ಬೆಂಗಳೂರಿನ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಕಾಟ?: ಇಲ್ಲಿದೆ ಹವಾಮಾನ ವರದಿ
Author: Vinay Bhat
ಭಾರತ-ಆಸ್ಟ್ರೇಲಿಯಾ
ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ-ಆಸ್ಟ್ರೇಲಿಯಾ ನಡುವೆ ಅಂತಿಮ ಐದನೇ ಟಿ20 ಪಂದ್ಯ ಆಯೋಜಿಸಲಾಗಿದೆ.
ಮಳೆ ಕಾಟ?
Weather.com ಪ್ರಕಾರ, ಭಾರತ-ಆಸ್ಟ್ರೇಲಿಯಾ ಐದನೇ ಟಿ20 ಪಂದ್ಯದ ಸಮಯದಲ್ಲಿ ಇಂದು ಬೆಂಗಳೂರಿನಲ್ಲಿ 9-13% ಮಳೆಯಾಗುವ ಸಾಧ್ಯತೆಯಿದೆ.
ತಾಪಮಾನ
ಬೆಂಗಳೂರಿನಲ್ಲಿ ಆರ್ದ್ರತೆಯು ಶೇ. 93 ರಷ್ಟು ಹೆಚ್ಚು ಇರುತ್ತದೆ. ಪಂದ್ಯದ ವೇಳೆ ತಾಪಮಾನ ಸುಮಾರು 21-23 ಡಿಗ್ರಿ ಇರುತ್ತದೆ ಎನ್ನಲಾಗಿದೆ.
ವಾಷ್‌ಔಟ್?
ಅಕ್ಯುವೆದರ್ ಪ್ರಕಾರ , ರಾತ್ರಿ 8 ರಿಂದ 9 ರವರೆಗೆ ಸ್ವಲ್ಪ ಮಳೆಯಾಗುವ ಮುನ್ಸೂಚನೆ ಇದೆ. ಆದರೆ, ಬೆಂಗಳೂರಿನಲ್ಲಿ ಪಂದ್ಯ ವಾಷ್‌ಔಟ್ ಭೀತಿ ಇಲ್ಲ.
ಪಿಚ್ ಹೇಗಿದೆ?
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬ್ಯಾಟಿಂಗ್ ಸ್ವರ್ಗವಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ODI ವಿಶ್ವಕಪ್‌ನಲ್ಲಿ, ಹೆಚ್ಚಿನ ತಂಡಗಳು ತಮ್ಮ ಇನ್ನಿಂಗ್ಸ್‌ನಲ್ಲಿ 300 ಕ್ಕಿಂತ ಹೆಚ್ಚು ರನ್ ಗಳಿಸಿದವು.
8 T20I ಪಂದ್ಯ
ಚಿನ್ನಸ್ವಾಮಿಯಲ್ಲಿ ಆಡಿದ 8 T20Iಗಳಲ್ಲಿ, ಎರಡನೇ ಬ್ಯಾಟಿಂಗ್ ಮಾಡಿದ ತಂಡಗಳು 5 ಗೆದ್ದರೆ, ಮೊದಲು ಬ್ಯಾಟ್ ಮಾಡಿದ ತಂಡ ಎರಡು ಬಾರಿ ಗೆದ್ದಿದೆ.
ವೇಗಿಗಳು?
ಈ ಪಿಚ್'ನಲ್ಲಿ ವೇಗದ ಬೌಲರ್ಸ್ ಮತ್ತು ಸ್ಪಿನ್ನರ್‌ಗಳಿಗೆ ಸ್ವಲ್ಪ ಸಹಾಯವಿದೆಯಾದರೂ, ಸಣ್ಣ ಬೌಂಡರಿಗಳು ಬೌಲರ್'ಗಳಿಗೆ ಸವಾಲೊಡ್ಡಲಿದೆ.
ಪಂದ್ಯ ಎಷ್ಟು ಗಂಟೆಗೆ?
ಭಾರತ-ಆಸ್ಟ್ರೇಲಿಯಾ ಐದನೇ ಟಿ20 ಪಂದ್ಯ ಸಂಜೆ 7 ಗಂಟೆಗೆ ಶುರುವಾಗಲಿದೆ. 6:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.