06-10-2023

ಗಿಲ್'ಗೆ ಡೆಂಗ್ಯೂ: ಶುಭ್‌ಮನ್‌ ಜಾಗಕ್ಕೆ ಈ ಆಟಗಾರ

ಗಿಲ್'ಗೆ ಡೆಂಗ್ಯೂ

ಭಾರತ ಕ್ರಿಕೆಟ್ ತಂಡ್ ಸ್ಟಾರ್ ಆರಂಭಿಕ ಶುಭ್‌ಮನ್‌ ಗಿಲ್ ಅವರಿಗೆ ಡೆಂಘೀ ಸೋಂಕು ದೃಢ ಪಟ್ಟಿದೆ. ಇವರು ವಿಶ್ವಕಪ್ ಆರಂಭಿಕ ಪಂದ್ಯದಿಂದ ಹೊರಗುಳಿಯಲಿದ್ದಾರೆ.

ಭಾರತ-ಆಸೀಸ್

ಭಾರತ ಕ್ರಿಕೆಟ್ ತಂಡ ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ವಿಶ್ವಕಪ್'ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.

ಗಿಲ್ ಔಟ್

ಗಿಲ್ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಆಸೀಸ್ ವಿರುದ್ಧದ ಮೊದಲ ವಿಶ್ವಕಪ್ ಪಂದ್ಯದಿಂದ ಗಿಲ್ ಔಟ್ ಆಗಿದ್ದಾರೆ.

ಇಶಾನ್ ಕಿಶನ್

ಗಿಲ್ ಅನುಪಸ್ಥಿತಿ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಇವರ ಬದಲು ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್ ಆಡುವ ಸಾಧ್ಯತೆ ಇದೆ.

ಇಂದು ಮತ್ತೊಮ್ಮೆ ಟೆಸ್ಟ್

ಗಿಲ್ ಇಂದು ಮತ್ತೊಮ್ಮೆ ಡೆಂಗ್ಯೂ ಪರೀಕ್ಷೆಗೆ ಒಳಗಾಗಲಿದ್ದಾರೆ. ಜ್ವರ ತೀವ್ರವಾಗಿದ್ದರೆ ಗಿಲ್ ಮೊದಲ ಎರಡು ಪಂದ್ಯಗಳನ್ನು ಕಳೆದುಕೊಳ್ಳಬಹುದು.

ಅಭ್ಯಾಸಕ್ಕೆ ಗೈರು

ಚೆನ್ನೈಗೆ ಬಂದಿಳಿದ ನಂತರ ಶುಭ್‌ಮನ್‌ಗೆ ತೀವ್ರ ಜ್ವರವಿತ್ತು. ಹೀಗಾಗಿ ಅವರು ಪ್ರ್ಯಾಕ್ಟೀಸ್ ಸೆಷನ್​ಗೆ ಕೂಡ ಹಾಜರಾಗಲಿಲ್ಲ.

ಪಂದ್ಯ ಎಲ್ಲಿ?

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದೆ.

ಕೊಹ್ಲಿ ಬಳಿ ಎಷ್ಟು ಕಾರುಗಳಿವೆ ಗೊತ್ತೇ?: ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ