19-11-2023

ವಿಶ್ವಕಪ್ ಗೆದ್ದರೂ ಭಾರತಕ್ಕೆ ಸಿಗಲ್ಲಈ  ಟ್ರೋಫಿ: ಯಾಕೆ ಗೊತ್ತೇ?

ಇಂಡೋ-ಆಸೀಸ್ ಫೈನಲ್

ವಿಶ್ವಕಪ್ 2023 ರ ಫೈನಲ್ ಪಂದ್ಯವು ಇಂದು ಭಾರತ-ಆಸ್ಟ್ರೇಲಿಯಾ ನಡುವೆ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ.

ವಿಶ್ವಕಪ್ ಟ್ರೋಫಿ

ಫೈನಲ್‌ನಲ್ಲಿ ಗೆಲ್ಲುವ ತಂಡವು ಪ್ರಸಿದ್ಧ ವಿಶ್ವಕಪ್ ಟ್ರೋಫಿಯನ್ನು ಪಡೆಯುತ್ತದೆ. ಎಲ್ಲ ತಂಡಗಳು ಈ ಟ್ರೋಫಿಗಾಗಿಯೇ ಸೆಣೆಸಾಟ ನಡೆಸುವುದು. ಆದರೆ ಈ ಟ್ರೋಫಿಯ ವಿಶೇಷತೆ ಗೊತ್ತೇ?.

1999 ರಲ್ಲಿ ಆರಂಭ

ODI ವಿಶ್ವಕಪ್ 1975 ರಲ್ಲಿ ಪ್ರಾರಂಭವಾದರೂ, ಅಧಿಕೃತ ಟ್ರೋಫಿಯನ್ನು 1999 ರಲ್ಲಿ ರಚಿಸಲಾಯಿತು. ಅಂದರೆ 1975-1996 ರ ನಡುವೆ ನಡೆದ 6 ವಿಶ್ವಕಪ್‌ಗಳಲ್ಲಿ ವಿಭಿನ್ನ ವಿನ್ಯಾಸಗಳ ಟ್ರೋಫಿಗಳನ್ನು ಪ್ರಸ್ತುತಪಡಿಸಲಾಗಿದೆ.

ಗೆದ್ದವರಿಗಿಲ್ಲ ಟ್ರೋಫಿ

ವಿಶ್ವಕಪ್ ಗೆದ್ದಾಗ ನಿಜವಾದ ಟ್ರೋಫಿ ನೀಡಲಾಗುತ್ತದೆ. ಆದರೆ, ನಂತರ ಅದೇ ಮಾದರಿಯಲ್ಲಿ ವಿಜೇತ ತಂಡಕ್ಕೆ ಪ್ರತಿಕೃತಿ ಟ್ರೋಫಿ ನೀಡಲಾಗುವುದು. ಮೂಲ ಟ್ರೋಫಿಯು ಯುಎಇಯಲ್ಲಿರುವ ಐಸಿಸಿ ಪ್ರಧಾನ ಕಚೇರಿಗೆ ಮರಳುತ್ತದೆ.

ಭಾರತ ಗೆದ್ದರೆ

ಇಂದು ವಿಶ್ವಕಪ್'ನಲ್ಲಿ ಭಾರತ ಗೆದ್ದರೂ ಮೊದಲಿಗೆ ನಿಜವಾದ ಟ್ರೋಫಿ ನೀಡಲಾಗುತ್ತದೆ. ನಂತರ ಸಿಗುವುದು ಪ್ರತಿಕೃತಿ ಟ್ರೋಫಿ.

ವಿನ್ಯಾಸ

ಪ್ರಸ್ತುತ ಕ್ರಿಕೆಟ್ ವಿಶ್ವಕಪ್ ಟ್ರೋಫಿಯನ್ನು ಲಂಡನ್‌ನ ಗೆರಾರ್ಡ್ ಕಂಪನಿ ವಿನ್ಯಾಸಗೊಳಿಸಿದೆ. 65 ಸೆಂ. ಎತ್ತರವಿರುದ ಈ ಟ್ರೋಫಿಯನ್ನು ಚಿನ್ನ-ಬೆಳ್ಳಿಯಿಂದ ಮಾಡಲಾಗಿದೆ.

ವಿಶೇಷತೆ?

ಟ್ರೋಫಿಯಲ್ಲಿರುವ ಚಿನ್ನದ ಚೆಂಡು ಭೂಮಿಯನ್ನು, ಚೆಂಡನ್ನು ಬೆಂಬಲಿಸುವ ಮೂರು ಸ್ಟಂಪ್‌ಗಳು ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಅನ್ನು ಸಂಕೇತಿಸುತ್ತವೆ.

ಟ್ರೋಫಿ ಮೌಲ್ಯ?

ಜಗತ್ತಿನ ವಿವಿಧ ಕ್ರೀಡೆಗಳ ಟ್ರೋಫಿಗಳ ಬಗ್ಗೆ ಮಾಹಿತಿ ನೀಡುವ ವೆಬ್'ಸೈಟ್ jacksontrophies.com ಪ್ರಕಾರ ಇದರ ಬೆಲೆ 30 ಸಾವಿರ ಡಾಲರ್ ಅಂದರೆ ಸುಮಾರು 25 ಲಕ್ಷ ರೂಪಾಯಿ.

IND vs AUS ಫೈನಲ್​ಗೆ ಮಳೆ ಕಾಟ?: ಅಹ್ಮದಾಬಾದ್ ಹವಾಮಾನ ಹೇಗಿದೆ?