಲಭ್ಯಗಳು ಇನ್ಮುಂದೆ ಸಿಗುವುದಿಲ್ಲ. ಈ ಸೌಲಭ್ಯಗಳಿಂದ ಅವರು ವಂಚಿತರಾಗಿದ್ದಾರೆ.
ಸೌಲಭ್ಯ ಕಟ್
ಈಗ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಮೊದಲಿನಂತೆ ಎನ್‌ಸಿಎ ಸೌಲಭ್ಯಗಳನ್ನು ಪಡೆಯುವುದಿಲ್ಲ, ಅವರು ಈಗ ರಾಜ್ಯ ಕ್ರಿಕೆಟ್ ಸಂಸ್ಥೆಯನ್ನು ಅವಲಂಬಿಸಬೇಕಾಗಿದೆ.
NCA ಸೌಲಭ್ಯ
ಅಯ್ಯರ್-ಇಶಾನ್ ಬಿಸಿಸಿಐ ವಿಮಾ ರಕ್ಷಣೆಯನ್ನು ಕೂಡ ಪಡೆಯುವುದಿಲ್ಲ. ಅಂದರೆ ಬಿಸಿಸಿಐ ಕಡೆಯಿಂದ ಇವರಿಗೆ ಯಾವುದೇ ಚಿಕಿತ್ಸೆ ನೀಡಲಾಗುವುದಿಲ್ಲ. ರಾಜ್ಯ ಕ್ರಿಕೆಟ್ ಸಂಸ್ಥೆಯನ್ನು ಅವಲಂಬಿಸಬೇಕು.
ಬಿಸಿಸಿಐ ವಿಮಾ ರಕ್ಷಣೆ
ಅಯ್ಯರ್-ಇಶಾನ್ ಅವರನ್ನು ಕೇಂದ್ರ ಒಪ್ಪಂದದಿಂದ ಕೈಬಿಟ್ಟಿರುವ ಕಾರಣ ಇವರಿಬ್ಬರ ಬ್ರಾಂಡ್ ಮೌಲ್ಯವೂ ಗಮನಾರ್ಹವಾಗಿ ಕುಸಿಯುವುದು ಖಚಿತ.
ಬ್ರಾಂಡ್ ಮೌಲ್ಯ
ಇವೆಲ್ಲದರ ನಡುವೆ ಕಿಶನ್-ಅಯ್ಯರ್ ಬಹಿನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ಗೆ ಆಯ್ಕೆ ಆಗುವುದು ಕೂಡ ಅನುಮಾನ ಎಂದು ಹೇಳಲಾಗುತ್ತಿದೆ.