07-10-2023

ವಿಶ್ವಕಪ್ ಮೊದಲ ಪಂದ್ಯದಲ್ಲೇ ಕಳ್ಳಾಟವಾಡಿತು ಪಾಕಿಸ್ತಾನ?

ಪಾಕ್-ನೆದರ್ಲೆಂಡ್ಸ್

ಐಸಿಸಿ ವಿಶ್ವಕಪ್'ನಲ್ಲಿ ಶುಕ್ರವಾರ ನೆದರ್ಲೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ 81 ರನ್'ಗಳ ಜಯ ಸಾಧಿಸಿತು.

ಪಾಕ್ ಕಳ್ಳಾಟ

ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ ಕಳ್ಳಾಟ ಆಡಿತೇ ಎಂಬ ಅನುಮಾನ ಹುಟ್ಟುಕೊಂಡಿದೆ. ನೆದರ್ಲೆಂಡ್ಸ್ ಬ್ಯಾಟಿಂಗ್ ಇನ್ನಿಂಗ್ಸ್ ವೇಳೆಯ ಫೋಟೋ ಒಂದು ವೈರಲ್ ಆಗುತ್ತಿದೆ.

ಫೋಟೋದಲ್ಲಿ ಏನಿದೆ?

ವೈರಲ್ ಆಗುತ್ತಿರುವ ಫೋಟೋದಲ್ಲಿ, ಬೌಂಡರಿ ರೋಪ್ ಆರಂಭದಲ್ಲಿ ಇಟ್ಟ ಜಾಗಕ್ಕಿಂತ ಸ್ವಲ್ಪ ಹಿಂದಕ್ಕೆ ಇದೆ ಮತ್ತು ಪಾಕಿಸ್ತಾನದ ಆಟಗಾರ ಅಲ್ಲಿ ಫೀಲ್ಡಿಂಗ್ ಮಾಡುತ್ತಿರುವುದು ಕಾಣಬಹುದು.

ಪಾಕ್-ನೆದರ್ಲೆಂಡ್ಸ್

ಈಗ ಪ್ರಶ್ನೆ ಏನೆಂದರೆ ಆರಂಭದಲ್ಲಿ ಇಟ್ಟ ಜಾಗದಿಂದ ಬೌಂಡರಿ ರೋಪ್ ಅನ್ನು ಹಿಂದಕ್ಕೆ ಸರಿಸಿದವರು ಯಾರು ಎಂಬುದು. ಈ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಆದರೆ, ಇದು ಆಟದ ನಿಯಮಗಳಿಗೆ ವಿರುದ್ಧ.

22ನೇ ಓವರ್‌

ಬೌಂಡರಿ ರೋಪ್ ಸುಮಾರು ಅರ್ಧಗಂಟೆಗಳ ಕಾಲ ತನ್ನ ಮೂಲ ಸ್ಥಳದಿಂದ ಹಿಂದೆ ಸರಿಯುತ್ತಲೇ ಇತ್ತು. ನೆದರ್ಲೆಂಡ್ಸ್ ಬ್ಯಾಟಿಂಗ್ ಇನ್ನಿಂಗ್ಸ್‌ನ 22ನೇ ಓವರ್‌ನಲ್ಲಿ ಇದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿವಾದ ಆಗಬಹುದಿತ್ತು

ಈ ಅವಧಿಯಲ್ಲಿ ಯಾವುದಾದರೂ ನೆದರ್ಲೆಂಡ್ಸ್ ಬ್ಯಾಟರ್ ದೊಡ್ಡ ಶಾಟ್ ಆ ಜಾಗಕ್ಕೆ ಹೊಡೆದಿದ್ದರೆ ವಿವಾದ ಉಂಟಾಗಬಹುದಿತ್ತು.

ನಿಯಮ ಏನಿದೆ?

MCC ನಿಯಮ 19.3.1 ರ ಪ್ರಕಾರ, ಆ ಗೆರೆಯನ್ನು ಅದರ ಮೂಲ ಸ್ಥಾನ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಪಾಕ್ ಆಟಗಾರ ನಿಯಮ ಉಲ್ಲಂಘಿಸಿದರೆ..?

ಗಿಲ್​ಗೆ ಡೆಂಗ್ಯೂ: ಶುಭ್‌ಮನ್‌ ಜಾಗಕ್ಕೆ ಈ ಆಟಗಾರ