ದೆಹಲಿಗೆ ಬಂದ ರೋಹಿತ್ ಪಡೆ: ಡೆಲ್ಲಿ ಪಿಚ್ ಹೇಗಿದೆ ನೋಡಿ

10 Oct 2023

Pic credit -  Google

ಏಕದಿನ ವಿಶ್ವಕಪ್'ನಲ್ಲಿ ಭಾರತ ತಂಡ ತನ್ನ ಮುಂದಿನ ಪಂದ್ಯವನ್ನು ಅಫ್ಘಾನಿಸ್ತಾನ ವಿರುದ್ಧ ಅಕ್ಟೋಬರ್ 11 ರಂದು ಆಡಲಿದೆ.

ಭಾರತ-ಅಫ್ಘಾನ್

ತನ್ನ ಮುಂದಿನ ಪಂದ್ಯಕ್ಕಾಗಿಟ ಟೀಮ್ ಇಂಡಿಯಾ ಆಟಗಾರರು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂಗೆ ತಲುಪಿದ್ದಾರೆ.

ದೆಹಲಿಗೆ ಭಾರತ

ಅರುಣ್ ಜೇಟ್ಲಿ ಕ್ರೀಡಾಂಗಣವು ಬ್ಯಾಟರ್‌ಗಳಿಗೆ ಹೆಚ್ಚು ಸಹಕಾರಿ ಆಗಲಿದೆ. ಇಲ್ಲಿನ ಪಿಚ್ ಒಣ ಮೇಲ್ಮೈ ಮತ್ತು ಸಣ್ಣ ಬೌಂಡರಿಗಳಿಂದ ಕೂಡಿದೆ.

ಪಿಚ್ ಹೇಗಿದೆ?

ಚಿಕ್ಕ ಬೌಂಡರಿ ಇರುವ ಕಾರಣ ಬ್ಯಾಟರ್‌ಗಳಿಗೆ ಫೋರ್ ಮತ್ತು ಸಿಕ್ಸರ್‌ಗಳನ್ನು ಹೊಡೆಯಲು ಸುಲಭವಾಗುತ್ತದೆ. ಹೀಗಾಗಿ ರನ್ ಮಳೆ ನಿರೀಕ್ಷಿಸಲಾಗಿದೆ.

ರನ್ ಮಳೆ

ಪಂದ್ಯವು ಮುಂದುವರೆದಂತೆ ಈ ಪಿಚ್‌ ಸ್ಪಿನ್ನರ್‌ಗಳಿಗೆ ಪ್ರಯೋಜನವನ್ನು ನೀಡುತ್ತದೆ. ವೇಗಿಗಳು ಇಲ್ಲಿ ದೊಡ್ಡ ಯಶಸ್ಸು ಸಾಧಿಸುವುದಿಲ್ಲ.

ಸ್ಪಿನ್ನರ್​ಗಳಿಗೆ ನೆರವು

ಈ ಪಿಚ್ ಪರಿಸ್ಥಿತಿಗಳನ್ನು ಗಮನಿಸಿದರೆ, ಟಾಸ್ ಗೆದ್ದ ತಂಡಗಳು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯ ತಂತ್ರವಾಗಿದೆ.

ಟಾಸ್ ಪಾತ್ರ

ಭಾರತ ಹಾಗೂ  ಅಫ್ಘಾನಿಸ್ತಾನ ನಡುವಣ ಪಂದ್ಯ ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದೆ. 1:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.

ಪಂದ್ಯ ಎಷ್ಟು ಗಂಟೆಗೆ?

ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಶುಭ್​ಮನ್ ಗಿಲ್ ಆಸ್ಪತ್ರೆಗೆ ದಾಖಲಾಗಿದ್ದು, ಅಫ್ಘಾನ್ ವಿರುದ್ಧದ ಪಂದ್ಯದಿಂದಲೂ ಹೊರಬಿದ್ದಿದ್ದಾರೆ.

ಗಿಲ್ ಔಟ್

ಶುಭ್​ಮನ್ ಗಿಲ್ ಆಸ್ಪತ್ರೆಗೆ ದಾಖಲು