10-10-2023

ಶುಭ್​ಮನ್ ಗಿಲ್ ಆಸ್ಪತ್ರೆಗೆ ದಾಖಲು

ಆಸ್ಪತ್ರೆಗೆ ಗಿಲ್

ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಟೀಮ್ ಇಂಡಿಯಾ ಸ್ಟಾರ್ ಓಪನರ್ ಶುಭ್'ಮನ್ ಗಿಲ್ ಅವರನ್ನು ಚೆನ್ನೈ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿಕಿತ್ಸೆ

ಶುಭ್​ಮನ್ ಗಿಲ್ ಅವರಿಗೆ ಪ್ರಸ್ತುತ ಚೆನ್ನೈನಲ್ಲಿರುವ ಕಾವೇರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.

ಪ್ಲೇಟ್‌ಲೆಟ್ ಕೌಂಟ್

ಗಿಲ್ ಅವರ ಪ್ಲೇಟ್‌ಲೆಟ್ ಕೌಂಟ್ ಕಡಿಮೆಯಾಗಿದೆ. ಹೀಗಿರುವಾಗ ಪ್ರಯಾಣ ಒಳ್ಳೆಯದಲ್ಲ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಗಿಲ್ ಅಲಭ್ಯ

ಬುಧವಾರ ವಿಶ್ವಕಪ್​ನಲ್ಲಿ ನಡೆಯಲಿರುವ ಭಾರತ ಮತ್ತು ಅಫ್ಘಾನಿಸ್ತಾನ ನಡುವಣ ಪಂದ್ಯದಿಂದ ಗಿಲ್ ಹೊರಬಿದ್ದಿದ್ದಾರೆ.

ಪಾಕ್ ಪಂದ್ಯಕ್ಕೂ ಅಲಭ್ಯ

ಗಿಲ್ ಅವರು ಶನಿವಾರ ಅಹಮದಾಬಾದ್‌ನಲ್ಲಿ ನಡೆಯುವ ಹೈ-ವೋಲ್ಟೇಜ್ ಭಾರತ-ಪಾಕಿಸ್ತಾನ ಪಂದ್ಯವನ್ನು ಕೂಡ ಕಳೆದುಕೊಳ್ಳುವ ಸಂಭವವಿದೆ.

ಭಾರತಕ್ಕೆ ಹಿನ್ನಡೆ

ಶುಭ್​ಮನ್ ಗಿಲ್ ಅನುಪಸ್ಥಿತಿ ಟೀಮ್ ಇಂಡಿಯಾಕ್ಕೆ ದೊಡ್ಡ ಹಿನ್ನಡೆಯಾಗಿದೆ. ಭರ್ಜರಿ ಫಾರ್ಮ್​ನಲ್ಲಿದ್ದ ಗಿಲ್ ಅನುಪಸ್ಥಿತಿ ತಂಡದಲ್ಲಿ ಎದ್ದು ಕಾಣುತ್ತಿದೆ.

ಕಿಶನ್ ವಿಫಲ

ಗಿಲ್ ಜಾಗದಲ್ಲಿ ಸ್ಥಾನ ಪಡೆದುಕೊಂಡಿರುವ ಇಶಾನ್ ಕಿಶನ್ ಮಿಂಚುವಲ್ಲಿ ವಿಫಲರಾಗಿದ್ದಾರೆ. ಆಸೀಸ್ ವಿರುದ್ಧ ಇವರು ಸೊನ್ನೆ ಸುತ್ತಿದ್ದರು.

ವಿಶ್ವಕಪ್: ಭಾರತ-ಆಸ್ಟ್ರೇಲಿಯಾ ಪಂದ್ಯದ ರೋಚಕ ಕ್ಷಣಗಳು