02-12-2023
ಚಿನ್ನಸ್ವಾಮಿ ಮೈದಾನದ ಟಿ20 ದಾಖಲೆ ಹೇಗಿದೆ ಗೊತ್ತಾ?
Author: ಪೃಥ್ವಿ ಶಂಕರ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಐದನೇ ಹಾಗೂ ಕೊನೆಯ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದುವರೆಗೆ 7 ಅಂತಾರಾಷ್ಟ್ರೀಯ ಟಿ20 ಪಂದ್ಯಗಳು ನಡೆದಿವೆ.
2012ರಲ್ಲಿ ಇಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಮೊದಲ ಟಿ20 ಪಂದ್ಯ ನಡೆದಿದ್ದು, ಇದರಲ್ಲಿ ಪಾಕಿಸ್ತಾನ ಗೆದ್ದಿತ್ತು.
ಭಾರತ ಇಲ್ಲಿ 5 ಟಿ20 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 2ಪಂದ್ಯಗಳಲ್ಲಿ ಗೆದ್ದಿದ್ದು, 3 ಪಂದ್ಯಗಳಲ್ಲಿ ಸೋತಿದೆ.
ಇನ್ನು ಈ ಮೈದಾನದಲ್ಲಿ ನಡೆದಿದ್ದ ಒಂದು ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ, ಭಾರತವನ್ನು 7 ವಿಕೆಟ್‌ಗಳಿಂದ ಮಣಿಸಿತ್ತು.
ಈ ಮೈದಾನದಲ್ಲಿ ನಡೆದಿರುವ 7 ಪಂದ್ಯಗಳಲ್ಲಿ ಮೊದಲು ಬೌಲಿಂಗ್ ಮಾಡಿರುವ ತಂಡ 5 ಬಾರಿ ಗೆಲುವು ದಾಖಲಿಸಿದೆ.
ಈ ಮೈದಾನದಲ್ಲಿ 2 ಇನಿಂಗ್ಸ್‌ಗಳಲ್ಲಿ 6 ವಿಕೆಟ್ ಪಡೆದಿರುವ ಯುಜ್ವೇಂದ್ರ ಚಹಾಲ್ ಟಿ20 ಮಾದರಿಯಲ್ಲಿ ಅತಿ ಹೆಚ್ಚು ವಿಕೆಟ್ ಉರುಳಿಸಿರುವ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.
NEXT: ಈ 12 ನಗರಗಳಲ್ಲಿ ನಡೆಯಲ್ಲಿದೆ ಪ್ರೊ ಕಬಡ್ಡಿ ಲೀಗ್ 2023