ಆಂಗ್ಲರ ವಿರುದ್ಧ ಕಿವೀಸ್​ನ ಸೇಡಿನ ಸೆಣಸಾಟ

ಇಂಗ್ಲೆಂಡ್ vs ನ್ಯೂಝಿಲೆಂಡ್

ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ವಿಶ್ವಕಪ್ 2023 ರ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಕಣಕ್ಕಿಳಿಯಲಿವೆ.

ಮೊದಲ ಪಂದ್ಯ

2019ರ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಝಿಲೆಂಡ್ ಸೋಲನುಭವಿಸಿತ್ತು. ಇದೀಗ 4 ವರ್ಷಗಳ ಬಳಿಕ ವಿಶ್ವಕಪ್ ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿವೆ.

ಸೇಡಿನ ಸೆಣಸಾಟ

ಕಳೆದ ವಿಶ್ವಕಪ್ ನ ಫೈನಲ್ ಪಂದ್ಯವು ಟೈನಲ್ಲಿ ಅಂತ್ಯ ಕಂಡಿದ್ದರಿಂದ ಅತೀ ಹೆಚ್ಚು ಬೌಂಡರಿ ಬಾರಿಸಿದ ಇಂಗ್ಲೆಂಡ್ ಅನ್ನು ಚಾಂಪಿಯನ್ ಎಂದು ಘೋಷಿಸಲಾಗಿತ್ತು.

ಅದೃಷ್ಟದಾಟ

ಇದೀಗ ವಿಶ್ವಕಪ್ ನ ಮೊದಲ ಪಂದ್ಯದಲ್ಲೇ ಇಂಗ್ಲೆಂಡ್ ಗೆ ಸೋಲುಣಿಸಿ ಸೇಡುವ ತೀರಿಸಿಕೊಳ್ಳುವ ತವಕದಲ್ಲಿದೆ ನ್ಯೂಝಿಲೆಂಡ್ ತಂಡ.

ಕಿವೀಸ್ ಪಡೆ ಸಜ್ಜು

ಆದರೆ ಅತ್ತ ಇಂಗ್ಲೆಂಡ್ ತಂಡವು ಬಲಿಷ್ಠ ಬಳಗವನ್ನು ಹೊಂದಿದ್ದು, ಹೀಗಾಗಿ ಮೊದಲ ಪಂದ್ಯದಲ್ಲೇ ಶುಭಾರಂಭ ಮಾಡುವ ಇರಾದೆಯಲ್ಲಿದೆ. 

ಬಲಿಷ್ಠ ಬಳಗ

ಉಭಯ ತಂಡಗಳು ಏಕದಿನ ವಿಶ್ವಕಪ್ ನಲ್ಲಿ ಇದುವರೆಗೆ 10 ಬಾರಿ ಮುಖಾಮುಖಿಯಾಗಿದೆ. ಈ ವೇಳೆ ಇಂಗ್ಲೆಂಡ್ 5 ಪಂದ್ಯ ಗೆದ್ದರೆ, ನ್ಯೂಝಿಲೆಂಡ್ 5 ಮ್ಯಾಚ್ ಗಳಲ್ಲಿ ಜಯ ಸಾಧಿಸಿದೆ.

ಸಮಬಲ

ಇನ್ನು ಅಹಮದಾಬಾದ್ ನಲ್ಲಿ ಎರಡೂ ತಂಡಗಳು 2 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಎರಡೂ ಮ್ಯಾಚ್ ಗಳಲ್ಲೂ ಇಂಗ್ಲೆಂಡ್ ತಂಡಕ್ಕೆ ನ್ಯೂಝಿಲೆಂಡ್ ಸೋಲುಣಿಸಿದೆ. ಹಾಗಾಗಿ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಆಘಾತ ನೀಡುವ ವಿಶ್ವಾಸದಲ್ಲಿದೆ ನ್ಯೂಝಿಲೆಂಡ್.

ನ್ಯೂಝಿಲೆಂಡ್ ಮೇಲುಗೈ