23-11-2023

IND vs AUS 1st T20I: ವಿಶಾಖಪಟ್ಟಣಂ ಪಿಚ್ ಯಾರಿಗೆ ಸಹಕಾರಿ?

ಭಾರತ-ಆಸ್ಟ್ರೇಲಿಯಾ

ವಿಶ್ವಕಪ್ ಫೈನಲ್ ಮುಖಾಮುಖಿ ಬಳಿಕ ಇಂದು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮೊದಲ ಟಿ20 ಪಂದ್ಯದಲ್ಲಿ ಸೆಣೆಸಾಟ ನಡೆಸಲಿದೆ.

ಪಂದ್ಯ ಎಲ್ಲಿ?

ವಿಶಾಖಪಟ್ಟಣಂನ ಡಾ. ವೈಎಸ್. ರಾಜಶೇಖರ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ-ಆಸ್ಟ್ರೇಲಿಯಾ ಮೊದಲ ಟಿ20 ಪಂದ್ಯ ಆಯೋಜಿಸಲಾಗಿದೆ.

ಸೂರ್ಯಕುಮಾರ್ ನಾಯಕ

ನಿಯಮಿತ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಇತರ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ, ಸೂರ್ಯಕುಮಾರ್ ಯಾದವ್ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಪಿಚ್ ಹೇಗಿದೆ?

ಇಲ್ಲಿನ ಪಿಚ್ ಬ್ಯಾಟಿಂಗ್ ಟ್ರ್ಯಾಕ್‌ಗಳಿಗೆ ಹೆಸರುವಾಸಿಯಾಗಿದ್ದು, ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾಗಿದೆ. ಆದಾಗ್ಯೂ, ಸ್ಪಿನ್ನರ್‌ಗಳು ಇಲ್ಲಿ ಯಶಸ್ಸು ಸಾಧಿಸುತ್ತಾರೆ.

ಇಬ್ಬನಿ

ಪಂದ್ಯವು ಸಂಜೆ 7 ಗಂಟೆಗೆ ಪ್ರಾರಂಭವಾಗುವುದರಿಂದ, ಇಬ್ಬನಿ ಅಂಶವು ಎರಡೂ ತಂಡಗಳ ಮೇಲೆ ಪರಿಣಾಮ ಬೀರಬಹುದು. ವಿಶೇಷವಾಗಿ ಚೇಸಿಂಗ್ ತಂಡಕ್ಕೆ ಸುಲಭವಾಗಬಹುದು.

ಸರಾಸರಿ ಸ್ಕೋರ್

ಇಲ್ಲಿ ಇತ್ತೀಚಿಗೆ ನಡೆದ ಪಂದ್ಯಗಳಲ್ಲಿ ಚೇಸಿಂಗ್ ತಂಡ ಹೆಚ್ಚು ಗೆದ್ದ ಸಾಧನೆ ಮಾಡಿದೆ. ಈ ಮೈದಾನದಲ್ಲಿ ಮೊದಲ ಇನ್ನಿಂಗ್ಸ್‌ ಸರಾಸರಿ ಸ್ಕೋರ್ ಸುಮಾರು 119 ಆಗಿದೆ.

ಹವಾಮಾನ?

ವಿಶಾಖಪಟ್ಟಣದಲ್ಲಿ ಶೇ. 60 ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಸಂಜೆ 7 ರಿಂದ 10:30ವರೆಗೆ ಆಟದ ಸಮಯದಲ್ಲಿ ಮೋಡ ಕವಿದ ವಾತಾವರಣವಿರಲಿದೆ ಎನ್ನಲಾಗಿದೆ.

ಯುವ ಪಡೆ

ಟೀಮ್ ಇಂಡಿಯಾ ಹಾಗೂ ಕಾಂಗರೂ ಪಡೆಯಲ್ಲಿ ವಿಶ್ವಕಪ್ ಆಡಿದ ಹೆಚ್ಚಿನ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಇದೊಂದು ಯುವ ಪಡೆಯ ಸರಣಿ ಎನ್ನಬಹುದು.

IND vs AUS ಟಿ20 ಸರಣಿಯಿಂದಲೂ ಔಟ್: ಚಹಲ್ ಟ್ವೀಟ್ ವೈರಲ್