1ಲಕ್ಷಕ್ಕೂ ಅಧಿಕ ಫ್ಯಾನ್ಸ್: ನರೇಂದ್ರ ಮೋದಿ ಸ್ಟೇಡಿಯಂ ಎದುರು ಜನಸಾಗರ

19 November 2023

ಇಂದು ಅಹ್ಮದಾಬಾದ್'ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ.

ಭಾರತ-ಆಸೀಸ್

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಹೈವೋಲ್ಟೇಜ್ ಫೈನಲ್ ಪಂದ್ಯ ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದೆ. 1:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.

2 ಗಂಟೆಗೆ

ನರೇಂದ್ರ ಮೋದಿ ಸ್ಟೇಡಿಯಂ ಎದುರು ಈಗಾಗಲೇ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಬಂದಿದ್ದಾರೆ. ಸ್ಟೇಡಿಯಂ ಹೊರಗಡೆ 1 ಲಕ್ಷಕ್ಕೂ ಅಧಿಕ ಫ್ಯಾನ್ಸ್ ಸೇರಿದ್ದಾರೆ.

ಜನಸಾಗರ

ಮ್ಯಾಚ್ ವೀಕ್ಷಿಸಲು ಹಲವಾರು ವಿವಿಐಪಿಗಳು ಸೇರಿದಂತೆ 1 ಲಕ್ಷಕ್ಕೂ ಹೆಚ್ಚು ಜನರು ಕ್ರೀಡಾಂಗಣಕ್ಕೆ ಬರುತ್ತಾರೆ. ಅಭಿಮಾನಿಗಳು ಸುಲಭವಾಗಿ ತಲುಪಲು ಎಲ್ಲ ವ್ಯವಸ್ಥೆ ಮಾಡಲಾಗಿದೆ.

ಉತ್ತಮ ವ್ಯವಸ್ಥೆ

ಅಭಿಮಾನಿಗಳಿಗೆ ಯಾವುದೇ ತೊಂದರೆಯಾಗದಂತೆ ಹತ್ತಿರದ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಗೇಟ್ ಸಂಖ್ಯೆ 1, 2 ರಿಂದ ಪ್ರವೇಶ ಪಡೆಯುತ್ತಾರೆ.

ವಾಹನ ನಿರ್ಬಂಧ

ಪ್ರಧಾನಿ ಮೋದಿ, ಅಮಿತ್ ಶಾ, ಆಸ್ಟ್ರೇಲಿಯಾ ಉಪ ಪ್ರಧಾನಿ ರಿಚರ್ಡ್ ಮಾರ್ಲ್ಸ್, ಸಚಿನ್ ಸೇರಿದಂತೆ ವಿವಿಐಪಿಗಳು ಆಗಮನಿಸುವ ಕಾರಣ ಫೂಲ್ ಪ್ರೂಫ್ ಪ್ಲಾನಿಂಗ್ ವ್ಯವಸ್ಥೆ ಮಾಡಲಾಗಿದೆ.

ವಿವಿಐಪಿಗಳು

ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಖಾಸಗಿ ಜೆಟ್‌ನಲ್ಲಿ ಅಹ್ಮದಾಬಾದ್'ಗೆ ತಲುಪಿದ್ದಾರೆ. ಸಾರಾ ತೆಂಡೂಲ್ಕರ್, ಅಥಿಯಾ ಶೆಟ್ಟಿ ಕೂಡ ಬಂದಿದ್ದಾರೆ.

ಅನುಷ್ಕಾ ಶರ್ಮಾ

ಫೈನಲ್'ನಲ್ಲಿ ಭಾರತ ಗೆಲ್ಲಲೆಂದು ಆಟಗಾರರ ಕುಟುಂಬದವರು, ಬಾಲಿವುಡ್, ಸ್ಯಾಂಡಲ್'ವುಡ್ ನಟ-ನಟಿಯರು ಶುಭಕೋರಿದ್ದಾರೆ. ಹೋಮ-ಹವನಗಳು ಕೂಡ ನಡೆಯುತ್ತಿವೆ.

ಶುಭಾಶಯಗಳು

ವಿಶ್ವಕಪ್ ಗೆದ್ದರೂ ಭಾರತಕ್ಕೆ ಸಿಗಲ್ಲ ಈ ಟ್ರೋಫಿ: ಯಾಕೆ ಗೊತ್ತೇ?