ರಾಯ್‌ಪುರದಲ್ಲಿ ನಡೆಯಲ್ಲ ಬ್ಯಾಟರ್​ಗಳ ಆಟ: ಇಲ್ಲಿದೆ ಪಿಚ್ ರಿಪೋರ್ಟ್

01-December-2023

Author: Vinay Bhat

ಇಂದು ಭಾರತ-ಆಸ್ಟ್ರೇಲಿಯಾ ನಡುವೆ ರಾಯ್'ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಾಲ್ಕನೇ ಟಿ20 ಪಂದ್ಯ ಆಯೋಜಿಸಲಾಗಿದೆ.

ಭಾರತ-ಆಸ್ಟ್ರೇಲಿಯಾ

ಈಗಾಗಲೇ ಟೀಮ್ ಇಂಡಿಯಾ 2-1 ಮುನ್ನಡೆಯಲ್ಲಿರುವ ಕಾರಣ ಇಂದಿನ ಪಂದ್ಯ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ. ಆದರೆ, ಸುಲಭವಿಲ್ಲ.

ಸರಣಿ ಕೈವಶ

ಅನೇಕ ಭಾರತೀಯ ಪಿಚ್‌ಗಳು ಸಾಮಾನ್ಯವಾಗಿ ಬ್ಯಾಟರ್‌ಗಳಿಗೆ ಒಲವು ತೋರಿದರೆ, ರಾಯ್‌ಪುರದ ಟ್ರ್ಯಾಕ್ ಇದಕ್ಕೆ ವಿರುದ್ಧವಾಗಿದೆ.

ರಾಯ್‌ಪುರ ಪಿಚ್

ಪಂದ್ಯದುದ್ದಕ್ಕೂ ಪಿಚ್ ನಿಧಾನವಾಗುವುದರಿಂದ ಬ್ಯಾಟರ್‌ಗಳು ಇಲ್ಲಿ ಸವಾಲುಗಳನ್ನು ಎದುರಿಸುವುದು ಖಚಿತ. ಇದು ಸ್ಪಿನ್ನರ್‌ಗಳಿಗೆ ಅನುಕೂಲಕರವಾಗಿದೆ.

ನಿಧಾನ ಪಿಚ್

ವೇಗಿಗಳು ಈ ಪಿಚ್'ನಲ್ಲಿ ನಿಧಾನಗತಿಯಿಂದ ಬೌಲಿಂಗ್ ಮಾಡಿದರೆ ಮಾತ್ರ ಯಶಸ್ಸು ಸಾಧ್ಯ. ಇಲ್ಲಿ ಪಂದ್ಯದುದ್ದಕ್ಕೂ ಬ್ಯಾಟರ್'ಗಳು ಪರದಾಡುವುದು ಖಚಿತ.

ವೇಗಿಗಳಿಗೆ?

ಶಹೀದ್ ವೀರ್ ನಾರಾಯಣ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಕೇವಲ ಅಂತರರಾಷ್ಟ್ರೀಯ ಒಂದು ಪಂದ್ಯವಷ್ಟೆ ನಡೆದಿದೆ. ಹೀಗಾಗಿ ಪಿಚ್ ಯಾವರೀತಿ ವರ್ತಿಸುತ್ತದೆ ತಿಳಿದಿಲ್ಲ.

ಕೇವಲ ಒಂದು ಪಂದ್ಯ

ಇಲ್ಲಿ ಆತಿಥ್ಯ ವಹಿಸಿರುವ 29 ದೇಶೀಯ ಟಿ20 ಪಂದ್ಯಗಳಲ್ಲಿ, ಮೊದಲು ಬ್ಯಾಟಿಂಗ್ ಮಾಡಿದ ತಂಡಗಳಿಗಿಂತ ಚೇಸಿಂಗ್ ಮಾಡುವ ತಂಡಗಳು 16-13 ದಾಖಲೆ ಹೊಂದಿದೆ.

ಚೇಸಿಂಗ್

ಅಕ್ಯುವೆದರ್ ಪ್ರಕಾರ, ಡಿಸೆಂಬರ್ 1 ರಂದು ರಾಯ್‌ಪುರದಲ್ಲಿ ಮಂಜು ಕವಿದ ವಾತಾವರಣ ಇರುತ್ತದೆ. ಪಂದ್ಯದ ಸಮಯದಲ್ಲಿ ಗರಿಷ್ಠ ತಾಪಮಾನ 19 ಡಿಗ್ರು C. ಹೀಗಾಗಿ ಮಳೆ ಬೀಳುವ ಸಾಧ್ಯತೆಯಿಲ್ಲ.

ಹವಾಮಾನ?